ಕೇರಳದಲ್ಲಿ ಈಗ ಪುನರ್ವಸತಿಯದ್ದೇ ಬೃಹತ್ ಸವಾಲು



ಕೇರಳ 20: ಭೀಕರ ಪ್ರವಾಹದಿಂದ ನಲುಗಿದ ಕೇರಳದಲ್ಲಿ ಮಳೆಯಿಂದ ಈಗ ಸ್ವಲ್ಪ ಬಿಡುವು ಪಡೆದುಕೊಂಡಿದೆ. ಆದರೆ, ಇದು ಮನೆಯಿಲ್ಲದ ಜನರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವುದು ದೈತ್ಯಾಕಾರದ ಸವಾಲಾಗಿದೆ. 

ಸುಮಾರು 5. 645  ಪರಿಹಾರ ಶಿಬಿರಗಳಲ್ಲಿ 7. 24 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಎನರ್ಾಕುಲಂ ಜಿಲ್ಲೆಯ ಪಾರೂರ್ ಬಳಿ ಕಳೆದ ರಾತ್ರಿ ಆರು ಮೃತದೇಹಗಳು ದೊರೆತಿದ್ದು, ಆಗಸ್ಟ್ 8 ರಿಂದ ಉಂಟಾಗಿರುವ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 216 ಕ್ಕೆ ಏರಿಕೆ ಆಗಿದೆ ಎಂದು ಸ್ಥಳೀಯ ಶಾಸಕ ವಿ. ಡಿ. ಸತೀಶನ್ ತಿಳಿಸಿದ್ದಾರೆ. 

ತಿರುವನಂತಪುರಂನಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ವಿಭಾಗದ ಸೇನಾ ಕಮಾಂಡರ್ ಲೆಪ್ಟಿನೆಂಟ್ ಜನರಲ್ ಡಿ. ಆರ್. ಸೊನಿ,  ರಕ್ಷಣಾ ಕಾಯರ್ಾಚರಣೆ ಮುಂದುವರಿದಿದೆ. ಸುಲಭವಾಗಿ ಸಂಪರ್ಕಕ್ಕೆ ಸಿಗದ ಜನರನ್ನು ಪತ್ತೆ ಹಚ್ಚಲು ಡ್ರೋಣ್ ಕ್ಯಾಮರಾಗಳ ನೆರವು ಪಡೆಯಲಾಗುತ್ತಿದೆ. 1500 ಯೋಧರು ರಕ್ಷಣಾ ಕಾಯರ್ಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅವರು  ಹೇಳಿದರು. 

ರಕ್ಷಣಾ ಕಾಯರ್ಾಚರಣೆ: ಮನೆಯ ಮೇಲ್ಬಾಗದಲ್ಲಿ ಸಿಲುಕಿರುವ ಜನರು ಹಾಗೂ ಸಂಪರ್ಕ ಕಡಿತದ ಪ್ರದೇಶಗಳಿರುವ ಸಂತ್ರಸ್ತರನ್ನು ರಕ್ಷಿಸಲು ಹೆಲಿಕಾಪ್ಟರ್ ಬಳಸಲಾಗುತ್ತಿದೆ. ಸಂಪರ್ಕಕ್ಕೆ ಸಿಗದ ಪ್ರದೇಶದಲ್ಲಿರುವ ಜನರೊಂದಿಗೆ ಮಾತುಕತೆ ನಡೆಸಲು ಸೇನಾ ಸಿಬ್ಬಂದಿ ಸ್ಯಾಟ್ ಲೈಟ್ ಪೋನ್ ಬಳಸುತ್ತಿರುವುದಾಗಿ ಅವರು ತಿಳಿಸಿದರು. 

ಪಾರೂರ್ ಸುತ್ತಮುತ್ತಲಿನ ಬಹುತೇಕ ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮನೆ ಮೇಲಿನ ಅವಶೇಷಗಳನ್ನು ತೆರವು ಕಾಯರ್ಾಚರಣೆ ಈಗ ಪ್ರಗತಿಯಲ್ಲಿದೆ ಎಂದು  ಸತೀಶನ್ ಹೇಳಿದರು. 

ಪ್ರವಾಹದಿಂದಾಗಿ ಅನೇಕ ದಿನಗಳಿಂದಲೂ ಶುದ್ದ ನೀರು ಹಾಗೂ ವಿದ್ಯುತ್ ಇಲ್ಲದಂತಾಗಿದ್ದು,. 

