ನೆಮ್ಮದಿ ಕೇಂದ್ರ ಮತ್ತು ತಲಾಟಿ ಕಚೇರಿ ಸ್ಥಳಾಂತರ
Relocation of the Peace Center and Talati Office
ವರದಿ: ಹಣಮಂತ ನಾವಿ
ಮಹಾಲಿಂಗಪುರ 25: ಗಾಂಧಿ ವೃತ್ತದಲ್ಲಿರುವ ನೆಮ್ಮದಿ ಕೇಂದ್ರ ಮತ್ತು ತಲಾಟಿ ಕಚೇರಿ ಗಳ ಮೇಲ್ಚಾವಣಿಗಳು ಶಿಥಿಲಗೊಂಡು, ಅವುಗಳ ಮೂಲಕ ಮಳೆ ನೀರು ಕಚೇರಿ ತುಂಬಾ ಹರಡಿ ಆಡಳಿತಾತ್ಮಕವಾಗಿ ಸಮಸ್ಯೆ ಉಂಟು ಮಾಡಿದ್ದವು.
ಇವುಗಳ ದುರುಸ್ಥಿ ಅಥವಾ ಬೇರೆಡೆ ಸ್ಥಳಾಂತರ ಮಾಡಲಿಕ್ಕೆ ಸಾರ್ವಜನಿಕರು ಮತ್ತು ಸಮ್ಮಂಧಿಸಿದ ಅಧಿಕಾರಿಗಳು ಪದೇ ಪದೇ ಆಡಳಿತಕ್ಕೆ ಒತ್ತಾಯಪಡಿಸುತ್ತ ಬಂದಿದ್ದರೂ ಸಹ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿತ್ತು.
ಸಾರ್ವಜನಿಕರ ಅಹವಾಲು ವಿನಂತಿಗೆ ''ಲೋಕದರ್ಶನ" ದಿನಪತ್ರಿಕೆಯಲ್ಲಿ ಆಗಷ್ಟ 19 ರಂದು ಸಮಸ್ಯೆಗಳ ಕುರಿತು ವರದಿ ಪ್ರಕಟಿಸಿತ್ತು.
ಹಲವಾರು ಬಾರಿ ಸಾರ್ವಜನಿಕರು ಮತ್ತು ಪತ್ರಿಕೆಗಳು ಮಳೆಯಿಂದ ಕಚೇರಿಗಳ ಕೊಠಡಿಗಳಲ್ಲಿ ಆಗುವ ಆವಾಂತರದ ಬಗ್ಗೆ ತಾಲೂಕಾಢಳಿತ ಮತ್ತು ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಕಾರಣಾಂತರಗಳಿಂದಲೋ ಏನೋ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಸಾಧ್ಯವಾಗಿತ್ತು.
ಈಗ ಕಾಲ ಕೂಡಿ ಬಂದಿದ್ದು ಮೇಲ್ಕಾಣಿಸಿದ ಎರಡೂ ಕಚೇರಿಗಳನ್ನು ಬಸ್ ನಿಲ್ದಾಣ ಹತ್ತಿರ ಚೆನ್ನಮ್ಮ ವೃತ್ತದಲ್ಲಿರುವ ಪುರಸಭೆ ಎರಡನೇಯ ಅಂತಸ್ತಿನ ಮಳಿಗೆಗಳಿಗೆ ಸ್ಥಳಾಂತರಿಸಿ ಸುಗಮ ಕೆಲಸಕ್ಕೆ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 