ಬಾಗಲಕೋಟೆ 12: ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಪ್ರವಾಹ ನಂತರ ಪರಿಹಾರ ಕಾರ್ಯಗಳು ಅತೀ ಮಹತ್ವದ್ದಾಗಿದ್ದು, ಅಧಿಕಾರಿಗಳು ಸಮನ್ವಯ, ಸಹಕಾರದಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಎಲ್ಲ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣವಾಗುತ್ತಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಅಪಾರ ಆಸ್ತಿ-ಪಾಸ್ತಿ ಹಾನಿಗಳಾಗಿರುವದರಿಂದ ಸಂತ್ರಸ್ಥರಿಗೂ ಯಾವುದೇ ರೀತಿ ತೊಂದರೆಯಾಗದಂತೆ ಅಧಿಕಾರಿಗಳು ಉದಾರತೆ, ಪ್ರಾಮಾಣಿಕತೆಯನ್ನು ಪ್ರದಶರ್ಿಸಿ ಪ್ರವಾಹ ನಂತರದ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ಸಂಬಂಧಿಸಿದ ಮೇಲಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಸಹಕಾರದಿಂದ ಸಮನ್ವಯತೆ ಸಾಧಿಸಿ ಸಂತ್ರಸ್ಥರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಪರಿಹಾರ ಕಾರ್ಯಕ್ಕೆ ಅನುದಾನ ಕೊರತೆಯಿಲ್ಲ. ಜಿಲ್ಲೆಯಲ್ಲಿ ಒಟ್ಟು 203 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಂತ್ರಸ್ಥರಿಗೆ ಹಾಗೂ ಜಾನುವಾರುಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸತಕ್ಕದ್ದು. ಪ್ರತಿ ಕೇಂದ್ರದಲ್ಲಿ ಅಗತ್ಯ ಆಹಾರಧಾನ್ಯಗಳನ್ನು ಸಂಗ್ರಹಿಸಲಾಗಿದ್ದು, ಅಕ್ಕಿ, ಗೋದಿ, ಎಣ್ಣೆ, ತರಕಾರಿ, ಗ್ಯಾಸ, ಸಿಲಿಂಡರ್ಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿ ಯಾವುದೇ ಕೊರತೆಯಾಗದಂತೆ ಕ್ರಮ ವಹಿಸತಕ್ಕದ್ದು.
ಪ್ರತಿ ಕೇಂದ್ರಕ್ಕೆ ಇಬ್ಬರು ಅಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿ ಹಾಗೂ ಖಚರ್ು ವೆಚ್ಚಕ್ಕಾಗಿ ತಕ್ಷಣವೇ ಪ್ರತಿ ಕೇಂದ್ರಕ್ಕೆ 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಆಯಾ ತಾ.ಪಂ ಇಓ ಹಾಗೂ ಬಿಸಿಯೂಟ ಅಧಿಕಾರಿ ಇದನ್ನು ನಿಭಾಯಿಸತಕ್ಕದೆಂದರು. ಆಹಾರ, ಆರೋಗ್ಯ, ಶೌಚಾಲಯ, ಸ್ವಚ್ಛತೆ ಹಾಗೂ ಜಾನುವಾರುಗಳಿಗೆ ಮೇವಿನ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮಾಕರ್ೆಟ್ ದರ ಹೆಚ್ಚಿದ್ದರೂ ಖರೀದಿಸಿ ವಿಕೋಪ ಪರಿಹಾರದಡಿ ತುತರ್ು ಸಂದರ್ಭದಲ್ಲಿ ಕೆಟಿಟಿಸಿ ಕಾಯ್ದೆಯಡಿ 4ಎ ವಿನಾಯಿತಿ ಇದೆ. ಉದಾರತೆಯಿಂದ ಶ್ರಮಿಸಲು ತಿಳಿಸಿದರು.
ಕಡ್ಡಾಯವಾಗಿ ಕಾಯಿಸಿ ಆರಿಸಿದ ನೀರನ್ನು ಬಳಸತಕ್ಕದ್ದು. ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸುವಂತೆ ಅವರು ತಿಳಿಸಿದರು. ತಿನ್ನುವ ಆಹಾರ ಪ್ಯಾಕೇಟಗಳ ಎಕ್ಸಪೈರಿ ದಿನಾಂಕ ಚೆಕ್ ಮಾಡಿರಿ. ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಅಧಿಕಾರಿಗಳು ಮುಂಜಾಗ್ರತೆಯಾಗಿ ಎಲ್ಲ 160 ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ದಾಸ್ತಾನು ಇಡಲು ಸೂಚಿಸಿದರು. ಈಗಾಗಲೇ ಮೆಡಿಕಲ್ ಕಿಟ್ ವಿತರಿಸಲಾಗಿದೆ.
