ಲೋಕದರ್ಶನ ವರದಿ
ಕೊಪ್ಪಳ : ಭಾಗ್ಯನಗರದ ಜ್ಞಾನ ಬಂಧು ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀ ಜಯಂತಿಯನ್ನು ಆಚರಿಸಲಾಯಿತು.
ಶಾಲೆಯ ಅಧ್ಯಕ್ಷರಾದ ದಾನಪ್ಪ ಕವಲೂರ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ 'ಗಾಂಧಿ ಮತ್ತು ಶಾಸ್ತ್ರೀ ಜೀವನ-ಸಾಧನೆಗಳನ್ನು ಸ್ಮರಿಸಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಈ ಇಬ್ಬರು ಮಹಾನ್ ವ್ಯಕ್ತಿಗಳಂತೆ ನಾವ್ಯಾರು ಅವರಂತಾಗಲು ಸಾಧ್ಯವಿಲ್ಲವಾದರೂ ಅವರ ಸರಳ ಜೀವನ ಉತ್ಕೃಷ್ಟ ತತ್ವಾದರ್ಶಗಳನ್ನ ಅಳವಡಿಸಿಕೂಳ್ಳ ಬೇಕು ಎಂದು ಹೇಳಿದರು.
ಶಾಲೇಯ ಪ್ರಾಂಶುಪಾಲರಾದ ಕೆ.ರೋಸ್ ಮೇರಿ ಮಾತನಾಡಿ ಗಾಂಧಿ ಮತ್ತು ಶಾಸ್ತ್ರಿವರ ಮೌಲ್ಯಗಳನ್ನು ಸ್ಮರಿಸಿದರು. ಇಬ್ಬರು ಮೇರು ವ್ಯಕ್ತಿತ್ವದ ನಾಯಕರುಗಳ ಜೀವನವೇ ಒಂದು ಉತ್ತಮ ಸಂದೇಶವಾಗಿದ್ದು ಅಂತಹ ಮಹಾನ್ ವ್ಯಕ್ತಿಗಳ ಗುಣ-ವಿಶೇಷಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೂಂಡು ಪಾಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಜ್ಯೋತಿ ಎಸ್, ಎಸ್ ಹಾಗೂ ಶಿಕ್ಷಕರಾದ ಮಲ್ಲಿಕಾರ್ಜನ ಮಾತನಾಡಿ ದೇಶ ಕಂಡ ಅಪ್ರತಿಮ ನಾಯಕರಾದ ಗಾಂಧಿ ಹಾಗೂ ಶಾಸ್ತ್ರೀಯವರ ಸ್ವಾತಂತ್ರ್ಯ ಹೋರಾಟ, ವ್ಯಕ್ತಿತ್ವ ವಿಶೇಷಗಳನ್ನು, ದೇಶಕ್ಕೆ ಅವರ ಕೂಡುಗೆಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾಥರ್ಿಗಳು ಹಾಜರಿದ್ದರು. ಶಿಕ್ಷಕರಾದ ಶಿವರಾಜ ಏಣಿ ನಿರೂಪಿಸಿ ವಂದಿಸಿದರು.