ವಿದ್ಯುತ್ ಹಾಗೂ ನೀರು ಪೂರೈಕೆ ಕಡಿತಗೊಂಡಿರುವ ಪ್ರದೇಶಗಳಲ್ಲಿ ಮತ್ತೆ ಸೌಲಭ್ಯ ಕಲ್ಪಿಸಲು   ನೀರು  ಹಾಗೂ ಕೇರಳ ರಾಜ್ಯ ವಿದ್ಯುತ್ ಮಂಡಲಿ ಪ್ರಯತ್ನ ಪಡುತ್ತಿವೆ 

ಪ್ರವಾಹದಿಂದಾಗಿ ಕಳೆದ 26 ರಿಂದ ರನ್ ವೇ ಸ್ಥಗಿತಗೊಂಡಿದ್ದ  ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮತ್ತೆ ವಿಮಾನಗಳು ಕಾಯರ್ಾಚರಣೆ ಆರಂಭಿಸಿವೆ. ಸಣ್ಣ ಹೆಲಿಕಾಪ್ಟರ್ ಗಳ ಸೇರಿದಂತೆ  ಕೊಚ್ಚಿಯ ನೌಕ ವಿಮಾನನಿಲ್ದಾಣದಿಂದ  ವಾಣಿಜ್ಯಾತ್ಮಕ ವಿಮಾನಗಳು ಸೇವೆ ಆರಂಭಿಸಿದ್ದು, ಇಂದು ಬೆಳಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನ ಬಂದಿಳಿಯಿತು. 

ನೌಕಪಡೆಯ ಐಎನ್ಎಸ್ ದೀಪಕ್ ವಿಮಾನದಿಂದ ಮುಂಬೈಯಿಂದ  ಸುಮಾರು 800 ಟನ್ ಗಳಷ್ಟು ಶುದ್ದ ನೀರನ್ನು  ತರಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎರಡು ದೋಣಿಗಳಲ್ಲಿ ತಾಜಾ ನೀರನ್ನು ನೀಡಲಾಗುತ್ತಿದೆ ಎಂದು ಕೊಚ್ಚಿನ್ ಬಂದರು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. 

ವಲ್ಲರ್ ಪಾದಂಬಳಿಗೆ ಬಂದಿರುವ ಬಂದರು ಸಚಿವಾಲಯದ  ಮತ್ತೊಂದು ಹಡಗಿನಿಂದ ಪರಿಹಾರ ಸಾಮಾಗ್ರಿಗಳನ್ನು ಸಾಗಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. 

ಇಂಧನ: ಕೇರಳದ ಇಂಧನ ಬೇಡಿಕೆಯನ್ನು ಪೂರೈಸಲು ಮುಂಬೈಯಿಂದ 50000 ಟನ್ ಕಚ್ಚಾ ತೈಲವನ್ನು ಬಿಪಿಸಿಎಲ್ ಮೂಲಕ ಕೊಚ್ಚಿನ್ ಬಂದರಿಗೆ ಕಳುಹಿಸಲಾಗಿದೆ.ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ  ಕೇರಳದ ಹಿನ್ನೀರಿನ ಮತ್ತು  ರಸ್ತೆಗಳ ನಡುವಿನ ವ್ಯತ್ಯಾಸವೇ ಬದಲಾಗಿದ್ದು.   ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಕೆಲ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ 

ಇಲ್ಲದಂತಾಗಿದೆ. 

ಕೇರಳದಲ್ಲಿ ಮತ್ತೆ ರೈಲು ಸಂಚಾರ : ತಿರುವನಂತಪುರಂ ಮತ್ತು ಎನರ್ಾಕುಲಂ ನಡುವಿನ ರೈಲು ಸಂಚಾರ ಮತ್ತೆ ಆರಂಭವಾಗಿದೆ. ಶೊನರ್ೂರ್ ನಿಂದ ಎನರ್ಾಕುಲಂ ನಡುವೆ  ಪ್ರಾಯೋಗಿಕ ರೈಲು ಸಂಚಾರ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ತಿರುವನಂತಪುರದಿಂದ ಚೆನ್ನೈ,  ಮುಂಬೈ, ಬೆಂಗಳೂರು, ಮತ್ತು  ದೆಹಲಿ  ಮಾರ್ಗದಲ್ಲಿ ರೈಲು ಸಂಚಾರ ಭಾಗಶ: ಪುನರ್ ಆರಂಭಗೊಂಡಿದೆ. ಅಲ್ಪಾಜುಹಾದಲ್ಲಿ ಚೆಂಗನೂರು ಬಳಿ ಪ್ರವಾಹದಿಂದ ರೈಲ್ವೆ ಸಂಚಾರದ ಮೇಲೆ ತೀವ್ರ ಪರಿಣಾಮ ಉಂಟಾಗಿದೆ