ಯರಗಟ್ಟಿ 29: ಸವದತ್ತಿ ಹಾಗೂ ಯರಗಟ್ಟಿ ತಾಲೂಕಿನಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಜಾರಿಗೊಲಿಸಲಾಗಿದೆ.
ಬೆಳೆ ಸಾಲ ಪಡೆಯುವ ಹಾಗೂ ಪಡೆಯದ ರೈತರು ಬೆಳೆ ವಿಮೆ ಯೋಜನೆಯಡಿ ಪಾಲ್ಗೊಳ್ಳಲು ಮುಸುಕಿನ ಜೋಳ (ನೀರಾವರಿ), ಗೋಧಿ (ನೀರಾವರಿ) ಹಾಗೂ ಕಡಲೆ (ಮಳೆ ಆಶ್ರಿತ ಹಾಗೂ ನೀರಾವರಿ) ಬೆಳೇಗಳಿಗೆ ಡಿಸೆಂಬರ್ 16 ಕೊನೆಯ ದಿನಾಂಕ ಹಾಗೂ ಇನ್ನೂಳಿದ ಹಿಂಗಾರು ಬೆಳೆಗಳಿಗೆ ನವೆಂಬರ್ 30, 2024 ಕೊನೆಯ ದಿನವಾಗಿರುತ್ತದೆ. ಬೇಸಿಗೆ ಹಂಗಾಮಿಗೆ ಶೇಂಗಾ (ನೀರಾವರಿ) ಹಾಗೂ ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ 2025 ರ ಫೆಬ್ರುವರಿ.28 ರೊಳಗಾಗಿ ಬೆಳೆ ವಿಮೆ ಮಾಡಿಸಬಹುದು.
ಮಾಹಿತಿಗಾಗಿ ಸಮೀಪದ ರೈತ ಸಂಫರ್ಕ ಕೇಂದ್ರದ ಅಧಿಕಾರಿಗಳು, ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕಂದಾಯ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರು, ಸವದತ್ತಿ ಶಿವಪ್ರಕಾಶ ವಿ. ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.