ಮುಂಬೈ,
ಮಾರ್ಚ್ 27, ಕೊವಿದ್ -19 ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತವನ್ನು
ತಡೆಯುವ ಪ್ರಯತ್ನವಾಗಿ ರಿಸರ್ವ್ ಬ್ಯಾಂಕ್(ಆರ್‌ಬಿಐ) ಶುಕ್ರವಾರ ಪ್ರಮುಖ ಬಡ್ಡಿದರಗಳನ್ನುಕಡಿತಗೊಳಿಸಿದ್ದು, ರೆಪೊ ದರವನ್ನು 75 ಮೂಲಾಂಕಗಳಷ್ಟು (ಶೇ0.75) ಹಾಗೂ
ರಿವರ್ಸ್ ರೆಪೊ ದರವನ್ನು 100 ಮೂಲಾಂಕಗಳಷ್ಟು( ಶೇ 1 ರಷ್ಟು) ಇಳಿಸಿದೆ. ಸದ್ಯ,
ರೆಪೊ ದರ (ಬ್ಯಾಂಕ್‍ಗಳಿಗೆ ರಿಸರ್ವ್ ಬ್ಯಾಂಕ್ ನೀಡುವ ಸಾಲದ ಮೇಲಿನ ಬಡ್ಡಿದರ) ಶೇ
4.4ರಷ್ಟು ಮತ್ತು ರಿವರ್ಸ್ ರೆಪೊ ದರ( ಬ್ಯಾಂಕ್‍ಗಳು ರಿಸರ್ವ್ ಬ್ಯಾಂಕ್‍ನಲ್ಲಿ
ಇಡಬೇಕಾಗಿರುವ ಹಣದ ಮೇಲಿನ ಬಡ್ಡಿದರ) ಶೇ 4.15 ರಷ್ಟಿದೆ. ಅಲ್ಲದೆ, ಸಾರ್ವವಜನಿಕ,
ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್ ಸೇರಿದಂತೆ ಬ್ಯಾಂಕ್‍ಗಳಲ್ಲಿ ಬಾಕಿ ಇರುವ ಎಲ್ಲಾ
ಸಾಲಗಳ ಮಾಸಿಕ ಕಂತು ಪಾವತಿ(ಇಎಂಐ)ಯನ್ನು ಮೂರು ತಿಂಗಳ ಕಾಲ ಮುಂದೂಡಲು ಅವಕಾಶ
ನೀಡಲಾಗಿದೆ ಆರ್‌ಬಿಐ ಗವರ್ನರ್ ಶಕ್ತಿ ಕಾಂತ್ ದಾಸ್ ಪ್ರಕಟಿಸಿದ್ದಾರೆ. ವಿಶ್ವ
ಬಹುದೊಡ್ಡ ಆರ್ಥಿಕ ಹಿಂಜರಿತ ಎದುರಿಸುವ ನಿರೀಕ್ಷೆ ಎಂದು ಹೇಳಿರುವ ಶಕ್ತಿಕಾಂತ್ ದಾಸ್,
ಭಾರತದ ಮೇಲೂ ಇದರ ಪರಿಣಾಮ ಬೀರಲಿದೆ.ಈ ಹಿನ್ನೆಲೆಯಲ್ಲಿ ಭಾರತ ಪರಿಸ್ಥಿತಿಗೆ ಹೇಗೆ
ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಅವರು
ಹೇಳಿದ್ದಾರೆ.