ದೇವರ ನಾಮಸ್ಮರಣೆಯಿಂದ ಸಾಕ್ಷಾತ್ಕಾರ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಮಾಣಿ

ಲೋಕದರ್ಶನ ವರದಿ

ಶಿರಹಟ್ಟಿ 14: 12ನೇ ಶತಮಾನದ ಶಿವಶರಣರು ಸಾರ್ಥಬದುಕು ನಡೆಸುವುದಕ್ಕಾಗಿ ಅಂಧಾಚಾರದ ನಡಾವಳಿಕೆಯನ್ನು ಬಿಟ್ಟು ಶರಣ ಪಥವನ್ನು ಅನುಸರಿಸುವುದು ಅವಶ್ಯ. ಭವ ಬಂಧನದ ಬಿಡುಗಡೆಗಾಗಿ ದೇವರ ದ್ಯಾನ, ಭಕ್ತಿಯನ್ನು ಅನುಸರಿಸುವುದು ಅವಶ್ಯ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಮ್.ಕೆ.ಲಮಾಣಿ ಹೇಳಿದರು. 

ಅವರು ಪಟ್ಟಣದ 2ನೇ ವಾರ್ಡ್ ಹರಿಪೂರ ಗ್ರಾಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕದ ವತಿಯಿಂದ ನಡೆದ ಶರಣ ಪೌಣರ್ಿಮೆ-52ರ ಕಾರ್ಯಕ್ರಮದ ಉಪನ್ಯಾಸದಲ್ಲಿ ಮಾತನಾಡಿದರು. 

ಶಿವ ಪಥವನ್ನು ಅರಿಯದೇ ಲಿಂಗಪೂಜೆ ಸಾರ್ಥಕವಾಗದು. ಭಕ್ತಿ, ಧ್ಯಾನ ಮತ್ತು ನಿಷ್ಠೆಯಿಂದ ಸೇವೆಯನ್ನು ಮಾಡಿದಾಗ ದೇವರು ಸಾಕ್ಷತ್ಕಾರನಾಗುವನು. ದೇವರ ಸಾಕ್ಷತ್ಕಾರವಾಗಲು ಗುರುವಿನ ಅನುಗ್ರಹ ಅಗತ್ಯ. ಗುರುವಿನ ಅನುಗ್ರಹವಿಲ್ಲದ ಜೀವನ ಏನೂ ಸಾಧಿಸಲಾರದು. ನಾವು ಎಷ್ಟೇ ಆಧುನಿಕತೆಯನ್ನು ಹೊಂದಿದ್ದರೂ ಕೂಡಾ ಮೂಲತತ್ವವನ್ನು ಮರೆಯಬಾರದು. ಜೀವನ ಮೌಲ್ಯದಿಂದ ಕೂಡಿರಬೇಕಾದರೆ ಶಿವಶರಣ ಸಂದೇಶ ಪಾಲನೆ ಅವಶ್ಯ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಹೆಚ್.ಎಮ್.ದೇವಗೇರಿ ಮಾತನಾಡಿ, ಆಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸುಮಾರು ನಾಲ್ಕೂವರೆ ವರ್ಷಗಳ ಕಾಲ ನಿರಂತರವಾಗಿ 52 ಮಾಸಗಳನ್ನು ಸಾರ್ಥಕಪಡಿಸಿಕೊಳ್ಳವುದಕ್ಕಾಗಿ ಶರಣ ಪೌಣರ್ಿಮೆ ಕಾಯರ್ಾಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಶರಣ ಸಂದೇಶಗಳನ್ನು ಹೊತ್ತು ತರುವ ಮಾಲಿಕೆ ಇದಾಗಿದ್ದು, ಇಂದಿನ ಪೀಳಿಗೆಗೆ ಶರಣ ಸಂದೇಶ ತಿಳಿಸಿಕೊಟ್ಟು ಸಾರ್ಥಕ ಬದುಕು ನಡೆಸುವುದಕ್ಕಾಗಿ ಮಾರ್ಗದರ್ಶನ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು. 

