ಜಾತಿ ಸಮೀಕ್ಷೆ ಜಾಗೃತಿಯಿಂದ ನಮೋದಿಸಿ: ಶಾಬುದ್ಧಿನ್ ನೂರಬಾಷಾ
Register with awareness for caste survey: Shahbuddin Noorabasha
ಕೊಪ್ಪಳ 21: ಇಸ್ಲಾಂ ಧರ್ಮದ ಅಡಿಯಲ್ಲಿ ಬರುವ ಸುಮಾರು 124 ಜಾತಿಗಳನ್ನು ಸರ್ಕಾರಗಳು ಪ್ರಕಟಿಸಿದೆ. ಸರ್ಕಾರದ ಆದೇಶದ ಅನ್ವಯ ಇದರಲ್ಲಿ ’ಪ್ರವರ್ಗ-1 ರಲ್ಲಿರುವ 17 ಜಾತಿಗಳು’ ಹಾಗೂ ’2 ಎ ದಲ್ಲಿರುವ 19’ ಒಟ್ಟು 36 ಜಾತಿಗಳು ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತ್ಯೇಕ ಮೀಸಲಾತಿ ಹಾಗೂ ಉಳಿದ ’2 ಬಿ ದಲ್ಲಿರುವ’ ಜಾತಿಗಳು ರಾಜ್ಯದಲ್ಲಿ ಮೀಸಲಾತಿ ಪಡೆಯುತ್ತಿವೆ.ಎಂದು ನದಾಫ್ (ಪಿಂಜಾರ್)ಸಂಘದ ರಾಜ್ಯ ಕೋಶಾಧ್ಯಕ್ಷ ಶಾಬುದ್ಧಿನ್ ನೂರಬಾಷಾ ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಇವರು ಸಮಿಕ್ಷೆಯ 12 ನೇ ಕಾಲಂ ನಲ್ಲಿ ’ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ನಿಜ ಇರುವುದರಿಂದ ಸರ್ಕಾರ ಸಮಿಕ್ಷೆಯಲ್ಲಿ ಈ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಜನಾಂಗಗಳನ್ನು ’ಸಾಮಾಜಿಕ ಮತ್ತು ಶೈಕ್ಷಣಿಕವಾಗಿ’ ಗುರುತಿಸುವ ಮಾರ್ಗಸೂಚಿ ನೀಡಲಾಗಿದೆ. ಈ ಕುರಿತು ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯಿಂದ ಅಗಸ್ಟ್ 28 ರಂದು ಹಾಗೂ ಸಪ್ಟೆಂಬರ್ 18 ರಂದು ಸಚಿವರಾದ ಝಮೀರ ಅಹ್ಮದ ಖಾನ್ ರವರ ನೇತೃತ್ವದಲ್ಲಿ ಉನ್ನತ ಮಟ್ಟದ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು. ಈ 2 ಸಭೆಯಲ್ಲಿ ಎಲ್ಲಾ 36 ಜಾತಿಗಳು ಸರ್ಕಾರದ ಅವಕಾಶಗಳಿಂದ ವಂಚಿತವಾಗಬಾರದೆಂದು (ಉದಾ: ನದಾಫ್, ಪಿಂಜಾರ, ಇತ್ಯಾದಿಗಳು) 8 ನೇ ಕಾಲಂ ಧರ್ಮ-ಇಸ್ಲಾಂ, ’9 ನೇ ಕಾಲಂ ಜಾತಿ -ನದಾಫ್ ಅಥವಾ ಪಿಂಜಾರ’ ನಮೂದಿಲು ಉನ್ನತ ಮಟ್ಟದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಇದೇ ರೀತಿ ನಮೂದಿಸಲು ಈಗಾಗಲೇ ಸಪ್ಟಂಬರ್ 7ರಂದು ಹೊಸಪೇಟೆಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಭೆ ಹಾಗೂ 18-ರಂದು ಜರುಗಿದ ಸಾಮಾನ್ಯ ಸಭೆಯಲ್ಲಿ ಸಹ ಇದೇ ತೀರ್ಮಾನ ಕೈಕೊಳ್ಳಲಾಗಿದೆ. ಈ ಜಾತಿಗಳು ಸರ್ಕಾರದನ್ವಯ ’ಇಸ್ಲಾಂ’ ಧರ್ಮದ ಅಡಿಯಲ್ಲಿ ಬರುವುದರಿಂದ ಯಾವುದೇ ರೀತಿಯಲ್ಲಿ ಧಾರ್ಮಿಕ ವಿಚಾರವಾಗಿ ಹೊರಗೆ ಉಳಿಯುವದಿಲ್ಲವೆಂದು ಸ್ಪಷ್ಟನೆ ನೀಡಿರುತ್ತಾರೆ.ಸರ್ಕಾರ ಕೈಕೊಳ್ಳುತ್ತಿರುವ ’ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯಲ್ಲಿ ರಾಜ್ಯದಲ್ಲಿ ನಾವು ಅಂಕಿ ಅಂಶಗಳ ಮೂಲಕ ಗುರುತಿಸಿಕೊಳ್ಳಬೇಕಾಗಿದೆ. ಸರ್ಕಾರದಿಂದ ಮುಂದೆ ಪಡೆಯಬಹುದಾದ ಸೌಲಭ್ಯಗಳು, ಮೀಸಲಾತಿ ಹಾಗೂ ಇತರ ಎಲ್ಲಾ ರೀತಿಯ ಸಾಧಕ-ಬಾಧಕಗಳನ್ನು ಪರಿಶಿಲಿಸಿ ನಮ್ಮ ಸಮಾಜಕ್ಕೆ ಭವಿಷ್ಯದಲ್ಲಿ ಸೂಕ್ತ ಉಪಯುಕ್ತವಾಗುವ ಹಿನ್ನೆಲೆಯಲ್ಲಿ ಹಾಗೂ ’ಸಚಿವರ ನೇತೃತ್ವದ ರಾಜ್ಯ ಮಟ್ಟದ ಅಲ್ಪಸಂಖ್ಯಾತರ ಸಭೆಯಲ್ಲಿ ತೀರ್ಮಾನಿಸಿದಂತೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಮೀರಾಸಾಬ ಬನ್ನಿಗೋಳ, ಜಿಲ್ಲಾ ಮಹಿಳಾ ಅಧ್ಯೆಕ್ಷೆ ಸಲ್ಮಾ ಜಾನ, ತಾಲೂಕ ಅಧ್ಯಕ್ಷ ಅಸ್ಮಾನಸಾಬ ನದಾಫ್, ತಾಲೂಕ ಉಪಾಧ್ಯಕ್ಷ ಫಕ್ರುಸಾಬ ನದಾಫ್, ತಾಲೂಕ ಖಜಾಂಚಿ ಮರ್ದಾನಸಾಬ ಲುಂಗಿ, ನಗರ ಕಾರ್ಯದರ್ಶಿ ರಶೀದಸಾಬ, ಇನ್ನು ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 