ಬ್ಯಾಡಗಿ: ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಪ್ರತಿಭೆಗೆ ಮನ್ನಣೆ ನೀಡಬೇಕು ಎಂದು ತಹಶೀಲ್ದಾರ ಶರಣಮ್ಮ ಕಾರಿ ಹೇಳಿದರು.
ಸ್ಥಳೀಯ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಬೆಂಗಳೂರಿನ ಬಾಲ ಭವನ ಸೊಸೈಟಿ, ತಾಲೂಕ ಪಂಚಾಯತ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ 5 ರಿಂದ 16 ವರ್ಷದ ಮಕ್ಕಳಿಗಾಗಿ ಆಯೋಜಿಸಿದ್ದ ಕನ್ನಡ ಗೀತೆಗಳ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಮಗುವಿನಲ್ಲಿ ಅಡಗಿರುವ ಸುಪ್ತ ಕಲಾ ಪ್ರತಿಭೆಯನ್ನು ಪಾಲಕರು ಮತ್ತು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲು ಮುಂದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ವಹಿಸಿದ್ದರು. ಅತಿಥಿಗಳಾಗಿ ತಾ ಪಂ. ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಕಾರ್ಯ ನಿವರ್ಾಹಕ ಅಧಿಕಾರಿ ಅಬಿದ ಗದ್ಯಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೆ. ರುದ್ರಮುನಿ ಆಗಮಿಸಿದ್ದರು.
ಗಾಯನ ಸ್ಪಧರ್ೆಯ 5 ರಿಂದ 8 ವರ್ಷದ ವಿಭಾಗದಲ್ಲಿ ಉಷಾ ಕೊಟ್ರಮ್ಮನವರ.( ಪ್ರಥಮ) ಗೌರಮ್ಮ ಹಾವನೂರು (ದ್ವಿತೀಯ) ಮಮತಾ ಪಾಟೀಲ ( ತೃತೀಯ)..
9 ರಿಂದ 12 ವರ್ಷದ ವಿಭಾಗದಲ್ಲಿ ದೀಪಾ ಶೀಗಿಹಳ್ಳಿ (ಪ್ರಥಮ), ಶರಣಕುಮಾರ ಕೊರಮರ ( ದ್ವಿತೀಯ), ಪ್ರೇರಣಾ ಬಡಿಗೇರ (ತೃತೀಯ).. 13 ರಿಂದ 16 ವರ್ಷದ ವಿಭಾಗದಲ್ಲಿ ರಾಕೇಶ್ ಕೋಣ ನವರ (ಪ್ರಥಮ), ಸಾಕಮ್ಮ ಲಮಾಣಿ ( ದ್ವಿತೀಯ), ಪ್ರಿಯಾಂಕ ಕೊರಮರ ( ತೃತೀಯ) ಸ್ಥಾನಗಳನ್ನು ಪಡೆದು ವಿಜೇತರಾಗಿದ್ದಾರೆ. ಮೂರು ವಿಭಾಗಗಳಲ್ಲಿ ಏರ್ಪಡಿಸಲಾಗಿದ್ದ ಸ್ಪಧರ್ೆಯಲ್ಲಿ ವಿಜೇತರಾದ 9 ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಸಿಡಿಪಿಓ ರಾಮಲಿಂಗಪ್ಪ ಅರಳಿಗುಪ್ಪಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಪ್ರಕಾಶ ಕೊರವರ ವಂದಿಸಿದರು. ಅಂಗನವಾಡಿ ಮೇಲ್ವಚಾರಕಿ ಸುವರ್ಣ ಜಡಿಮಠ ಕಾರ್ಯಕ್ರಮವನ್ನು ನಿರೂಪಿಸಿದರು.