ಖ್ಯಾತ ತಬಲಾವಾದಕ ಪಂ. ಶಂಕ್ರ್ಪ ಭೀಮಾಬಾಯಿ ಹೂಗಾರ 41ನೇ ಪುಣ್ಯಸ್ಮರಣೋತ್ಸವ
Renowned tabla player Pt. Sankrpa Bhimabai Hugara 41st Commemoration
ಲೋಕದರ್ಶನ ವರದಿ
ಧಾರವಾಡ 15 : ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಅನೇಕ ಸಂಗೀತ ದಿಗ್ಗಜರನ್ನು ನೀಡಿದೆ. ಅದರ ಮುಂದುವರಿಕೆಯಾಗಿ ಧಾರವಾಡದಲ್ಲಿ ಕಲೆ, ಸಾಹಿತ್ಯ, ಸಂಗೀತ ನೃತ್ಯವು ಅವ್ಯಾಹತವಾಗಿ ನಡೆದುಕೊಂಡು ಹೋಗುತ್ತಿರುವುದು ಶ್ಲಾಘನೀಯವಾದುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅಭಿಪ್ರಾಯ ಪಟ್ಟರು. ತಬಲಾವಾದಕ ಪಂ. ಶಂಕ್ರ್ಪ ಭೀಮಾಬಾಯಿ ಹೂಗಾರ ಸಂಗೀತ ಸಂಘವು ದಿನಾಂಕ: 13.03.2026ರಂದು ಸಂಜೆ ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಏರಿ್ಡಸಿದ್ದ ಖ್ಯಾತ ತಬಲಾವಾದಕ ಪಂ. ಶಂಕ್ರ್ಪ ಮತ್ತು ಭೀಮಾಬಾಯಿ ಹೂಗಾರ ಇವರ 41ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಮಾರ ಬೆಕ್ಕೇರಿ ಮಾತನಾಡುತ್ತ ಪಂ.ಸಾತಲಿಂಗ ದೇಸಾಯಿ ಕಲ್ಲೂರ ಅವರ ಇಡೀ ಕುಟುಂಬವೇ ಸಂಗೀತಕ್ಕೆ ಮೀಸಲಾಗಿದೆ. ಧಾರವಾಡದ ಸಂಗೀತ ಪರಂಪರೆಗೆ ಅವರ ಕೊಡುಗೆ ಅಮೋಘವಾದುದು. ಇಂಥ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಸರ್ಕಾರ ಇಲಾಖೆಯ ಮೂಲಕ ಪೋಷಿಸುತ್ತ ಬಂದಿದೆ ಎಂದರು.
ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ನಾವಿಂದು ತಂದೆ-ತಾಯಿಗಳನ್ನು ಅನಾಥಾಶ್ರಮದಲ್ಲಿಟ್ಟು ನೋಡುತ್ತಿರುವ ಅನೇಕ ಮಕ್ಕಳನ್ನು ನೋಡುತ್ತಿರುವ ಸಂದರ್ಭದಲ್ಲಿ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ ಅವರು ತಮ್ಮ ತಂದೆ-ತಾಯಿಗಳಾದ ಪಂ. ಶಂಕ್ರ್ಪ ಮತ್ತು ಭೀಮಾಬಾಯಿ ಹೂಗಾರ ಇವರ ಪುಣ್ಯಸ್ಮರಣೋತ್ಸವವನ್ನು ನಿರಂತರವಾಗಿ 41 ವರ್ಷಗಳಿಂದ ಏರಿ್ಡಸುತ್ತ ಬಂದಿರುವುದು ಶ್ಲಾಘನೀಯವಾದುದು ಎಂದರು. ಹಿರಿಯ ನ್ಯಾಯವಾದಿ ಡಾ.ಉದಯಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಧಾರವಾಡ ಮರಾಠಾ ವಿದ್ಯಾಪ್ರಸಾರಕ ಮಂಡಳಿ ಕಾರ್ಯದರ್ಶಿ ರಾಜು ಬಿರ್ಜೆನವರ ಇವರನ್ನು ಸನ್ಮಾನಿಸಲಾಯಿತು.
ನಂತರ ಜರುಗಿದ ಸಂಗೀತೋತ್ಸವದಲ್ಲಿ ಧಾರವಾಡದ ಖ್ಯಾತ ಹಿರಿಯ ಗಾಯಕ ಪಂ.ಸೋಮನಾಥ ಮರಡೂರ ಅವರ ಹಿಂದೂಸ್ಥಾನಿ ಗಾಯನದಲ್ಲಿ ರಾಗ ಹಮೀರ, ಕೇದಾರ ಹಾಗೂ ಶಾನ್ ಕಾನಡ ಪ್ರಸ್ತುತ ಪಡಿಸಿದರು. ಸಹ ಗಾಯನದಲ್ಲಿ ಪಂ.ಕುಮಾರ ಮರಡೂರ, ಡಾ.ಕೃಷ್ಣ ಸುತಾರ, ಬಸವರಾಜ ಹೂಗಾರ ಇದ್ದರು. ಮೈಸೂರಿನ ಸಚಿನ್ ಹಂಪೆ ಅವರ ಸರೋದ್ ವಾದನದಲ್ಲಿ ರಾಗ ಜೋಗೇಶ್ವರಿ ಪ್ರಸ್ತುತ ಪಡಿಸಿದರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ತಬಲಾದಲ್ಲಿ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಮಳೇಮಲ್ಲೇಶ ಹೂಗಾರ, ಸಂವಾದಿನಿಯಲ್ಲಿ ಬಸವರಾಜ ಹಿರೇಮಠ ಸಾಥ್ ಸಂಗತ್ ನೀಡಿದರು. ಮಾಯಾ ರಾಮನ್ ನಿರೂಪಿಸಿದರು. ಕುಮಾರ ಅಗಡಿ ಸ್ವಾಗತಿಸಿದರು. ಉಮೇಶ ಮುನವಳ್ಳಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 