ಪ್ರಯಾಗರಾಜ್ ಮರುನಾಮಕರಣ: ಯೋಗಿಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ,  ಜ 20, ಅಲಹಾಬಾದ್ನ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿದ್ದನ್ನು  ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ  ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ್ ಸರ್ಕಾರಕ್ಕೆ ನೋಟಿಸ್ ನೀಡಿದೆ.ಆದಿತ್ಯನಾಥ್ ಸರ್ಕಾರ  ಅಲಹಾಬಾದ್ ಹೆಸರನ್ನು 2018 ರಲ್ಲಿ ಪ್ರಯಾಗರಾಜ್ ಎಂದು ಮರು ನಾಮಕರಣ  ಮಾಡಿತ್ತು. ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ವಿಚಾರಣೆ ನಂತರ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.ರೈಲ್ವೆ ನಿಲ್ದಾಣಗಳು, ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಇತರ ಸಂಸ್ಥೆಗಳ ಹೆಸರನ್ನು ಕೇಂದ್ರ ಸರ್ಕಾರವು ನಿಯಂತ್ರಿಸುವುದರಿಂದ ಅವುಗಳನ್ನು ಬದಲಾಯಿಸಲು ರಾಜ್ಯ ಸರ್ಕಾರ ಕ್ಕೆ ಅಧಿಕಾರವಿಲ್ಲ  ಎಂದೂ  ಅರ್ಜಿದಾರರು ವಾದ ಮಾಡಿದ್ದಾರೆ.  500 ವರ್ಷಗಳ ಹಿಂದೆ ಮೊಘಲ್ ಚಕ್ರವರ್ತಿ ಅಕ್ಬರ್  ತಪ್ಪು ಮಾಡಿದ್ದು,  ಅದನ್ನು ಸರಿಪಡಿಸುವುದು ನಮ್ಮ ಸರ್ಕಾರದ   ಉದ್ದೇಶವಾಗಿದೆ,  ಐತಿಹಾಸಿಕ ನಗರವಾಗಿರುವ ಅಲಹಾಬಾದ್ ನ ಹೆಸರನ್ನು ಪ್ರಯಾಗರಾಜ್ ಎಂದು ಯುಪಿ ಸರ್ಕಾರ ಬದಲಾಯಿಸಿ, ತನ್ನ ನಿಲುವು ಸಮರ್ಥನೆ ಮಾಡಿಕೊಂಡಿತ್ತು.