ನಿಮ್ಮ ಪ್ರಾರ್ಥಯಲ್ಲಿ ನಮ್ಮನ್ನು ನೆನಪಿಸಿಕೊಳ್ಳಿ: ಮುಷ್ತಾಪಿಜುತ್ ವಿವಾದಿತ ಟ್ವೀಟ್

ಢಾಕ, ಜ 23, ಪಾಕಿಸ್ತಾನಕ್ಕೆ ತೆರಳುವ ಮುನ್ನ ಬಾಂಗ್ಲಾದೇಶ ತಂಡದ ಹಿರಿಯ ವೇಗಿ ಮುಸ್ತಾಪಿಜುರ್ ರಹಮನ್ ಮಾಡಿರುವ ರಹಸ್ಯ ಟ್ವೀಟ್ ಎಲ್ಲರ ಗಮನ ಸೆಳೆದಿದೆ.ಬುಧವಾರ ಸಂಜೆ ಪಾಕಿಸ್ತಾನಕ್ಕೆ ತರಳುವ ಮುನ್ನ ಬಾಂಗ್ಲಾದೇಶ ತಂಡದ ಸಹ ಆಟಗಾರರೊಂದಿಗಿನ ಸೆಲ್ಫಿ ಪೋಟೊವನ್ನು ತಮ್ಮ ಅಧಿಕೃತ ಟ್ವಿಟರ್‌ ನಲ್ಲಿ ಪೋಸ್ಟ್ ಮಾಡಿರುವ ರಹಮನ್, "ತಂಡ ಪಾಕಿಸ್ತಾನಕ್ಕೆ ತೆರಳುತ್ತಿದ್ದು, ನಿಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ನೆನಪಿಡಿ," ಎಂದು ಶೀರ್ಷಿಕೆ ನೀಡಿದ್ದಾರೆ. ಪಾಕಿಸ್ತಾನ ಪ್ರವಾಸಕ್ಕೆ ಬಾಂಗ್ಲಾದೇಶ ಆರಂಭದಲ್ಲಿ ನಿರಾಕರಿಸಿತ್ತು. ಎರಡೂ ತಂಡಗಳ ಅಧಿಕಾರಿಗಳು ದುಬೈ ನಲ್ಲಿ ಭೆಟಿಯಾಗಿದ್ದವು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹಲವು ಸುತ್ತಿನಲ್ಲಿ ಮಾತುಕತೆ ನಡೆಸಿದ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪ್ರವಾಸಕ್ಕೆ ಒಪ್ಪಿಗೆ ಸೂಚಿಸಿತ್ತು.ಬಾಂಗ್ಲಾದೇಶ ಮೂರು ಟಿ-20, ಎರಡು ಟೆಸ್ಟ್ ಹಾಗೂ ಒಂದು ಏಕದಿನ ಪಂದ್ಯಗಳಾಡಲಿದೆ. ಜನವರಿ ಯಿಂದ ಏಪ್ರಿಲ್ ನಡುವೆ ಸರಣಿಗಳು ನಡೆಯಲಿವೆ. ಜನವರಿ 24 ರಿಂದ 27ರವರೆಗೆ ಟಿ-20 ಸರಣಿ ಹಾಗೂ ಫೆಬ್ರುವರಿ 7 ರಿಂದ 11ರವರೆಗೆ ಮೊದಲನೇ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಬಾಂಗ್ಲಾ ತವರಿಗೆ ಮರಳಲಿದೆ.ನಂತರ, ಏಪ್ರಿಲ್ ನಲ್ಲಿ ಮತ್ತೇ ಬಾಂಗ್ಲಾದೇಶ, ಪಾಕ್ ಪ್ರವಾಸ ಬೆಳೆಸಿ ಏಕೈಕ ಏಕದಿನ ಪಂದ್ಯವನ್ನು ಏ. 3 ರಂದು ಆಡಲಿದೆ. ಬಳಿಕ, ಏ. 5 ರಿಂದ 9ರವರೆಗೆ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.ವೈಯಕ್ತಿಕ ಕಾರಣಗಳಿಂದ ಹಿರಿಯ ಆಟಗಾರ ಮುಷ್ಫಿಕರ್ ರಹೀಮ್ ಅವರು ಬಾಂಗ್ಲಾದೇಶ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಇದರ ನಡುವೆ ಐವರು ಒಳಗೊಂಡ ಬಾಂಗ್ಲಾದೇಶ ತಂಡದ ಕೋಚಿಂಗ್ ಸಿಬ್ಬಂದಿ ಕೂಡ ಪಾಕ್‌ ಪ್ರವಾಸದಿಂದ ಹೊರ ನಡೆದಿದ್ದಾರೆ.

ತಂಡಗಳು: ಬಾಂಗ್ಲಾದೇಶ: ಮಹ್ಮುದುಲ್ಲಾ(ನಾಯಕ), ತಮೀಮ್ ಇಕ್ಬಾಲ್, ಸೌಮ್ಯಾ ಸರ್ಕಾರ್, ನೈಮ್ ಶೇಖ್, ನಜ್ಮುಲ್ ಹುಸೇನ್, ಲಿಟಾನ್ ದಾಸ್, ಎಂ.ಡಿ ಮಿಥುನ್, ಅತಿಫ್ ಹೊಸೇನ್, ಮೆಹಡಿ ಹಸನ್, ಅಮಿನುಲ್ ಇಸ್ಲಾಮ್, ಮುಸ್ತಾಪಿಜುರ್ ರಹಮನ್, ಶೆಫಿಯುಲ್ ಇಸ್ಲಾಮ್, ಅಲ್-ಅಮಿನ್ ಹೊಸೈನ್, ರುಬೆಲ್ ಹೊಸೇನ್, ಹಸನ್ ಮಹ್ಮುದ್.

ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಅಹ್ಸಾನ್ ಬಟ್, ಹ್ಯಾರಿಸ್ ರಾವುಫ್, ಇಫ್ತಿಕರ್ ಅಹಮದ್, ಇಮಾದ್ ವಾಸೀಮ್, ಖುಸ್ದಿಲ್ ಶಾ, ಮೊಹಮ್ಮದ್‌ ಹಫೀಜ್, ಮೊಹಮ್ಮದ್ ಹೊಸ್ನೈನ್, ಮೊಹಮ್ಮದ್ ರಿಜ್ವಾನ್ (ವಿ.ಕೀ), ಮುಸಾ ಖಾನ್, ಶದಾಬ್ ಖಾನ್, ಶಹೀನ್ ಶಾ ಅಫ್ರಿದಿ, ಶೊಯೆಬ್ ಮಲಿಕ್, ಉಸ್ಮಾನ್ ಖಾದಿರ್.