ಕೂಲಿಕಾರ ಓಣಿಯಲ್ಲಿ ಗಟಾರಗಳು, ರಸ್ತೆಗಳು ಹಾಗೂ ಮೂಲಭೂತ ಸೌಲಭ್ಯ ಮಾಡುವ ಕುರಿತು
Regarding construction of sewers, roads and basic facilities in Kulikara Oni.
ಕೂಲಿಕಾರ ಓಣಿಯಲ್ಲಿ ಗಟಾರಗಳು, ರಸ್ತೆಗಳು ಹಾಗೂ ಮೂಲಭೂತ ಸೌಲಭ್ಯ ಮಾಡುವ ಕುರಿತು.
ಹಾವೇರಿ 13 : ಶಹರದ ಹೃದಯ ಭಾಗದಲ್ಲಿರುವ ಕೂಲಿಕಾರ ಓಣಿಯ ನಿವಾಸಿಗಳು ವಿನಂತಿಸಿಕೊಳ್ಳುವುದುದೇನೆಂದರೆ 17 ಹಾಗೂ 12ನೇ ವಾರ್ಡಗಳು ಈ ಓಣಿಗೆ ಸಂಬಂಧ ವಿರುತ್ತದೆ. ಪಕ್ಕದಲ್ಲಿ ಸಂವಿಧಾನ ಶಿಲ್ಪಿ ಡಾಽಽ ಬಿ.ಆರ್. ಅಂಬೇಡ್ಕರ್ ಪುಸ್ಟಳಿ ಸಹ ಇರುತ್ತದೆ ಹಾಗೂ ರೈಲ್ವೇ ಸ್ಟೇಷನಗೆ ಹೋಗುವ ದಾರಿ ಸಹ ಇರುತ್ತದೆ. ಸದರಿಯ ವಾರ್ಡ 12ನೇ ವಾರ್ಡ ಹಾಗೂ 17ನೇ ವಾರ್ಡನಲ್ಲಿ ಬರುತ್ತದೆ. ಈ ವಾರ್ಡನಲ್ಲಿ ಎರಡು ಕಡೆ ಗಟಾರಗಳು ಹಾಗೂ ರಸ್ತೆಗಳು ಮಾಡಬೇಕು ಹಾಗೂ ಬೀದಿ ದ್ವೀಪಗಳನ್ನು ಅಳವಡಿಸಬೇಕು. ಗುತ್ತಿಗೆದಾರರು ಹಾಗೂ ಓಣಿಯ ಮೆಂಬರ್ ತರಾ-ತುರಿಯಲ್ಲಿ ಒಂದು, ಓಣಿಯ ಒಂದು ಕಡೆ ಗಟಾರಗಳನ್ನು ಮಾಡುತ್ತಿದ್ದಾರೆ. ಆದರಿಂದ ಓಣಿಯ ಒಂದು ಗಟಾರು ನಿರ್ಮಿಸಿದರೆ ಇನ್ನೊಂದು ಕಡೆ ಗಟಾರು ಹಳೆಯದಾಗಿರುತ್ತದೆ ಮತ್ತು ರಸ್ತೆಗಳು ಹಾಳಾಗಿದ್ದು ಇದರಿಂದ ಮಳೆಗಾಲದಲ್ಲಿ ಈ ಓಣಿಯ ನಿವಾಸಿಗಳ ಪ್ರಾಣ ಕೈಯಲ್ಲಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ಆದ ಕಾರಣ ತಾವುಗಳು 2 ಬಾಗದಲ್ಲಿ ಗಟಾರು ನಿರ್ಮಿಸಬೇಕು. ಮೊತ್ತಮ್ಮೆ ಟೆಂಡರ ಕರೆದು 2 ಕಡೆ ಗಟಾರಗಳು, ರಸ್ತೆಗಳು ಹಾಗೂ ಬೀದಿ ದ್ವಿಪಗಳು ಅಳವಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ರಶೀದಅಹ್ಮದ ಹುಲಗೂರ ಮಾನ್ಯ ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿರವರಿಗೆ ಮನವಿ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 