ಲೋಕದರ್ಶನ ವರದಿ
ಹಾವೇರಿ08: ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸಮಾಜದಿಂದ ಮಾಡುವ ಪುರಸ್ಕಾರ ಶ್ರೇಷ್ಠವಾದದ್ದು, ಅದು ಅಗತ್ಯ ಕೂಡಾ ಎಂದು ಹಾವೇರಿ ಶಾಸಕ ನೆಹರೂ ಓಲೇಕಾರ ಹೇಳಿದರು.
ನಗರದ ಕೊಟ್ಟುರು ಬಸವೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಅಖಿಲ ಭಾರತೀಯ ಭಾವಸಾರ ಕ್ಷತ್ರೀಯ ಮಹಾಸಭಾ ತಾಲೂಕ ಘಟಕದಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದಜರ್ಿ ಕಾರ್ಯ ಮಾಡುವ ಭಾವ ಸಾರ ಕ್ಷತ್ರೀಯ ಸಮಾಜವು, ರಾಜಕೀಯವಾಗಿ ನೆಲೆ ಕಂಡುಕೊಳ್ಳಬೇಕಾಗಿದೆ. ಬರುವ ಸ್ಥಳೀಯ ಚುನಾವಣೆಯಲ್ಲಿ ಈ ಸಮಾಜದ ಮುಖಂಡರಿಗೆ ಪಕ್ಷದಿಂದ ಟಿಕೆಟ್ ನೀಡಿ, ಗೆಲ್ಲಿಸಿಕೊಂಡು ಬರಲಾಗುವದು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ಕ್ಷತ್ರೀಯ ಸಮಾಜ ಆಥರ್ಿಕ, ರಾಜಕೀಯ, ಸಾಮಾಜಿಕವಾಗಿ ಮುಂದೆ ಬರಬೇಕಿದೆ. ಇಂದಿನ ಪ್ರತಿಭಾ ಪುರಸ್ಕಾರ ಸಮಾರಂಭ, ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುವಂತ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಇದೇ ವೇಳೆ, ಸಮಾಜದ ಬಾಂಧವರು 22 ನೇ ವಾಡರ್ಿನಿಂದ ಸಮಾಜ ರತ್ನ ಮಾಹಾವೀರ ಘನಾತೆ ಅವರಿಗೆ ಟಿಕೆಟ್ ನೀಡುವಂತೆ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಓಲೇಕಾರ ಹಾಗೂ ಬಿಜೆಪಿ ಅಧ್ಯಕ್ಚ ಶಿವರಾಜ ಸಜ್ಜನರ ಅವರನ್ನು ಒತ್ತಾಯಿಸಿದರು.
ಜಯಪ್ರಕಾಶ ಅಂಬರಕರ್, ಸುಧೀರ ನವಲೆ, ಉಮೇಶ ಧಾಮೋಧರ, ಹನುಮಂತರಾಯ ನವಲೆ, ವಸಂತರಾವ್ ಮಾಳದಕರ, ಚಂದ್ರಕಾಂತ ಅವಘಾನ, ರಾಜು ಘನಾತೆ, ಪ್ರಮೋದ ನವಲೆ, ಶಾಮ್ ಅವಘಾನ, ಅನೀಲ ಬೇಂದ್ರೆ, ಪ್ರಕಾಶ ಗಿತ್ತೆ, ಪ್ರವೀಣ ಅವಳೆ ಸೇರಿದಂತೆ ಮುಂತಾದವರು ಹಾಜರಿದ್ದರು.