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಒಂದೊಂದು ಮನೆಯಲ್ಲಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು, ಇಂದಿಗೆ 52ನೇ ಕಾರ್ಯಕ್ರಮ ಜರುಗುತ್ತಿದೆ. ಇದರ ಲಾಭವನ್ನು ಯುವಕರು ಪಡೆದುಕೊಂಡು ದುಶ್ಚಟಗಳಿಗೆ ದಾಸರಾಗದೇ ಶರಣರ ತತ್ವಗಳನ್ನು ಅರಿತುಕೊಂಡು ಉತ್ತಮವಾದ ಆಲೋಚನೆ ಮತ್ತು ಕಾಯಕ ತತ್ವದಡಿ ಜೀವನ ನಡೆಸಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿ.ವಿ.ಬಾಳಿಗೇರಿ ಮತ್ತು ಹಿರಿಯರಾದ ಬಿ.ಎಸ್.ಹಿರೇಮಠ  ಮಾತನಾಡಿ, ಮನಸ್ಸು ಪರಿಶುದ್ದವಾಗಲು ದೇವ ಧ್ಯಾನ ಮಾಡುವುದು ಅವಶ್ಯ. ಟಿವ್ಹಿ ಮತ್ತು ಮೊಬೈಲಗಳಿಗೆ ದಾಸರಾಗದೇ ವಾಸ್ತವ ಬದುಕಿಗೆ ಆದ್ಯತೆ ನೀಡಬೇಕು. ಮೌಲ್ಯಯುತವಾದ ವಿಚಾರಗಳು ಮತ್ತು ನಡುವಳಿಕೆ ಹೊಂದುವುದರಿಂದ  ಸಮಾಜ ಪರಿಶುದ್ದವಾಗುವುದು. ನಮ್ಮ ಜೀವನ ಪರಿಮಳದಿಂದ ಕೂಡಿದ ಜೀವನವಾಗಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ನೀಲಮ್ಮ ಕಾಳಗಿ ಯವರಿಂದ ವಚನಗಳನ್ನು ಹಾಡುಗಳ ಮೂಲಕ ಹೇಳಿದರು. ವಿನಾಯಕ ಹಣಗಿ ಮತ್ತು ಬಸವರಾಜ ಮೂರಶಿಳ್ಳಿ ಯವರಿಂದ ವಚನಗಾಯನ ನೆರವೇರಿತು. 

ಕಾರ್ಯಕ್ರಮದಲ್ಲಿ ಈರಪ್ಪ ಯಾದಗೇರಿ ಅಧ್ಯಕ್ಷತೆಯನ್ನು ವಹಿಸಿದ್ದರು. 

ಸಿ.ಪಿ.ಕಾಳಗಿ, ವೆಂಕಟೇಶ ಅರ್ಕಸಾಲಿ, ರಾಚಪ್ಪ ಮೂರಶಿಳ್ಳಿ, ಸಂಗಪ್ಪ ಕಾಳಗಿ, ಬಸವರಾಜ ಭೋರಶೆಟ್ಟರ, ಹಾಲಪ್ಪ ಬಿಡನಾಳ, ಎಸ್.ಎಫ್.ಬಡೆಭೀಮಪ್ಪನವರ, ಹೆಚ್.ಎಸ್.ವಡ್ಡರ, ಚನ್ನವೀರಪ್ಪ ಮೂರಶಿಳ್ಳಿ, ಸಾವಿತ್ರಿ ಯಾದಗೇರಿ, ನಾಗಮ್ಮ ಕನ್ಯಾಳ, ಮೀನಾಕ್ಷಿ ದೇಸಾಯಿಪಟ್ಟಿ, ಮುತ್ತವ್ವ ಬಾಳಿಗೇರಿ, ನಿರ್ಮಲಾ ಕೊಡ್ಲಿವಾಡ, ಸುವರ್ಣ ಕೆರೂರ, ಸುಲೋಚನಾ ಸೊಂಟನೂರ, ನೀಲಮ್ಮ ಕಾಳಗಿ, ವಿಜಕ್ಕ ಕಾಳಗಿ, ಗೌರವ್ವ ಮೂರಶಿಳ್ಳಿ, ಲಕ್ಷ್ಮೀ ಮೂರಶಿಳ್ಳಿ, ಕಾಳವ್ವ ಮೂರಶಿಳ್ಳಿ, ಭದ್ರವ್ವ ಮೂರಶಿಳ್ಳಿ, ಪಾರಕ್ಕ ಮೂರಶಿಳ್ಳಿ,  ಮುಂತಾದವರು ಉಪಸ್ಥಿತರಿದ್ದರು.