ಲೋಕದರ್ಶನ ವರದಿ
ಕೊಪ್ಪಳ 19: ಇಂದು ಸಮಾಜದಲ್ಲಿ ಅದ್ದೂರಿ ವಿವಾಹಗಳನ್ನು ಮಾಡಿ ಸಾಕಷ್ಟು ವೆಚ್ಚ ಮಾಡುವಲ್ಲಿ ಯಾವುದೇ ಅರ್ಥವಿಲ್ಲ ಹೀಗಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಾಡಿಸುವುದರ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೈಯದ್ ಹೇಳಿದರು.
ಅವರು ನಗರದ ಸರ್ದಾರಗಲ್ಲಿ ಮುಸ್ಲಿಂ ಪಂಚ್ ಕಮೀಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಜರತ್ ಮಹೆಬೂಬ ಸುಬಾನಿ ಅವರ ಪವಿತ್ರ ಗ್ಯಾರವಿ ಷರೀಫ್ ಹಬ್ಬದ ಆಚರಣೆ ನಿಮಿತ್ಯ ಸತತ 17ನೇ ಬಾರಿಗೆ ಬಡ ಮುಸ್ಲಿಂ ಜೋಡಿಗಳ ಉಚಿತ ಸಾಮೂಹಿಕ (ನಿಖಾ) ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೋಂಡು ಮಾತನಾಡಿದ ಅವರು ಇಂದು ಎಷ್ಟೋ ಶ್ರೀಮಂತರು ದುಂದು ವೆಚ್ಚದ ಮೂಲಕ ಸಾಕಷ್ಟು ನಷ್ಟ ಮಾಡುತ್ತಾರೆ ಇದರಿಂದ ಯಾವುದೇ ಪ್ರಯೋಜವಿಲ್ಲ ಹೀಗಾಗಿ ಇಂದು ಇಂತಹ ಸಾಮೂಹಿಕ ವಿವಾಹಗಳ ಮೂಲಕ ಬಡವರಿಗೆ ನೆರವುವಾಗಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಸ್ಲಿಂ ಧರ್ಮ ಗುರು ಮುಫ್ತಿ ಮೌಲಾನಾ ಮಹ್ಮದ್ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕೀನಿರವರು ವಹಿಸಿ ಹಾಗೂ ಖಾಜಿ ಸಾಹೇಬರು ಪಾಲ್ಗೊಂಡು 05 ಜೋಡಿಗಳ ಸಾಮೂಹಿಕ ನಿಖಾ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಸದರ್ಾರಗಲ್ಲಿ ಮುಸ್ಲಿಂ ಪಂಚ್ ಕಮೀಟಿ ಅಧ್ಯಕ್ಷ ಶಹಾಬುದ್ದೀನ್ ಸಾಬ ನೂರಬಾಷಾ ವಹಿಸಿದ್ದರು. ವಿಶೇಷ ಆಮಂತ್ರಿತರಾಗಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಪಾಷಾ ಕಾಟನ್, ಅಂಜುಮನ್ ಅಧ್ಯಕ್ಷ ಹುಸೇನ್ ಪೀರಾ ಮುಜಾವರ (ಚಿಕನ್), ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ, ನಗರಸಭೆಯ ಮಾಜಿ ಸದಸ್ಯ ಹಾಗೂ ಸದರ್ಾರಗಲ್ಲಿ ಓಣಿಯ ಮಾನ್ವಿಪಾಷಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.