ನರೇಂದ್ರ ಸಿಂಗ್ ತೋಮರ್ ಅವರಿಂದ 'ಬಂಜರು ಭೂಮಿ ಅಟ್ಲಾಸ್- 2019' ಬಿಡುಗಡೆ

ನವದೆಹಲಿ, ನ 5:   ದೇಶದ ಬಂಜರು ಭೂಮಿ ಕುರಿತಂತೆ ವಿಶ್ವಾಸಾರ್ಹ ಮಾಹಿತಿ ಲಭ್ಯತೆಯ ಮಹತ್ವವನ್ನು ಮನಗಂಡು ಕೇಂದ್ರ ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ರೈತ ಕಲ್ಯಾಣ ಮತ್ತು ಪಂಚಾಯತಿ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ 'ಬಂಜರು ಭೂಮಿ ಅಟ್ಲಾಸ್ 2019' ಬಿಡುಗಡೆ ಮಾಡಿದರು.    ಬಾಹ್ಯಾಕಾಶ ಇಲಾಖೆಯ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಕೇಂದ್ರ (ಎನ್ಆರ್ಎಸ್ಸಿ), ಸಹಯೋಗದೊಂದಿಗೆ ಭೂ ಸಂಪನ್ಮೂಲ ಇಲಾಖೆ ಬಂಜರು ಭೂಮಿ ಅಟ್ಲಾಸ್- 2000, 2005, 2010 ಮತ್ತು 2011ನೇ ಆವೃತ್ತಿಗಳನ್ನು ಪ್ರಕಟಿಸಿದೆ.    ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹದ ಮಾಹಿತಿಯನ್ನು ಬಳಿಸಿಕೊಂಡು ಎನ್ಆರ್ಎಸ್ಸಿ ನಡೆಸಿದ ಹೊಸ ಬಂಜರು ಭೂಮಿ ಸಮೀಕ್ಷೆಯನ್ನು ಬಂಜರು ಭೂಮಿ ಅಟ್ಲಾಸ್- 2019 ರ ಐದನೇ ಆವೃತ್ತಿಯಾಗಿ ತರಲಾಗಿದೆ. ವಿಶ್ವದ ಒಟ್ಟು ಭೂಪ್ರದೇಶದ ಶೇ 2.4 ರಷ್ಟು ಹಾಗೂ ವಿಶ್ವದ ಒಟ್ಟು ಜನಸಂಖ್ಯೆಯ ಶೇ.18 ರಷ್ಟು ಭಾರತ ಹೊಂದಿದೆ.    ಭಾರತದಲ್ಲಿ ಕೃಷಿ ಭೂಮಿಯ ತಲಾ ಲಭ್ಯತೆಯು 0.12 ಹೆಕ್ಟೇರ್ ಆಗಿದ್ದರೆ, ವಿಶ್ವದ ತಲಾ ಕೃಷಿ ಭೂಮಿಯ ಲಭ್ಯತೆ 0.29 ಹೆಕ್ಟೇರ್ ಆಗಿದೆ. ಭೂಮಿಯನ್ನು ತನ್ನ ಸಾಮಥ್ರ್ಯ ಮೀರಿ ಒತ್ತಡದಿಂದ ಬಳಸಿಕೊಳ್ಳುತ್ತಿರುವುದು ದೇಶದ ಜಮೀನುಗಳು ಪಾಳಾಗಲು  ಕಾರಣವಾಗಿದೆ. ಆದ್ದರಿಂದ, ಬಂಜರು ಭೂಮಿಯಲ್ಲಿನ ದೃಢವಾದ ಭೂವೈಜ್ಞಾನಿಕ ಮಾಹಿತಿಯು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಮತ್ತು ವಿವಿಧ ಭೂ ಅಭಿವೃದ್ಧಿ ಕಾರ್ಯಕ್ರಮಗಳು -ಯೋಜನೆಗಳು ಬಂಜರು ಭೂಮಿಯನ್ನು ಮತ್ತೆ ಉತ್ಪಾದಕ ಬಳಕೆಗೆ ತರಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.    ಜಿಲ್ಲಾ ಮತ್ತು ರಾಜ್ಯವಾರು ವಿವಿಧ ವರ್ಗದ ಬಂಜರು ಪ್ರದೇಶಗಳ ಮಾಹಿತಿಯನ್ನು ಹೊಸ 2019ನೇ ಸಾಲಿನ ಆವೃತ್ತಿ ಒದಗಿಸುತ್ತದೆ.    2008-09 ಮತ್ತು 2015-16ರ ನಡುವೆ ಬಂಜರು ಭೂಮಿಗಳಲ್ಲಿನ ಬದಲಾವಣೆಗಳನ್ನು ಅಟ್ಲಾಸ್ನಲ್ಲಿ ಸೇರಿಸಲಾಗಿದೆ.