ಅಂಗನವಾಡಿ ಕೇಂದ್ರಗಳನ್ನು ಬಲವರ್ಧನೆಗೊಳಿಸಿ: ದಂಡಿನ

ಹುಕ್ಕೇರಿ 11: ಇಂದು ಪ್ರತಿ ಮಗುವಿಗೆ ಶಿಕ್ಷಣ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಥರ್ಿಗಳಿಗಾಗಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇಂದು ಸರಕಾರಿ ಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಕುಸಿಯುತ್ತಿರುವ ವಿಷಾದವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ವ್ಯಕ್ತ ಪಡಿಸಿದರು.

         ಅವರು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಾಯರ್ಾಲಯದಲ್ಲಿ ಆಯೋಜಿಸಲಾದ ಸರಕಾರಿ ಪ್ರಾಥಮಿಕ ಶಾಲೆಗಳ ಮುಖ್ಯಾಧ್ಯಾಪಕರ ಸಭೆಯಲ್ಲಿ ಮಾತನಾಡುತ್ತಿದ್ದರು. ಸರಕಾರಿ ಪ್ರಾಥಮಿಕ ಶಾಲೆಗಳ ಅವರಣದಲ್ಲಿರುವ ಅಂಗನವಾಡಿಗಳನ್ನು ಸುಧಾರಿಸಿ ಅಂದಗೊಳಿಸಲು ಅಲ್ಲಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯರಿಗೆ ರೂ. 10,000 ಹಣ ನೀಡಲಾಗಿದೆ. ಅದರಂತೆ ಅಂಗನವಾಡಿಗಳಿ ಬಣ್ಣ ಬಳಿಯುವದು, ಗೋಡೆಗಳ ಮೇಲೆ ಮಕ್ಕಳಿಗೆ ಉಪಯೋಗವಾಗುವ ಚಿತ್ರಗಳನ್ನು ಬಿಡಿಸಿ ಆಕರ್ಷಣೆ ಮಾಡಲು ಈ ಹಣವನ್ನು ಉಪಯೋಗಿಸಲು ಸೂಚಿಸಲಾಗಿದೆ ಈಗಾಗಲೇ ಹಣವನ್ನು ಆಯಾ ಶಾಲೆಯ ಮುಖ್ಯೋಪಾಧ್ಯರಿಗೆ ನೀಡಲಾಗಿದೆಯೆಂದರು. ಅಂಗನವಾಡಿ ಮಕ್ಕಳು ಹೊರಗೆ ಹೊಗದೆ ಅಲ್ಲಿಯ ಪ್ರಾಥಮಿಕ ಶಾಲೆಗೆ ಹೆಸರು ನೊಂದಾವಣೆ ಮಾಡುವದರಿಂದ ಪಟಸಂಖ್ಯೆ ಹೆಚ್ಚಿಸಲು ಸಾದ್ಯವೆಂದು ಮೋಹನ ದಂಡಿನ ಅಭಿಪ್ರಾಯ ಪಟ್ಟರು. ಇಂದು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಕರಿದ್ದು ಮಕ್ಕಳು ಉತ್ತಮ ಶಿಕ್ಷಣ ಪಡೆಯಬಹುದಾಗಿದೆಯೆಂದರು 

         ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಎಸ್.ಡಿ.ನಾಯಿಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿಯ ಬಲವರ್ಧನೆಗೊಳಿಸಲಾದ ವಿವಿಧ ಅಂಗನವಾಡಿ ಕೇಂದ್ರಗಳನ್ನು ಪ್ರದಶರ್ಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಶು ಹಾಗೂ ಮಹಿಳಾ ಅಭಿವೃದ್ಧಿ ಆಧಿಕಾರಿ ಲೋಕಾಂಬಾ ಮಾತನಾಡಿ ಇಂದು ನಮಗೆ ಗೊತ್ತಿಲ್ಲದೆ ಬಾಲ ವಿವಾಹಗಳು ನಡೆಯುತ್ತಿದೆ ಇದೊಂದು ಅಪರಾಧವಾಗಿದ್ದು ಇದನ್ನು ತಡೆಗಟ್ಟಲು ಶಿಕ್ಷಕರಿಗಾಗಿ ಯಮಕನಮಡರ್ಿಯಲ್ಲಿ ಶೀಘ್ರವೇ ಕಾಯರ್ಾಗಾರವನ್ನು ಹಮ್ಮಿಕೊಳ್ಳುವದಾಗಿ ತಿಳಿಸಿದರು. ಅಕ್ಷರ ದಾಸೋಹ ಯೋಜನಾಧಿಕಾರಿ ಅರಿಹಂತ ಬಿರಾದರ ಪಾಟೀಲ ಉಪಸ್ಥಿತರಿದ್ದರು. ವಂದನಾರ್ಪನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.