ಧರ್ಮ, ಸಂಸ್ಕೃತಿ ಭಾರತೀಯ ಪರಂಪರೆಯಾಗಿದೆ: ಪ್ರಕಾಶಾನಂದಜೀ

ಲೋಕದರ್ಶನವರದಿ

ರಾಣೇಬೆನ್ನೂರು26: ನಗರದ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಉಮಾಶಂಕರ ವಲಯ ಮತ್ತು ಸ್ಥಳೀಯ ಸಂಘಸಂಸ್ಥೆಗಳ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಹಾಗೂ ಧಾಮರ್ಿಕ ಸಭಾ ಕಾರ್ಯಕ್ರಮವು ನಡೆಯಿತು. 

           ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಪ್ರಕಾಶಾನಾಂದಜೀ ಮಹಾರಾಜ ಅವರು ಮಾತನಾಡಿ ಧರ್ಮ ಮತ್ತು ಧಮರ್ಾಚರಣೆ ಭಾರತೀಯರ ಪರಂಪರೆಯಲ್ಲಿ ಸಾವಿರಾರು ವರ್ಷಗಳಿಂದ ಹಾಸು ಹೊಕ್ಕಾಗಿ ಬಂದಿದೆ. 

      ಇಂತಹ ಆಚರಣೆಗಳಿಂದಲೇ ಮನಸ್ಸಿಗೆ ಶಾಂತಿ-ನೆಮ್ಮದಿ ಮತ್ತು ಆನಂದ ಹೊಂದಿ ಬದುಕಿನಲ್ಲಿ ಸದಾಕಾಲಾ ಸಂತೃಪ್ತಿಯಾಗಿರಲು ಸಾಧ್ಯವಾಗಿದೆ ಎಂದರು.

         ಪ್ರತಿವರ್ಷವೂ ಇಂತಹ ಹಬ್ಬ ಹರಿದಿನಗಳಿಂದ ಪೂಜಾ ಪುನಸ್ಕಾರಗಳಿಂದ ಧಾಮರ್ಿಕ ಸಂಸ್ಕಾರ ಉಳಿಸಿ-ಬೆಳೆಸಲು ಸಾಧ್ಯವಾಗಿದೆ.  ಇದು ನಿತ್ಯ ನಿರಂತರ ಪೂಜಾ ಕಾರ್ಯಗಳಿಂದಲೇ ಕಲ್ಮಶಗೊಂಡ ಮನಸ್ಸುಗಳು ಶುದ್ಧವಾಗಲು ಬದುಕಿನಲ್ಲಿ ಶಾಂತಿ ಪಡೆಯಲು ಅತ್ಯಂತ ಸಹಕಾರಿಯಾಗಿದ್ದು, ಇದು ಭಾರತದ ಮತ್ತು ಭಾರತೀಯರ ಸಂಸ್ಕೃತಿಯ ಪರಂಪರೆಯಾಗಿದೆ ಎಂದು ಶ್ರೀಗಳು ವಿವರಿಸಿ ಮಾತನಾಡಿದರು. 

 ಡಾ|| ಬಸವರಾಜ ಕೇಲಗಾರ ಕೇಲಗಾರ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು.  ವೇದಿಕೆಯಲ್ಲಿ ವರ್ತಕ ಬಸವರಾಜ ಪಟ್ಟಣಶೆಟ್ಟಿ, ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ಯುವ ನಾಯಕ ಮಂಜುನಾಥ ಗೌಡ ಶಿವಣ್ಣನವರ, ನಗರಸಭಾ ಸದಸ್ಯ ಶೇಖಪ್ಪ ಹೊಸಗೌಡ್ರ, ಯೋಜನಾಧಿಕಾರಿ ಸತೀಶ ಶೆಟ್, ವರ್ತಕ ವಾಸುದೇವಸಾ ಲದ್ವಾ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು. 

ಸಾಮೂಹಿಕವಾಗಿ ನಡೆದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ 500 ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.