ಬಳ್ಳಾರಿಯಲ್ಲಿ ತಗ್ಗಿದ ವಾಯು ಮಾಲಿನ್ಯ ಪ್ರಮಾಣ

ಬಳ್ಳಾರಿ೨೫: ಕೊರೊನಾ ವೈರಸ್ನಿಂದ ಜಿಲ್ಲೆ ಅಪಾಯದ ವಲಯ ಆಗಿದ್ರೂ, ವಾಯುಮಾಲಿನ್ಯದ ಪ್ರಮಾಣ ಗಣನೀಯವಾಗಿ ತಗ್ಗಿದೆ. 

ಲಾಕ್ಡೌನ್ಗೂ ಮೊದಲು ವಾಯುಮಾಲಿನ್ಯದ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅಂದಾಜು 2.5 ಸೂಕ್ಷ್ಮ ಧೂಳಿನ ಪ್ರಮಾಣ ಇರುತ್ತಿತ್ತು. ದೇಶದ ರಾಜಧಾನಿ ದೆಹಲಿಗೆ ಹೋಲಿಸಿದ್ರೆ ಗಣಿ ನಾಡಿನಲ್ಲೇ ಜಾಸ್ತಿ ಇರುತ್ತಿತ್ತು. 

        ಆದರೀಗ ಮಾಲಿನ್ಯದ ಪ್ರಮಾಣ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ವಾಯು ಮಾಲಿನ್ಯ ಇಲಾಖೆ ಖಚಿತಪಡಿಸಿದೆ. ಹೊಸಪೇಟೆ, ಸಂಡೂರು ಹಾಗೂ ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಸ್ಪಾಂಜ್ ಐರನ್ ಕಾಖರ್ಾನೆಗಳಿದ್ದು, ಈ ತಾಲೂಕುಗಳಲ್ಲೇ ಅಂದಾಜು 120 ರಷ್ಟು ಪ್ರಮಾಣ ವಾಯುಮಾಲಿನ್ಯ ಇರುತ್ತಿತ್ತು. 

        ಅಪಾಯದ ವಲಯ ಎಂದು ಗುರುತಿಸಲಾಗಿತ್ತಾದ್ರೂ ಲಾಕ್ಡೌನ್ ಎಫೆಕ್ಟ್ನಿಂದ ಭಾರಿ ಮತ್ತು ಲಘು ವಾಹನಗಳು ರಸ್ತೆಗಿಳಿಯದ ಕಾರಣ ಕಳೆದೊಂದು ತಿಂಗಳಿಂದಲೂ ಅಂದಾಜು ಶೇ.50 ರಷ್ಟು ವಾಯುಮಾಲಿನ್ಯದ ಪ್ರಮಾಣ ಇಳಿಕೆಯಾಗಿದೆ. ಪಿಎಂ -2.5 ಹಾಗೂ ಪಿಎಂ -10 ಕಲಂನಲ್ಲಿ ಸದಾ 120 ರಷ್ಟು ಪ್ರಮಾಣದ ವಾಯುಮಾಲಿನ್ಯ ಇರುತ್ತಿದ್ದು, ಆದರೆ ಈಗ ಆ ಪ್ರಮಾಣ ಕಡಿಮೆಯಾಗಿದೆ. 

        ವಾಯುಮಾಲಿನ್ಯ ಇಲಾಖೆಯ ಹಿರಿಯ ಪರಿಸರ ಅಧಿಕಾರಿ ಎಂ.ಶ್ರೀಧರ ಅವರು ಮಾತನಾಡಿ, ಲಾಕ್ಡೌನ್ ಆದ ಬಳಿಕ ಮಾಲಿನ್ಯದ ಪ್ರಮಾಣ ಗಣನೀಯವಾಗಿ ತಗ್ಗಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲೂ ಕೂಡ ಇಂಥಹದ್ದೇ ವಾತಾವರಣ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.