ತುಂಬಿದ ವರದಾನದಿ: ರೇಣುಕಾ ಬಾಗಿನ ಅಪರ್ಿಣೆ

ಲೋಕದರ್ಶನವರದಿ

ಶಿಗ್ಗಾವಿ : ಶಿಗ್ಗಾವಿ, ಬಂಕಾಪುರ ಪಟ್ಟಣಕ್ಕೆ ಕುಡಿಯಲು ಹೋಳೆಯ ನೀರು ಸರಬರಾಜು ಮಾಡುವ ವರದಾನದಿ ಜಾಕ್ವೇಲ್ ತುಂಬಿದ್ದು, ಅದಕ್ಕೆ ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅಪರ್ಿಸಿದರು.

     ನಂತರ ಮಾತನಾಡಿದ ಅವರು ಜುನ್ ತಿಂಗಳು ದಾಟಿ ಜುಲೈ ತಿಂಗಳು ಪ್ರಾರಂಭವಾದರು ಮಳೆ ಬಾರದೇ ಇರುವದರಿಂದ ರೈತರು ಕಂಗಾಲಾಗಿದ್ದರು. 

  ಸುಮಾರು 10 ದಿನಗಳಿಂದ ಸತತ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ವರ್ಷವಿಡಿ ಜನ, ಜಾನುವಾರಗಳಿಗೆ ಕುಡಿಯಲು ನೀರು ಸಂಗ್ರಹವಾಗುವ ಮುನ್ಸೂಚನೆ ದೊರೆತಂತಾಗಿದೆ ಎಂದು ಹರ್ಷ ವ್ಯಕ್ತಪಡೆಸಿದರು.

      ಕೆರೆ, ಹೊಂಡಗಳು ರೈತಾಪಿಜನರ ಜೀವನಾಡಿಗಳಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯಕರ್ತವ್ಯವಾಗಿದೆ. ಆ ದಿಶೆಯಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಕೆರೆ, ಕಟ್ಟೆ, ಹೊಂಡಗಳನ್ನು ರಕ್ಷಣೆಮಾಡಿ ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವದಾಗಿ ಭರವಸೆ ನೀಡಿದರು.

     ಪುರಸಭೆ ಸಿಬ್ಬಂದಿಗಳಾದ ಪರಶುರಾಮ ಹೆಬ್ಬಾರ, ನಿರ್ಮಲಾ ಗುಡಿಮನಿ, ಮಂಜುನಾಥ ಪುಟ್ಟಣ್ಣವರ, ಇಂಜಿನಿಯರಾದ ಆರ್.ಆರ್.ಚವ್ಹಾಣ, ಬಿ.ಎಸ್.ಗಿಡ್ಡಣ್ಣವರ, ಬಿ.ಎಚ್.ಕೊರಕಲ್ಲ, ಬಸವರಾಜ ಗಡಾದ, ವಿ.ಎಂ.ಹಿರೇಮಠ, ಮಲ್ಲಮ್ಮ ಹರವಿ, ನಿಂಗಪ್ಪ ಹೋಸಮನಿ,  ಜಗದೀಶ ದೊಡ್ಡಗೌಡ್ರ, ಮಾಂತೇಶ ಕುಡಲ, ಹನಿಫ್ ಗದಗಕರ ಸೇರಿದಂತೆ ನೀರು ಸರಬರಾಜು ಸಿಬ್ಬಂದಿಗಳು ಉಪಸ್ಥಿತರಿದ್ದರು.