ಇಂಡಿಯಾ ಬದಲು ‘ಭಾರತ’ ಎಂದು ಮರು ನಾಮಕರಣ; ಆರ್ಜಿ ವಜಾ ಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ, ಜೂನ್ ೩, ಭಾರತ ಪುರಾತನ ಹೆಸರು. ಎಲ್ಲಾ ಅಧಿಕೃತ ದಾಖಲೆಗಳಲ್ಲಿ ‘ಇಂಡಿಯಾ’  ಬದಲು ಭಾರತ ಎಂದು ಮರು ನಾಮಕರಣಗೊಳಿಸಲು ಕೇಂದ್ರ ಸರ್ಕಾರಕ್ಕೆ  ಆದೇಶಿಸಬೇಕು ಎಂದು  ಸಲ್ಲಿಸಲಾಗಿದ್ದ  ಆರ್ಜಿಯನ್ನು  ಸುಪ್ರೀಂ ಕೋರ್ಟ್ ಇಂದು  ವಿಚಾರಣೆ ನಡೆಸಿತು.ವಿಚಾರಣೆಯ ವೇಳೆ  ಸುಪ್ರೀಂ ಕೋರ್ಟ್  ಮುಖ್ಯನ್ಯಾಯಮೂರ್ತಿ ಎಸ್ .ಎ. ಬೊಬ್ಡೆ  ಕುತೂಹಲಕರ  ಹೇಳಿಕೆ  ನೀಡಿದ್ದು,   ಸಂವಿಧಾನದಲ್ಲಿ   ‘ಇಂಡಿಯಾ ದಟೀಸ್  ಭಾರತ್’  ಎಂದು  ಉಲ್ಲೇಖಿಸಲಾಗಿದೆ ಎಂದು   ಆರ್ಜಿದಾರರಿಗೆ  ತಿಳಿಸಿದರು.  ಈ ವಿಷಯದಲ್ಲಿ   ಬೇಕಿದ್ದರೆ   ಕೇಂದ್ರ ಸರ್ಕಾರದ ಬಳಿ ಮೊರೆ  ಹೋಗಬಹುದು ಎಂದು ಸೂಚಿಸಿದರು. ಸಂಬಂಧಪಟ್ಟ  ಸಚಿವಾಲಯಕ್ಕೆ  ಮನವಿ ಸಲ್ಲಿಸಬಹುದು ಎಂದು ಸೂಚನೆ ನೀಡಿ  ಆರ್ಜಿಯನ್ನು  ವಜಾಗೊಳಿಸಿದರು.

ಇಂಡಿಯಾ  ಹೆಸರನ್ನು ಭಾರತ ಇಲ್ಲವೇ ಹಿಂದೂಸ್ಥಾನ್  ಎಂದು ಬದಲಾಯಿಸುವುದರಿಂದ  ದೇಶದ ನಾಗರೀಕರಲ್ಲಿ ಆತ್ಮ ಗೌರವ, ರಾಷ್ಟ್ರೀಯ ಭಾವನೆ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ದೆಹಲಿಗೆ ಸೇರಿದ ಆರ್ಜಿದಾರರು ತಮ್ಮ ಆರ್ಜಿಯಲ್ಲಿ ವಿವರಿಸಿದ್ದರು. ದೇಶದ ಹೆಸರು ಬದಲಾಯಿಸಲು  ಸಂವಿಧಾನದ  ಕಲಂ ೧ಕ್ಕೆ ತಿದ್ದುಪಡಿ ತರುವಂತೆ  ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ  ಕೋರಿದ್ದರು. ಇಂಡಿಯಾ ಎಂಬುದು ಆಂಗ್ಲ ಪದವಾಗಿದ್ದು,  ಅದನ್ನು  ಸ್ವದೇಶಿ  ಭಾಷೆಯಲ್ಲಿರಿಸಿದರೆ  ದೇಶದ ಜನರ  ಹಿರಿಮೆಗೆ  ಕಾರಣವಾಗಲಿದೆ ಎಂದು ಆರ್ಜಿದಾರರು ಹೇಳಿದ್ದಾರೆ. ೧೯೪೮ರಲ್ಲಿಯೂ ಭಾರತ  ಇಲ್ಲವೇ ಹಿಂದೂಸ್ಥಾನ  ಎರಡರಲ್ಲಿ ಒಂದು ಹೆಸರು ಇಡಬೇಕು ಎಂಬ ವಾದ ಬಂದಿತ್ತು ಎಂದು   ಆರ್ಜಿದಾರು   ಆರ್ಜಿಯಲ್ಲಿ  ಉಲ್ಲೇಖಿಸಿದ್ದಾರೆ.