ಲೋಕದರ್ಶನ ವರದಿ
ಧಾರವಾಡ 12: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ತಾಲೂಕ,
ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಮುರುಘಾಮಠ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ11ರಂದು ಜರುಗಿತು.
ಧಾರವಾಡ ಪ್ರಾದೇಶಿಕ ನಿದರ್ೇಶಕ ಸೀತಾರಾಮ ಶೆಟ್ಟಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಅನುಷ್ಠಾನವಾಗಲು ಒಕ್ಕೂಟ ಪದಾಧಿಕಾರಿಗಳ ಸೇವೆ ಅಪಾರವಾದದ್ದು ಎಂದರು. ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಮದಿಹಾಳದ ಯೋಗ ಶಿಕ್ಷಕ ಉಮಾ ಅಂಗಡಿ ವಹಿಸಿದ್ದರು. ಒಕ್ಕೂಟ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರವನ್ನು ಧಾರವಾಡ ಸಬ್ಇನ್ಸಪೆಕ್ಟರ್ ಪ್ರಶಾಂತ ನೆರವೇರಿಸಿದರು. ಕರಡಿಗುಡ್ಡ ಗ್ರಾ.ಪಂ. ಅಧ್ಯಕ್ಷೆ ಪಾರವ್ವ ಮಡಿಹಾಳ ಸಾಧಕ ಸಂಘಗಳಿಗೆ ಬಹುಮಾನವನ್ನು ವಿತರಿಸಿದರು. ಹಾಗೆಯೇ ಮರೇವಾಡ ಗ್ರಾ.ಪ ಉಪಾಧ್ಯಕ್ಷ ಅಡಿವೆವ್ವ ಜಂಟಿನಗೌಡ್ರ ಮತ್ತು ಅಮ್ಮಿನಭಾವಿ ಸ.ಹಿ.ಪ್ರಾ.ಹೆ.ಮಕ್ಕಳ ಶಾಲೆ ಶಿಕ್ಷಕ ಗುಡುಸಾಬ ನದಾಫ ಉಪಸ್ಥಿತರಿದ್ದರು.
ತಾಲೂಕಿನ ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಇವರು ಕಾರ್ಯಕ್ರಮದ ಪ್ರಸ್ತಾವನೆಗೈದು ಸ್ವಾಗತಿಸಿದರು. ವಲಯದ ಮೇಲ್ವಿಚಾರಕರಾದ ತಿಮ್ಮಪ್ಪ ಪಿ, ಭಾರತಿ, ಹಾಗೂ ವಲಯದ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.