ವಿಜಯಪುರ ಮೇ.21: ದೇಶದ ವಿವಿಧ ರಾಜ್ಯಗಳಿಂದ, ಜಿಲ್ಲೆಗೆ ಆಗಮಿಸಿರುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಸಕರ್ಾರದ ನಿದರ್ೇಶನದಂತೆ ಪ್ರತಿದಿನ 1 ಸಾವಿರದಿಂದ 1500 ವರೆಗೆ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಸಕರ್ಾರದ ನಿದರ್ೇಶನದಂತೆ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದ್ದು, ತೀರಾ ತುತರ್ು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿದ ಟ್ರ್ಯೂನ್ಯಾಟ್ ಹಾಗೂ ಸಿಬಿನ್ಯಾಟ್ ಯಂತ್ರಗಳ ಮೂಲಕವೂ ಹೆಚ್ಚಿನ ಪ್ರಮಾಣದಲ್ಲಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಜಿಲ್ಲೆಗೆ ವಾಪಸಾಗಿದ್ದು, ಸಾಂಸ್ಥಿಕ ಕ್ವಾರಂಟೈನ್ಗೆ ಕ್ರಮ ಕೈಗೊಂಡಿದೆ. 14 ದಿನ ಕ್ವಾರಂಟೈನ್ ಅವಧಿ ಪೂರೈಸಿದವರಿಗೆ ತಕ್ಷಣ ಮನೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಓರ್ವ ವ್ಯಕ್ತಿ ಜಿಲ್ಲೆಗೆ ಆಗಮಿಸಿದ್ದು, ಅವರ ಕುಟುಂಬಸ್ಥರ ಮಾಹಿತಿಯಿಂದ ಆ ವ್ಯಕ್ತಿಗೆ ಸಾಂಸ್ಥಿಕ ಕ್ವಾರಂಟೈನ್ಗೆ ಕ್ರಮಕೈಗೊಳ್ಳಲಾಗಿ, ಈ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಸೋಂಕು ಇರುವುದು ದೃಢಪಟ್ಟಿದೆ.
ಇಂದು ದಿನಾಂಕ 21-05-2020 ರಂದು 30 ವರ್ಷ ವಯೋಮಾನದ ಈ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ತಗುಲಿದ್ದು, ರೋಗಿ ಸಂಖ್ಯೆ 1494 ಇವರು ಮಹಾರಾಷ್ಟ್ರ, ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದು, ನಗರದ ಜಿಲ್ಲಾಸ್ಪತ್ರೆಯಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಿಂದ ನಾಲ್ವರು ಕೋವಿಡ್-19 ಗುಣಮುಖ ರೋಗಿಗಳ ಬಿಡುಗಡೆ : ಕೋವಿಡ್-19 ದಿಂದ ಗುಣಮುಖರಾದ ನಾಲ್ವರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರಾದವರ ಸಂಖ್ಯೆ 41 ಕ್ಕೆ ಏರಿದೆ.
ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡವರಲ್ಲಿ ಇಬ್ಬರು ಮಹಿಳೆಯರು, ಓರ್ವ ಬಾಲಕಿ ಹಾಗೂ ಓರ್ವ ಪುರುಷ ಗುಣಮುಖ ರೋಗಿ ಒಳಗೊಂಡಿದ್ದು, 38 ವರ್ಷದ ಮಹಿಳೆ (ರೋಗಿ ಸಂಖ್ಯೆ -275), 33 ವರ್ಷದ ಮಹಿಳೆ (ರೋಗಿ ಸಂಖ್ಯೆ-538), 11 ವರ್ಷದ ಬಾಲಕಿ (ರೋಗಿ ಸಂಖ್ಯೆ -769) ಹಾಗೂ 45 ವರ್ಷದ ಪುರುಷ (ರೋಗಿ ಸಂಖ್ಯೆ -510) ಇವರು ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 61 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 41 ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ 16 ಕೋವಿಡ್ ಸೋಂಕಿತ ರೋಗಿಗಳು ಸಕ್ರಿಯ ರೋಗಿಗಳಾಗಿದ್ದು, ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 5073 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. 1705 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 3327 ಜನರು (1 ರಿಂದ 28 ದಿನಗಳ) ರಿಪರ್ೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 4 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 5595 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 3224 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 2310 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ರಕ್ತಹೀನತೆ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ವಿಶೇಷ ಚಿಕಿತ್ಸೆ: ಕೋವಿಡ್-19 ದಿಂದ ಗುಣಮುಖಳಾದ 11 ವರ್ಷದ ಬಾಲಕಿ (ರೋಗಿ ಸಂಖ್ಯೆ-769) ಆಸ್ಪತ್ರೆ ಸೇರ್ಪಡೆ ಸಂದರ್ಭದಲ್ಲಿ (ಫಲಸ್ಸಿಅಮಿಯಾ ಮೇಜರ್) ಎಂಬ ರಕ್ತಹೀನತೆ ಖಾಯಿಲೆಯಿಂದ ಬಳಲುತ್ತಿದ್ದಳು. ಅನುವಂಶಿಕವಾಗಿ ಇರುವ ಈ ಖಾಯಿಲೆ ರೋಗಿಗೆ ಕೆಂಪು ರಕ್ತಕಣಗಳ ಉತ್ಪತ್ತಿ ಕಡಿಮೆ ಇರುವುದರಿಂದ ಪ್ರತಿ ಮಾಹೆ ಈ ರೋಗಿಗೆ ಕೆಂಪುರಕ್ತ ನೀಡಬೇಕಾಗುತ್ತದೆ.