ನೀರಿನಿಂದ ಯಾವುದೇ ರೀತಿಯ ಆರೋಗ್ಯ ತೊಂದರೆಯಾಗದಂತೆ ಹಾಗೂ ಹಾವು, ಚೇಳು ವಿಷಜಂತುಗಳು ಪರಿಹಾರ ಕೇಂದ್ರದ ಸುತ್ತಲೂ ಸುಳಿಯದಂತೆ ಮೆಲಾಥಿನ್ ಸಿಂಪಡಿಸಲು ತಿಳಿಸಿದರು. ಬೆಡ್ಶಿಟ್, ಟೂತಪೇಸ್ಟ್, ಸೊಳ್ಳೆ ಪರದೆ ವಿತರಿಸಲು ಕ್ರಮವಹಿಸಿದೆ ಎಂದರು. ಸೀಮೆ ಎಣ್ಣೆ ಈಗಾಗಲೇ ವಿತರಿಸಿದ್ದು, ಹೆಚ್ಚಿನ ಬೇಡಿಕೆಯ ಇಂಡೆಂಟ್ ಸಲ್ಲಿಸಿದ್ದು, ಬರಲಿದೆ ಎಂದರು.
ಜಾನುವಾರುಗಳಿಗೆ ತಾತ್ಕಾಲಿಕ ಶೆಡ್ ಹಾಗೂ ಮೇವಿನ ಕೊರತೆ ಯಾಗದಂತೆ ಎಚ್ಚರ ವಹಿಸಿ, ರೈತರಿಂದ ಮೇವು ಖರೀದಿಸಿ ಕ್ರಮಕೈಗೊಳ್ಳಿ.
ಜಾನುವಾರುಗಳಿಗೆ ಔಷಧಿ ದಾಸ್ತಾನು ಇರಿಸಬೇಕೆಂದರು. ಜಮಖಂಡಿ ಉಪವಿಭಾಗಾಧಿಕಾರಿ ಮೊಹಮ್ಮದ ಇಕ್ರಮ್ ಅವರು ನಿಮರ್ಿಸಿದ ಗೋಶಾಲೆ ಶೆಡ್ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಅವರ ಕಾಳಜಿಯನ್ನು ಜಿಲ್ಲಾಧಿಕಾರಿಗಳು ಶ್ಲಾಘಿಸಿದರು.
ಪರಿಹಾರ ಕೇಂದ್ರಗಳಲ್ಲಿ ಹೊರಗೆ-ಒಳಗೆ ಸ್ವಚ್ಛತೆ ಕಾಪಾಡಿ ಸ್ಥಳೀಯ ಸಂಸ್ಥೆಗಳಲ್ಲಿರುವ ಸುಮಾರು 25 ಫಾಗಿಂಗ್ ಮಶೀನ್ಗಳನ್ನು ಬಳಸಿ 3 ದಿನಕ್ಕೊಮ್ಮೆ ಕಡ್ಡಾಯವಾಗಿ ಫಾಗಿಂಗ್ ಮಾಡುವಂತೆ ಸೂಚಿಸಲಾಯಿತು.
ಗಿಡಗಂಟಿ, ಕಸ ತೆಗೆಯಿಸಿರಿ. ಖಚರ್ುವೆಚ್ಚದ ಅಗತ್ಯ ದಾಖಲೆ ಒದಗಿಸಿ. ದುಡ್ಡಿಲ್ಲಯೆಂಬ ನೆಪ ಹೇಳಬೇಡಿರಿ. ವಾಟ್ಸಅಪ್ನಲ್ಲಿ ಮಾಹಿತಿ ರವಾನಿಸಿ. ಯಾವುದೇ ಸಂಕೋಚ ಬೇಡವೆಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪವ್ವಾರ, ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ದುಗರ್ೆಶ ರುದ್ರಾಕ್ಷಿ ಸೇರಿದಂತೆ ಎಲ್ಲ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.