ಶತಮಾನೋತ್ಸವ ಕಾರ್ಯಕ್ರಮಕ್ಕೆ 5 ಸಾವಿರ ಕಾರ್ಯಕರ್ತರನ್ನು ಕರೆತರಲು ಸಿದ್ದ : ಪಠಾಣ
ಶಿಗ್ಗಾವಿ 22 : ಬೆಳಗಾವಿಯಲ್ಲಿ ಮಹಾತ್ಮ ಗಾಂದೀಜಿ ಬ್ರಿಟಿಷರನ್ನು ಹೊಡೆದೊಡಿಸಲು 1924 ರಲ್ಲಿ ಬಹೃತ ಸಮಾವೇಶವನ್ನು ಮಾಡಿದ್ದರು ಅದರ ಸವಿನೆನಪಿಗಾಗಿ 100 ನೇ ವರ್ಷದ ಶತಮಾನೋತ್ಸವ ಕಾರ್ಯಕ್ರಮಕ್ಕೆ 5 ಸಾವಿರ ಕಾರ್ಯಕರ್ತರನ್ನು ಕರೆತರಲು ಸಿದ್ದನಿದ್ದೇನೆ ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು.
ಪಟ್ಟಣದ ಗುಜರಾತ ಮಹಲನಲ್ಲಿ ಬೆಳಗಾವಿ ಸಮಾವೇಶ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಳಗಾವಿ ಸಮಾವೇಶಕ್ಕೆ ಕಾರ್ಯಕರ್ತರು ಒಂದೇ ತರಹದ ಡ್ರೇಸ ಕೋಡ ಮಾಡಿ ಶಿಗ್ಗಾವಿ ಸವಣೂರ ಕ್ಷೇತ್ರದ ಕಾರ್ಯಕರ್ತರು ಇತರರಿಗಿಂತ ಮಾದರಿಯಾಗಲು ಪಣ ತೊಡುತ್ತೇನೆ ಹಾಗೂ ಕಾರ್ಯಕರ್ತರಿಗೆ ಬಸ ವ್ಯವಸ್ಥೆ ಮಾಡಲು ಸಿದ್ದನಿದ್ದೇನೆ ಎಂದರು.
ಜಿಲ್ಲಾದ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ ಕೇಂದ್ರ ಸಚಿವ ಅಮಿತಶಾ ಅಂಬೇಡ್ಕರನ್ನು ಹಿಯಾಳಿಸಿದ್ದಾರೆ ಅಲ್ಲದೇ ಸಿ.ಟಿ.ರವಿ ಮಹಿಳೆಗೆ ಅವಮಾನಿಸಿದ ನಿಮಿತ್ಯ ಅವರ ಪ್ರತಿಕೃತಿ ದಹನಗೋಳಿಸೋಣ ಹಾಗೂ ಬೆಳಗಾವಿಯಲ್ಲಿ ಶತಮಾನೋತ್ಸವ ನಿಮಿತ್ಯ 27 ರಂದು ಬಹೃತ ಕಾರ್ಯಕರ್ತರ ಸಮಾವೇಶವಿದೆ ಅದನ್ನು ಯಶಸ್ವಿಗೋಳಿಸಬೇಕಾದರೆ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖೈಯಲ್ಲಿ ನಿಜವಾದ ಕಾರ್ಯಕರ್ತರು ಬರಬೇಕು ಎಂದರು.
ಭಾಕ್ಸ ಸುದ್ದಿ : ಮೈಸೂರ ದಸರಾ ಅಲಂಕಾರ ಮಾದರಿಯಲ್ಲಿ ಬೆಳಗಾವಿ ಸಮಾವೇಶ ವಿದ್ಯುತ್ತ ಅಲಂಕಾರದಿಂದ ಕಂಗೋಳಿಸಲಿದೆ 8 ಕೋಟಿ ವೆಚ್ಚದಲ್ಲಿ ಅಲಂಕರಾಗೊಳ್ಳಲಿದೆ.
ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ.
ಮಹಿಳಾ ಜಿಲ್ಲಾದ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿ ನೂತನ ಶಾಸಕ ಪಠಾಣ ಅವರಿಗೆ ಅಭಿನಂದನೆ ಸಲ್ಲಿಸಿ ನಂತರ ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ಗಾಂದೀಜಿವಹಿಸಿದ್ದರು ಇಂದು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯಲಿದೆ ಆದ್ದರಿಂದ ಹೆಚ್ಚಿನ ಸಂಖೈಯಲ್ಲಿ ಮಹಿಳೆಯರು ಸ್ವಯಂ ಪ್ರೇರಿತವಾಗಿ ಹೋಗಲು ಕಂಕಣ ಬದ್ದರಾಗಿದ್ದೇವೆ ಎಂದರು.
ಬ್ಲಾಕ ಅಧ್ಯಕ್ಷರಾದ ಬಿ.ಸಿ.ಪಾಟೀಲ, ಎಂ.ಜೆ.ಮುಲ್ಲಾ, ಹನುಮಂತ ಬಂಡಿವಡ್ಡರ, ಗುಡ್ಡಪ್ಪಾ ಜಲದಿ, ಶೇಖಪ್ಪ ಮಣಕಟ್ಟಿ, ಗೌಸಖಾನ ಮುನಶಿ, ಮಲ್ಲಮ್ಮ ಸೋಮನಕಟ್ಟಿ, ಶಂಭುಲಿಂಗಪ್ಪ ಆಜೂರ, ಅಬ್ದುಲಕರೀಂ ಮೊಗಲಲ್ಲಿ, ಬಾಬರ ಬೊವಾಜಿ, ಅತ್ತಾವುಲ್ಲಾ ಖಾಜೇಖಾನವರ, ಅಣ್ಣಪ್ಪ ಲಮಾಣಿ, ಚಂದ್ರು ಕೊಡ್ಲಿವಾಡ, ಎಂ.ಹೆಚ್.ಪಠಾಣ, ಮಜೀದ ಮಾಳಗಿಮನಿ, ಮುನ್ನಾ ಲಕ್ಷ್ಮೇಶ್ವರ, ಮುನ್ನಾ ಮಾಲದಾರ, ಮಹಾಂತೇಶ ಸಾಲಿ ಸ್ವಾಗತಿಸಿದರು. ಸುಧೀರ ಲಮಾಣಿ ನಿರೂಪಿಸಿದರು.