ಕೊಪ್ಪಳ 14: ರಾಜ್ಯ ಮಟ್ಟದಲ್ಲಿ 2020ನೇ ಸಾಲಿನ ಇಂಡಿಯಾ ಕೌಶಲ್ಯ ಕರ್ನಾಟಕ ಸ್ಪರ್ದೇಗೆ 21 ವರ್ಷದೊಳಗಿನ ಮಕ್ಕಳು ಮತ್ತು ಯುವಕನ್ನು ಗುರುತಿಸಿ ಹೆಸರನ್ನು ಜ. 15 ರಂದು ನೊಂದಣಿ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಶಿಕ್ಷಣ ಇಲಾಖೆಯವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.
ಇಂಡಿಯಾ ಕೌಶಲ್ಯ ಕರ್ನಾಟಕ ಸ್ಪರ್ಧೆಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಹಮ್ಮಿಕೊಂಡಿದ್ದ, ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚೀನಾ ದೇಶದ ಶಾಂಘೈ ನಗರದಲ್ಲಿ ಸೆಪ್ಟೆಂಬರ್-2021ಕ್ಕೆ ವಿಶ್ವ ಕೌಶಲ್ಯ ಸ್ಫರ್ಧೆಯನ್ನು ಏರ್ಪಡಿಸಲಾಗಿದ್ದು, ವಲಯ, ರಾಜ್ಯ ಕೇಂದ್ರಿಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿತ್ತದೆ. ಕರ್ನಾಟಕದ ಎಲ್ಲಾ ರಾಜ್ಯಗಳಿಂದ ಒಟ್ಟು 38 ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿದ್ದ, 1999ರ ನಂತರ ಹುಟ್ಟಿದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಮತ್ತು ಅನುದಾನರಹಿತ ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಪದವಿ ಪೂರ್ವ ಮತ್ತು ಐ.ಟಿ.ಐ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹಾಗೂ ಅನಕ್ಷರಸ್ತರು ಯಾವುದೇ ವಿಶೇಷ ಕೌಶಲ್ಯ ಹೊಂದಿದ್ದಲ್ಲಿ ಭಾಗವಹಿಸಬಹುದಾಗಿದೆ. ಕಂಪನಿಗಳು, ಸಂಸ್ಥೆಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಅವರ ಗಮಕ್ಕೆತಂದು ಹೆಸರು ನೋಂದಣಿ ಮಾಡಿಕೊಳ್ಳಬೇಕು. ಮೈಸೂರು, ಮಂಗಳೂರು, ಕಲಬುರಗಿಯಲ್ಲಿ ತರಬೇತಿಯನ್ನು ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಕಲಬುರಗಿಯಲ್ಲಿ ನಡೆಯುವ ಸ್ಪರ್ಧೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸಬೇಕು. ಆಯ್ಕೆಯಾದವರು ಅಭ್ಯರ್ಥಿಗಳು ಅಬ್ರಾಡ್ನಲ್ಲಿ ನಡೆಯುವ ಕೌಶಲ್ಯ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅಂತಿಮವಾಗಿ ವಿಜೇತರಾದವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆರು ತಿಂಗಳ ತರಬೇತಿಯನ್ನು ನಿಡಲಾಗುತ್ತದೆ ಎಂದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿ ಗವಿಶಂಕರ್ ಅವರು ಮಾತನಾಡಿ, ಇಂಡಿಯಾ ಕೌಶಲ್ಯ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ಲೈನ್ನಲ್ಲಿ ಅರ್ಜಿಸಲ್ಲಿಸುವವರು ಜಿಲ್ಲಾ ಕೌಶಲ್ಯ ಮೀಷನ್, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಪ್ಪಳದ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಜ. 15 ರೊಳಗಾಗಿ www.skillsindia ವೆಬ್ಸೈಟ್ ನಲ್ಲಿ ನೋಂದಾಯಿಸಲು ತಿಳಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಲ್.ಜಿ ರಾಟಿಮನಿ, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರವೀಣ ಎಸ್.ಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.