ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರ ಸ್ಮರಣೆ ಅಗತ್ಯ: ಹಿರೇಮಠ
Remembering the heroes who sacrificed their lives for independence is essential: Hiremath
ತಾಳಿಕೋಟಿ 17 : ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತ್ಯಾಗ ಹಾಗೂ ಬಲಿದಾನ ಮಾಡಿದ್ದಾರೆ. ಅವರ ತ್ಯಾಗ-ಬಲಿದಾನದಿಂದಲೇ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಸರ್ಕಾರ ನಿವೃತ್ತ ನೌಕರರ ಸಂಘದ ತಾಳಿಕೋಟಿ ತಾಲೂಕು ಅಧ್ಯಕ್ಷ ಸಿ.ಎಂ. ಹಿರೇಮಠ ಹೇಳಿದರು. ಶನಿವಾರ ಪಟ್ಟಣದ ನಿಮಿಷಾಂಬ ದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಸರ್ಕಾರ ನಿವೃತ್ತ ನೌಕರರ ಸಂಘ ಹಾಗೂ ನಿಮಿಷಾಂಬ ದೇವಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಧ್ವಜವಂದನಾ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಧ್ವಜಾರೋಹಣಕ್ಕೂ ಮುನ್ನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಿಮಿಷಾಂಬ ದೇವಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಘನಶ್ಯಾಮ ಚೌಹಾಣ, ಉಪಾಧ್ಯಕ್ಷ ರಮೇಶ ಚೌಹಾಣ, ಕಾರ್ಯದರ್ಶಿ ಮಂಡಿರಾಮ ಮಿರಜಕರ, ನಿವೃತ್ತ ನೌಕರರ ಸಂಘದ ಸದಸ್ಯರಾದ ಜಿ.ಎಸ್. ದೇಸಾಯಿ, ಎಸ್.ಎಸ್. ಬಸಣ್ಣವರ, ಎಂ.ಎಸ್. ಹುಲ್ಲೂರ, ಎಂ.ಎಲ್. ಮುಲ್ಲಾ, ಎಸ್.ಹೆಚ್. ದೇಸಾಯಿ, ಸಿ.ಎಸ್. ಗೋಗಿ, ಎಸ್.ಹೆಚ್. ಭಗವಾನ, ಎಸ್.ಬಿ. ಆಲ್ಯಾಳ, ಎಸ್.ಜಿ. ಬಿರಾದಾರ, ಎಂ.ಬಿ. ಮಡಿವಾಳರ, ಸಂಗಯ್ಯ ಹಿರೇಮಠ, ಎಸ್.ಆರ್. ಐತಾಳ, ಗಣಪತಿ ಚೌಹಾಣ, ಆಕಾಶ ಪಿಂಪಳೆ, ಪ್ರದೀಪ ಭೂಸಾರೆ ಸೇರಿದಂತೆ ಪಟ್ಟಣದ ಗಣ್ಯರು ಹಾಗೂ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 