ರೈತರು ತಮ್ಮ ಸ್ವಂತ ಜಮೀನು ವಿ.ವಿ.ಗೆ ನೀಡಲು ಸಿದ್ಧ

ಹಿರೇಬಾಗೇವಾಡಿ 06:  ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕಾಗಿ ಹಿರೇಬಾಗೇವಾಡಿ ಬಳಿ ಜಾಗವನ್ನು ಗುರುತಿಸಲಾಗಿದ್ದು, ಆ ಭಾಗದ ರೈತರು ತಮ್ಮ ಸ್ವಂತ ಜಮೀನನ್ನು ವಿ.ವಿಗೆ ನೀಡಲು ಸಿದ್ಧರಿದ್ದಾರೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿ ಪರ ಹೋರಾಟ ಸಮಿತಿಯ ಸಂಚಾಲಕ ಮಂಜುನಾಥ ವಸ್ತ್ರದ ಹೇಳಿದರು.

      ಹೊಸ ವರ್ಷದ ನಿಮಿತ್ಯ ಶುಭಾಶಯ ಕೋರಲು ಆರ್.ಸಿ.ಯು ಕುಲಪತಿಗಳನ್ನು   ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವ ವಿದ್ಯಾಲಯದ ಸ್ಥಾಪನೆಯ ವಿಚಾರವು ಈ ಭಾಗಕ್ಕೆ ಬಯಸದೆ ಬಂದಿರುವ ಭಾಗ್ಯ ಉನ್ನತ ಶಿಕ್ಷಣ ನೀಡುವಿಕೆಯ ಹಿನ್ನಲೆಯಿರುವ ಈ ವಿಷಯವು ಹಿರೇಬಾಗೇವಾಡಿಯು ಸೇರಿದಂತೆ ಸುತ್ತ ಮುತ್ತಲಿನ ಜನರಲ್ಲಿ ಸಂತಸವನ್ನು ಮೂಡಿಸಿದ್ದು,ಪಕ್ಷಾತೀತವಾಗಿ ಎಲ್ಲರು ಬೆಂಬಲಿಸುತ್ತಿದ್ದಾರೆ. ಇನ್ನು ಶಿಕ್ಷಣ ಪ್ರಮೀಗಳು ಪ್ರಜ್ಞಾವಂತೆ ನಾಗರಿಕರು ಹಾಗೂ ಯುವ ಸಮೂಹದ  ಕನಸಿನ ಕೂಸು ಈ ರಾಶಿ ಚನ್ನಮ್ಮ ವಿಶ್ವ ವಿದ್ಯಾಲಯ ಹಾಗಾಗಿ ವಿಶ್ವವಿದ್ಯಾಲಯದ ಈ ಯೋಜನೆಯು ಆದಷ್ಟು ಬೇಗ ಕಾರ್ಯಗತವಾಗಲಿ ಎಂಬ ಅಭಿಲಾಷೆಯು ಸಾರ್ವಜನಿಕರದ್ದು ಶಿಕ್ಷಣವೂ ಸೇರಿದಂತೆ ಈ ಕ್ಷೇತ್ರದ ಸವರ್ಾಂಗ  ಬೆಳವಣಿಗೆಯ ಹಿನ್ನೆಲೆಯಲ್ಲಿ ವಿ.ವಿ ಸ್ಶಾಪನೆಗೆ  ಅತೀ ಉತ್ಸಾಹದಿಂದ ರೈತರು ತಮ್ಮಯ ಜಮೀನನ್ನು ಸಾರ್ವಜನಿಕರ ಕನಸಿನ ಈ ಯೋಜನೆಗೆ ನೀಡಲು ಮುಂದೆ ಬಂದಿದ್ದಾರೆ.

    ಆದ್ದರಿಂದ ಈ ಭಾಗದ ರೈತರು ಮನದಾಳದ ಮಾತು , ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಆಲಿಸಲು ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ಅವರು ವಿ.ವಿ ಆಡಳಿತ ಮಂಡಳಿಯನ್ನು ವಿನಂತಿಸಿದರು.

     ಈ ಬಗ್ಗೆ ಪ್ರತಿಕ್ರಿಯಿಸಿದ ಆರ್,ಸಿ.ಯು ಕುಲಪತಿ ಪ್ರೊ.ರಾಮಚಂದ್ರಗೌಡ ಈ ವಿಷಯವು ತುಂಬಾ ಮಹತ್ವದಾಗಿದ್ದು, ತಾವು ಆಡಳಿತ ಮಂಡಳಿಯವರೊಂದಿಗೆ ಚಚರ್ಿಸಿ,ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಮ್ಮನ್ನು ಭೇಟಿಯಾದ ನಿಯೋಗಕ್ಕೆ ತಿಳಿಸಿದರು. ಪದವಿಧರ ರೈತ ಮುಖಂಡ ಬಸವಣ್ಣಿಪ್ಪಾ ಗಾಣಗಿ, ಶಿಕ್ಷಣ ಪ್ರಮೀಗಳಾದ ಅನ್ವರ ದೇವಡಿ, ಯಾಕೂಬ ದೇವಲಾಪೂರ, ಖತೀಬ ಬಾಗವಾನ  ಉಪಸ್ಧಿತರಿದ್ದರು