ನಾಡಿನ ಸುಖ -ಶಾಂತಿಗಾಗಿ ಧಾರ್ಮಿಕ ಕಾರ್ಯಕ್ರಮಗಳು

Religious Religious programs for the happiness and peace of the countryprograms for the happiness an

ನಾಡಿನ ಸುಖ -ಶಾಂತಿಗಾಗಿ ಧಾರ್ಮಿಕ ಕಾರ್ಯಕ್ರಮಗಳು  

ಬ್ಯಾಡಗಿ  25 : ನಾಡಿನ ಸುಖ -ಶಾಂತಿಗಾಗಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಅವರು  ಪಟ್ಟಣದಲ್ಲಿ ಮಂಗಳವಾರ ರಾತ್ರಿ ಹರಳಯ್ಯ ಸಮಗಾರ ಸಮಾಜದ ವತಿಯಿಂದ  ಉಚ್ಚಂಗಮ್ಮದೇವಿ ದೇವಸ್ಥಾನದಲ್ಲಿ ನಡೆದ  ವಿಜೃಂಭಣೆ ಕಾರ್ತಿಕೋತ್ಸವಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದು ಸಮಾಜದಲ್ಲಿ ಅಶಾಂತಿ ತಾಂಡವಾಡುತ್ತಿದ್ದು, ಅಧರ್ಮದ ಕಾರ್ಯಗಳು ಹೆಚ್ಚು ನಡೆಯುತ್ತಿವೆ. ಇಂದು ಧರ್ಮ ಕಾರ್ಯಗಳ ಆಚರಣೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಕೆಂಚಮ್ಮದೇವಿಯ ದೇವಸ್ಥಾನ ಸಮಿತಿಯವರೆಲ್ಲ ಸೇರಿ ಸಡಗರ ಸಂಭ್ರಮದಿಂದ ಕಾರ್ತಿಕೋತ್ಸವ ಆಚರಿಸಿ ಭಕ್ತರಲ್ಲಿ ಧಾರ್ಮಿಕ ಭಾವನೆ ಮೂಡಿಸಿ ಅವರನ್ನು ಜಾಗೃತಿ ಮಾಡುತ್ತಿರುವುದು ಸಂತೋಷದ ಸಂಗತಿ ಆದ್ದರಿಂದ ಎಲ್ಲರೂ ಇಂತಹ ಕಾರ್ಯದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದರು. ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿದರು.ದೇವಸ್ಥಾನದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಸೌಕರ್ಯ ಹಾಗೂ ಸೌವಲತ್ತುಗಳನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರನ್ನು ಉಚ್ಚಂಗಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಪಟ್ಟಣ ಆಶ್ರಯ ಸಮಿತಿ ಅಧ್ಯಕ್ಷ  ಅಬ್ದುಲ್ ಮುನಾಫ್ ಎರೇಸಿಮಿ, ಶಂಕರ ಮುಂಡರಗಿ, ಮಾರುತಿ ಹಂಜಗಿ, ಚಂದ್ರಶೇಖರ ಗದಗಕರ, ಗೀರೀಶ ಇಂಡಿಮಠ ಸೇರಿದಂತೆ ಇತರರಿದ್ದರು.