ಧಾರ್ಮಿಕ ಕಾರ್ಯಕ್ರಮಗಳಿಂದ ಮನುಷ್ಯನಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ

Religious programs bring peace and tranquility to people.

ಧಾರ್ಮಿಕ ಕಾರ್ಯಕ್ರಮಗಳಿಂದ ಮನುಷ್ಯನಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ  

 ಶಿಗ್ಗಾವಿ  13: ಧಾರ್ಮಿಕ ಕಾರ್ಯಕ್ರಮಗಳಿಂದ ಮನುಷ್ಯನಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದು ಲಿಂಗಸೂರ ಶಾಸಕ ಮಾನಪ್ಪ ವಜ್ಜಲ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ವನಹಳ್ಳಿ ಪ್ಲಾಟ್‌ನಲ್ಲಿ   ಆಂಜನೇಯ ದೇವಸ್ಥಾನ ಸೇವಾ ಕಮೀಟಿಯಿಂದ    ಆಂಜನೇಯ ದೇವರ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ನೂತನ ದೇವಸ್ಥಾನ ಲೋಕಾರೆ​‍್ಣ ಕಾರ್ಯಕ್ರಮ, ಪ್ರಥಮ ಹನುಮ ಜಯಂತಿ ಹಾಗೂ ಧರ್ಮ ಸಭೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ದೇವರ ಸ್ಮರಣೆ ಮಾಡದಿದ್ದರೆ ಶಾಂತಿ ನೆಮ್ಮದಿ ಲಭಿಸದು, ಆಂಜನೇಯ ಸ್ವಾಮಿ ಶಕ್ತಿಯಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೆನೆ, ನನಗೆ ಬಡತನವೇ ಸಾಧನೆಗೆ ದಾರಿಯಾಗಿದೆ, ನಮ್ಮ ಕ್ಷೇತ್ರದಲ್ಲಿ ಸುಮಾರು ದೇವಸ್ಥಾನಗಳನ್ನು ಕಟ್ಟಿಸಿದ್ದೇವೆ, ನಾಡಿನಲ್ಲಿ ಧಾನ ಧರ್ಮದ ಕಾರ್ಯಗಳು ನಡೆಯಬೇಕು, ಶರಣರ ತತ್ವಗಳನ್ನು ಅಳವಡಿಸಿಕೊಳ್ಳಬೇಕು, ರಾಮನ ಸ್ಮರಣೆ ಮಾಡಬೇಕು, ಇಂದು ನಮ್ಮ ಸಮಾಜ ಎಲ್ಲ ರಂಗಗಳಲ್ಲಿ ಮುಂದುವರೆಯುತ್ತಿದೆ, ನಮ್ಮ ಸಮಾಜದ ಗುರುಗಳು ವಿದ್ಯ, ಅನ್ನ ದಾನದ ಜೊತೆ  ಸಮಾಜಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದರು.  ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ  ಎಸ್ ರವಿಕುಮಾರ ಮಾತನಾಡಿ ದೇವಸ್ಥಾನದ ಜೊತೆಗೆ ಶಾಲೆಗಳನ್ನು ನಿರ್ಮಾಣ ಮಾಡಬೇಕು, ಭಯ, ಶಿಸ್ತು, ಸಂಸ್ಕೃತಿಯನ್ನು ಬೆಳಿಸಿಕೊಳ್ಳಬೇಕು, ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು. ಭೋವಿ ಸಮಾಜದ ಹಾವೇರಿ ಜಿಲ್ಲಾಧ್ಯಕ್ಷ ರವಿ ಪೂಜಾರ ಮಾತನಾಡಿ ನಾವು ದೇವಸ್ಥಾನಕ್ಕೆ ತೆರಳುವಾಗ ತೆಗೆದುಕೊಂಡ ಹೋದ ಹಣ್ಣು, ಕಾಯಿ ದರ್ಶನ ಪಡೆದ ನಂತರ ಪ್ರಸಾದವಾಗಿ ಬರುವಂತೆ ನಮ್ಮಲ್ಲಿಯ ದುರ್ಗುಣಗಳನ್ನ ತೊರೆದು ಉತ್ತಮ ಮನುಷ್ಯನಾಗಬೇಕು ಎಂದರು. ಆಂಜನೇಯ ದೇವಸ್ಥಾನ ಸೇವಾ ಕಮೀಟಿಯ ಗೌರವಾಧ್ಯಕ್ಷ ಅರ್ಜುನ ಹಂಚಿನಮನಿ ಮಾತನಾಡಿದರು.   ಗಡಿ ಪ್ರದೇಶಾಭಿವೃದ್ದಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಮಾನ ಅಪಮಾನಗಳನ್ನು ದೇವರ ಪಾದಕ್ಕೆ ಹಾಕಿ ಬದುಕು ಸಾಗಿಸಬೇಕು, ಹನುಮನ ಸ್ಮರಣೆಯಿಂದ ಕಷ್ಟಗಳು ದೂರಾಗುತ್ತವೆ, ನಾಡಿನಲ್ಲಿ ಧರ್ಮ, ಧರ್ಮ ಕಾರ್ಯಗಳು ನಡೆಯಬೇಕು ಎಂದರು. ಬೆಂಗಳೂರ ಎಸ್‌ಸಿ ಎಸ್‌ಟಿ ದೌಜ್ರ್ಯನ್ಯ ತಡೆ ನಿರ್ದೆಶಕ ಮುನಿಯಪ್ಪ ದೊಡ್ಡಬಳ್ಳಾಪೂರ, ಭೋವಿ ಅಭಿವೃದ್ದಿ ನಿಗಮದ ಎಸ್ ರವಿಕುಮಾರ, ಮುಖಂಡರಾದ ಕರೆಪ್ಪ ಕಟ್ಟಿಮನಿ, ಶ್ರೀಕಾಂತ ದುಂಡಿಗೌಡ್ರ,  ಸುಭಾಷ ಚೌವಾಣ, ತಿಮ್ಮಣ್ಣ ವಡ್ಡರ, ಶಿವಾನಂದ ಮ್ಯಾಗೇರಿ, ಉಮೇಶ ಗೌಳಿ, ಬಸವರಾಜ ಮಿರ್ಜಿ, ಗೀರಿಶ ಕುರಂದವಾಡ, ಹರೀಶ ಹಂಚಿನಮನಿ, ಆಂಜನೇಯ ದೇವಸ್ಥಾನ ಸೇವಾ ಕಮೀಟಿಯ ಅದ್ಯಕ್ಷ ಹನುಮಂತಪ್ಪ ಬಡ್ನಿ, ಉಪಾಧ್ಯಕ್ಷ ತಿಮ್ಮಣ್ಣಾ ವಡ್ಡರ, ಕಾರ್ಯದರ್ಶಿ ಶೆಟ್ಟೆಪ್ಪ ವಡ್ಡರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಸವರಾಜ ಗೊಬ್ಬಿ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಬಸವರಾಜ ಗೊಬ್ಬಿ ಪ್ರಾರ್ಥಿಸಿದರು, ಮಂಜುನಾಥ ಬಡ್ನಿ ಸ್ವಾಗತಿಸಿದರು, ಪ್ರೋ ಶಿವಪ್ರಸಾದ ಬಳಿಗಾರ ನಿರುಪಿಸಿದರು. ತಾಲೂಕಿನ ವನಹಳ್ಳಿ ಪ್ಲಾಟ್‌ನಲ್ಲಿ   ಆಂಜನೇಯ ದೇವಸ್ಥಾನ ಸೇವಾ ಕಮೀಟಿಯಿಂದ   ಆಂಜನೇಯ ದೇವರ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ನೂತನ ದೇವಸ್ಥಾನ ಲೋಕಾರೆ​‍್ಣ ಕಾರ್ಯಕ್ರಮ, ಪ್ರಥಮ ಹನುಮ ಜಯಂತಿ ಹಾಗೂ ಧರ್ಮ ಸಭೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಲಿಂಗಸೂರ ಶಾಸಕ ಮಾನಪ್ಪ ವಜ್ಜಲ ಉದ್ಘಾಟಿಸಿ ಮಾತನಾಡಿದರು.