ಧಾರ್ಮಿಕ ಕಾರ್ಯದಿಂದ ನೆಮ್ಮದಿ: ಸಿದ್ದರಾಮಯ್ಯ

ಲೋಕದರ್ಶನವರದಿ

ಗುಳೇದಗುಡ್ಡ06: ಸಮೀಪದ ಹುಲ್ಲಿಕೇರಿ ಗ್ರಾಮಸ್ಥರು ಪಂಡರಪುರದ ಭಕ್ತರಾಗಿದ್ದೀರಿ ಇಂತಹ ಧಾಮರ್ಿಕ ಕಾರ್ಯಗಳಲ್ಲಿ ಭಾಗಿಯಾದವರು ಪುಣ್ಯವಂತರು ಎಂದು ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.

       ತಾಲೂಕಿನ ಹುಲ್ಲಿಕೇರಿ ಎಸ್.ಪಿ ಗ್ರಾಮದಲ್ಲಿ ವಿಠ್ಠಲ-ರುಕ್ಮೀಣಿ ಮಂದಿರದ 32 ನೇ ವರ್ಷದ ದಿಂಡಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪಾಂಡುರಂಗ ಮಂದಿರದ ಕಟ್ಟಡ ಹಾಗೂ ಸಂತಜ್ಞಾನದೇವ ಹಾಗೂ ತುಕಾರಾಮ ಮಹಾರಾಜರ ಮೂತರ್ಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

        ಮಾಜಿ ಸಚಿವ ಮದ್ವರಾಜ ಪ್ರಮೋದ ಮಾತನಾಡಿದರು.  ಗದ್ದನಗಿರಿಯ ಮಳೆರಾಜೇಂದ್ರ ಮಠದ ಮೌನೇಶ್ವರ ಶ್ರಿಗಳು ಸಾನಿಧ್ಯವಹಿಸಿದ್ದರು. ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ,ಭೀಮಸೇನ್ ಚಿಮ್ಮನಕಟ್ಟಿ, ಹೊಳೆಬಸು ಶೆಟ್ಟರ್, ಮಹೇಶ ಹೊಸಗೌಡರ, ಗ್ರಾಮಪಂಚಾಯತಿ ಅಧ್ಯಕ್ಷ ಶರಣಪ್ಪ ಸಜ್ಜನ, ಪರ್ವತಿ ಗ್ರಮಪಂಚಾಯತಿ ಮಾಜಿ ಅಧ್ಯಕ್ಷ ರಮೇಶ ಬೂದಿಹಾಳ ಇದ್ದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಸಿದ್ಧರಾಮಯ್ಯನವರನ್ನು  ರಮೇಶ ಬೂದಿಹಾಳ, ಹಣಮಂತ ಗಡೇದ ಅವರು ಸನ್ಮಾನಿಸಿದರು.