ಲಾಕ್ಡೌನ್ ಜಾರಿಯಿಂದಾಗಿ ಈ ಬಾಲಕಿಗೆ ಎರಡು ತಿಂಗಳುಗಳಿಂದ ರಕ್ತ ದೊರೆಯದೆ ರಕ್ತಹೀನತೆಯಿಂದ ಬಳಲಿ ಕೋವಿಡ್-19 ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದಳು. 3.5ಗ್ರಾ.ರಷ್ಟು ಇದ್ದ ಹಿಮೋಗ್ಲೋಬಿನ್ ಪ್ರಮಾಣದ ಸಂದರ್ಭದಲ್ಲಿ ತೀವ್ರ ನಿಶಕ್ತತೆಯಲ್ಲಿ ದಾಖಲಾಗಿದ್ದ ಈ ಬಾಲಕಿಗೆ ವಿಶೇಷ ಚಿಕ್ಕಮಕ್ಕಳ ತಜ್ಞರಿಂದ ಚಿಕಿತ್ಸೆ ಒದಗಿಸುವ ಮೂಲಕ ಹಿಮೋಗ್ಲೋಬಿನ್ ಹೆಚ್ಚಿಸಿದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆ ಸಂದರ್ಭದಲ್ಲಿ 8.5 ಗ್ರಾಂ,ರಷ್ಟು ಹಿಮೋಗ್ಲೋಬಿನ್ ಪ್ರಮಾಣ ಇತ್ತು ಎಂದು ವೈದ್ಯಾಧಿಕಾರಿ ಲಕ್ಕಣ್ಣವರ ಅವರು ತಿಳಿಸಿದ್ದಾರೆ. ಮುಂದಿನ 14 ದಿನಗಳ ಹೋಮ್ಕ್ವಾರಂಟೈನ್ ಸಂದರ್ಭದಲ್ಲಿಯೂ ತೀವ್ರ ನಿಗಾ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.. ಡಾ.ಎಸ್.ಎ ಕಟ್ಟಿ, ಡಾ. ಲಕ್ಕಣ್ಣವರ, ಡಾ.ಇಂಗಳೆ, ಡಾ.ಎ.ಜಿ.ಬಿರಾದಾರ, ಡಾ. ಸುಮಾ ಮಮದಾಪುರ, ಡಾ. ಚನ್ನಮ್ಮಾ, ಡಾ. ಜಾಧವ್, ಡಾ. ಝಳಕಿ, ಸಿಬ್ಬಂದಿಗಳಾದ ಸಬೀನಾ ಹಳ್ಳದ, ರವಿ ಕುಚಬಾಳ, ವೈ.ವಿ ಚೂರಿ, ಆಶಾ ಫರಾನಕರ, ಐ.ಕೆ ಮಾಂಡವಿ, ಬಾಳಮ್ಮ ಕೋಟ್ಯಾಳ, ಎ.ಬಿ ಸಾಳೂಂಕೆ, ಮಂಜು ಹೊಸಮನಿ, ಎಸ್,ಎಲ್ ಖಜಾಪೂರ, ಜಗದೀಶ ಮಾನಕರ, ಸುಜಾತಾ ಭಜಂತ್ರಿ ಹಾಗೂ ಇತರರಿದ್ದರು.