ಸತ್ಸಂಗದಿಂದ ಸಂಸ್ಕಾರ, ಗುರುವಿನ ಸೇವೆಯಿಂದ ಮುಕ್ತಿ: ಸಹಜಾನಂದ ಸ್ವಾಮೀಜಿ

ಸತ್ಸಂಗದಿಂದ ಸಂಸ್ಕಾರ, ಗುರುವಿನ ಸೇವೆಯಿಂದ ಮುಕ್ತಿ: ಸಹಜಾನಂದ ಸ್ವಾಮೀಜಿ  Refinement of character through Satsang, liberation through service to the Guru: Sahajananda Swamiji

ಲೋಕದರ್ಶನ ವರದಿ 

ಮಹಾಲಿಂಗಪುರ 18 :  ಗುರುವಿನ ಚರಣಗಳಲ್ಲಿ ನಿಸ್ವಾರ್ಥ ಸೇವೆ ಹಾಗೂ ನಿರ್ಮಲ ಭಕ್ತಿ ಮಾಡುವುದರಿಂದ ಮನುಷ್ಯನ ಜೀವನದಲ್ಲಿ ಜ್ಞಾನ, ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಸತ್ಸಂಗ ಹಾಗೂ ಗುರುಗಳ ಮಾರ್ಗದರ್ಶನವು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸಿ ಮೋಕ್ಷದತ್ತ ಕೊಂಡೊಯ್ಯುತ್ತದೆ ಎಂದು ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಪ.ಪೂ. ಶ್ರೀ ಸಹಜಾನಂದ ಮಹಾಸ್ವಾಮೀಜಿ ಹೇಳಿದರು.  

ಸಿದ್ಧಾರೂಢರ 44ನೇ ತೇಪೋತ್ಸವ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಪೂರ್ವಭಾವಿ ಪ್ರವಚನದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸದ್ಗುರುಗಳು ಹಾಗೂ ಸಾಧು-ಸಂತರ ಸಹವಾಸದಿಂದ ಉತ್ತಮ ಗುಣಗಳು ಬೆಳೆಯುತ್ತವೆ. ಇದರಿಂದ ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆ ಮೂಡಿ, ನೆಮ್ಮದಿಯ ಬದುಕಿಗೆ ಪ್ರವಚನ ಮತ್ತು ಸತ್ಸಂಗಗಳು ಸಹಕಾರಿಯಾಗುತ್ತವೆ ಎಂದರು.  ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಸತ್ಸಂಗದಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಯುತ್ತವೆ. ಗುರುವು ಅಜ್ಞಾನವನ್ನು ತೊಡೆದುಹಾಕಿ ಆಧ್ಯಾತ್ಮಿಕ ಜ್ಞಾನವನ್ನು ನೀಡುವ ಶಕ್ತಿಯಾಗಿದ್ದಾರೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಮಲ್ಲಪ್ಪ ಕಟಗಿ, ಲಕ್ಕಪ್ಪ ಚಮಕೆೇರಿ, ಕಲ್ಲಪ್ಪ ಚಿಂಚಲಿ, ಯಲ್ಲನಗೌಡ ಪಾಟೀಲ, ಮಹಾಲಿಂಗ ಹೊಸೂರ, ಮಹಾದೇವ ಮರೆಗುಡ್ಡಿ, ಬಸವರಾಜ ಮೇಟಿ, ಮಹಾಲಿಂಗ ಕರೆಹೊನ್ನ, ಮಹಾಂತೇಶ ಘಟ್ನಟ್ಟಿ, ಬಸವರಾಜ ಘಟ್ನಟ್ಟಿ, ಮಹೆಬೂಬ ಸನದಿ, ಶಂಕರ ನಿಲಾರಿ, ಭೀಮಪ್ಪ ಗಜಗೊಳ, ಚನ್ನಪ್ಪ ಗೂಗಾಡ, ಮಹಾಲಿಂಗ ಬಿಜ್ಜಲಭಾವಿ, ಪರಶು ಬಂಡಿ, ಆನಂದ ಸನದಿ, ಬಸೂ ಓಲೇಕಾರ, ಅಶೋಕ ಸುನಧೋಳಿ, ಉದ್ಧಪ್ಪ ನೀಲಾರಿ, ಗಿರಮಲ್ಲಪ್ಪ ಮೂಡಲಗಿ, ಮಹದೇವ ದಡೂತಿ, ಶಿವಾನಂದ ಬಿದರಿ, ಶಶಿಧರ ಉಳ್ಳಾಗಡ್ಡಿ, ಮಹಾದೇವ ಕೋಳಿಗುಡ್ಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಸಿದ್ಧಾರೂಢ ಮುಗಲಖೋಡ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಲಕ್ಷ್ಮಣ ಕಿಶೋರ್ ವಂದಿಸಿದರು. ಮಹೇಶ ಇಟಕಣ್ಣವರ ಪ್ರಸಾದ ವ್ಯವಸ್ಥೆ ಮಾಡಿದರು.