ಖ್ಯಾತ ತಬಲಾವಾದಕ ಪಂ. ಶಂಕ್ರ್ಪ ಮತ್ತು ಭೀಮಾಬಾಯಿ ಹೂಗಾರ ಇವರ 40ನೇ ಪುಣ್ಯಸ್ಮರಣೋತ್ಸವ
ಧಾರವಾಡ 01: ತಬಲಾವಾದಕ ಪಂ. ಶಂಕ್ರ್ಪ ಭೀಮಾಬಾಯಿ ಹೂಗಾರ ಸಂಗೀತ ಸಂಘವು ದಿನಾಂಕ: 04 ರಂದು ಸಂಜೆ 5.00 ಗಂಟೆಗೆ ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಖ್ಯಾತ ತಬಲಾವಾದಕ ಪಂ. ಶಂಕ್ರ್ಪ ಮತ್ತು ಭೀಮಾಬಾಯಿ ಹೂಗಾರ ಇವರ 40ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಏರಿ್ಡಸಲಾಗಿದೆ.
ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿರಿಯ ನ್ಯಾಯವಾದಿ ಡಾ.ಉದಯಕುಮಾರ ದೇಸಾಯಿ, ರಂಗಭೂಮಿ ಕಲಾವಿದ ವೀರಣ್ಣ ಪತ್ತಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ಆಕಾಶವಾಣಿ ನಿಲಯ ಕಲಾವಿದ ಪಂ. ಸಿದ್ಧಣ್ಣ ಹೂಗಾರ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಪಾಂಡುರಂಗ ಶ್ರೀನಿವಾಸ ಕಾವಿ ಇವರನ್ನು ಸನ್ಮಾನಿಸಲಾಗುವುದು.
ನಂತರ ಜರುಗುವ ಸಂಗೀತೋತ್ಸವದಲ್ಲಿ ಸೋಲಾಪುರದ ಖ್ಯಾತ ಸುಂದರಿವಾದಕ ಪಂ. ಭೀಮಣ್ಣ ಜಾಧವ ಅವರಿಂದ ಸುಂದರಿವಾದನ, ಸಹವಾದನದಲ್ಲಿ ಗುರುನಾಥ ಜಾಧವ, ಗೋರಖನಾಥ ಜಾಧವ, ಮಯೂರೇಶ ಜಾಧವ, ವೆಂಕಟೇಶಕುಮಾರ ಜಾಧವ ಇರುವರು.
ಧಾರವಾಡದ ಮೋಹಸಿನ್ ಖಾನ್ ಅವರಿಂದ ಸಿತಾರವಾದನ, ಸದಾಶಿವ ಐಹೊಳೆ ಅವರಿಂದ ಗಾಯನ ಪ್ರಸ್ತುತ ಪಡಿಸುವರು. ತಬಲಾದಲ್ಲಿ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ರಘುನಂದನ ಗೋಪಾಲ ಹಾಗೂ ಸಂವಾದಿನಿಯಲ್ಲಿ ವಿನೋದ ಪಾಟೀಲ ಸಾಥ್ ಸಂಗತ ನೀಡುವರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಕಾರ್ಯಕ್ರಮ ಜರುಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.