ಲೋಕದರ್ಶನವರದಿ
ಬ್ಯಾಡಗಿ: ನೈತಿಕವಾಗಿ ಅಥಃಪಥನಕ್ಕಿಳಿಯುತ್ತಿರುವ ಪ್ರಸ್ತುತ ಸಮಾಜದ ಸುಧಾರಣೆಗೆ ಕಠಿಣ ಕಾನೂನಿಗಳಿಂತ ಧರ್ಮದ ಮಾರ್ಗಗಳು ಸಾಕಷ್ಟು ಬಲಶಾಲಿಯಾಗಲಿವೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ದಾನಮ್ಮದೇವಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹೂವಿನಶಿಗ್ಲಿ ವಿರಕ್ತಮಠದ ಮನಿಪ್ರ ಚನ್ನವೀರಶ್ರೀಗಳ ನಡೆಸಿಕೊಡಲಿರುವ 'ಶರಣ ಸಂಸ್ಕೃತಿ ದರ್ಶನ' ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.
ಇತ್ತೀಚಿನ ಯುವಕರು ಕಾನೂನನ್ನು ಗೌರವಿಸುವಂತಹ ವಾತಾವರಣವಿಲ್ಲ ಹೀಗಾಗಿ ಕತ್ತಲೆ ಜಗತ್ತಿನ ಕರಾಳ ಮುಖಗಳು ಆಗಿಂದಾಗ್ಗೆ ಪರಿಚಯವಾಗುತ್ತಿದೆ, ಇದರಿಂದ ಪ್ರಸ್ತುತ ಸಮಾಜ ನಿಯಂತ್ರಣಕ್ಕೆ ಸಿಗದೇ ತನಗರಿವಿಲ್ಲದಂತೆ ನೈತಿಕವಾಗಿ ದುರ್ಬಲಗೊಳ್ಳುತ್ತಿವೆ, ಹೀಗಾಗಿ ಯುವಕರಿಗೆ ಧರ್ಮ ಬೋಧನೆಗಳು ಅತೀ ಅವಶ್ಯವಾಗಿದ್ದು ಯಾವುದಾದರೂ ರೂಪದಲ್ಲಿ ಅವುಗಳನ್ನು ಒದಗಿಸಿಕೊಡಬೇಕಾಗಿದೆ ಎಂದರು.
ಹೇಳಿದ್ದನ್ನು ಕೇಳುವಷ್ಟು ತಾಳ್ಮೆಯಿಲ್ಲ: ಭಾಗವಹಿಸಿದ್ದ ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾಜರ್ುನ ಮುರುಘ ರಾಜೇಂ ದ್ರಶ್ರೀ ಮಾತನಾಡಿ, ಧರ್ಮಗುರುಗಳು ಸೂಚನೆ ನೀಡಿದ್ದನ್ನು ಪಾಲನೆ ಮಾಡುವವರಿಲ್ಲ, ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಯುವಕರ ಸಂಖ್ಯೆ ದಿನದಿಂದ ಕುಂಠಿತವಾಗುತ್ತಿದೆ, ಪ್ರವಚನದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆ ಕ್ಷೀಣಿ ಸುತ್ತಿವೆ, ಹಿರಿಯರಿಲ್ಲದೇ ಮನೆಗಳು ಬಣಗುಡುತ್ತಿದ್ದು ಹೀಗಾಗಿ ತಿದ್ದಿತೀರುವಳಿಗಳು ಮನೆಯಲ್ಲಿ ಇತ್ಯರ್ಥ ವಾಗದೇ ಬೀದಿಗೆ ಬರುತ್ತಿವೆ ಇದರಿಂದ ಎಲ್ಲಿಯೂ ನೈತಿಕತೆ ಪ್ರಶ್ನೆಯೇ ಸಮಾಜದಲ್ಲಿ ಉದ್ಭವವಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಜ್ಞಾನದ ಹಸಿವನ್ನು ಇಂಗಿಸುತ್ತವೆ: ಹೂವಿನಶಿಗ್ಲಿ ವಿರಕ್ತಮಠದ ಮನಿಪ್ರ ಚನ್ನವೀರಶ್ರೀ ಮಾತನಾಡಿ, ಶರಣರ ನಡೆನುಡಿಗಳು ಜೀವನದ ಆದರ್ಶಗಳಾಗಬೇಕು, ಪ್ರಸ್ತುತ ಸಮಾಜ ಜ್ಞಾನದ ಹಸಿವಿನಿಂದ ಬಳಲುತ್ತಿದೆ, ಪ್ರವಚನದಂತಹ ಕಾರ್ಯಕ್ರಮಗಳಲ್ಲಿ ಧರ್ಮಜ್ಞಾನ, ಅರ್ಥಜ್ಞಾನ, ಬೌದ್ಧಿಕಜ್ಞಾನ, ಬದುಕಿನ ಜ್ಞಾನ ದೊರೆಯಲಿವೆ, ಕುಟುಂಬ ಸಮೇತರಾಗಿ ಪ್ರವಚನ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವ ಮೂಲಕ ಅದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಧ್ವಜಾರೋಹಣ: ಇದಕ್ಕೂ ಮುನ್ನ ಧ್ವಜಾರೋಹಣ ಕಾರ್ಯಕ್ರಮ ನರವೇರಿಸಿದ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾಜರ್ುನಶ್ರೀ ಮಾತನಾಡಿ, ಷಟಸ್ಥಲ ಮಾರ್ಗಗಳು ಅನುಸರಿಸುವುದರಿಂದ ವ್ಯಕ್ತಿಗೆ ಮೋಕ್ಷ ಸಾಧ್ಯವೆಂಬುದನ್ನು ಕಳೆದ 12 ನೇ ಶತಮಾನ ದಲ್ಲಿಯೇ ಬಸವಾದಿ ಶರಣರು ಪ್ರತಿಪಾದಿಸಿದ್ದಾರೆ, ಅವುಗಳನ್ನು ಕೈಬಿಟ್ಟು ಅನ್ಯಮಾರ್ಗಗಳನ್ನು ಹಿಡಿಯುತ್ತಿರುವ ನಮಗೆಲ್ಲರಿಗೆ ಸುಖ-ಶಾಂತಿ-ನೆಮ್ಮದಿ ಲಭಿಸಲು ಎಲ್ಲಿಂದ ಸಾಧ್ಯವೆಂದರು.
ವೇದಿಕೆಯಲ್ಲಿ ಡಾ.ಎಸ್.ಎನ್.ನಿಡಗುಂದಿ, ರೈತ ಮುಖಂಡ ಅಡಿವೆಪ್ಪ ಎಲಿ, ಕುಮಾರೇಶ್ವರ ಪಾಠಶಾಲೆ ರಾಚಯ್ಯನವರು ಓದಿಸೋಮಠ, ಸಾಧಕ ಚನ್ನವೀರಯ್ಯ ಹಿರೇಮಠ, ಜಾತ್ರಾ ಸಮಿತಿ ಅಧ್ಯಕ್ಷೆ ಮಹೇಶ್ವರಿ ಪಸಾರದ, ಸದಸ್ಯರಾದ ಅನುರಾಧಾ ಮೋರಿಗೇರಿ, ದ್ರಾಕ್ಷಾಯಣಿ ಹರಮಗಟ್ಟಿ, ಕವಿತಾ ಹಂಜಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಚಂದ್ರು ಅಂಗಡಿ ಸ್ವಾಗತಿಸಿದರು, ರಾಜು ಮೋರಿಗೇರಿ ನಿರೂಪಿಸಿದರು, ಸುಧೀರ್ ಹವಳದ ವಂದಿಸಿದರು.