ಲೋಕದರ್ಶನ ವರದಿ
ಗದಗ: ಹೊಲದಲ್ಲಿ ಬೆಳೆದು ನಿಂತ ದವಸ ಧಾನ್ಯಗಳು ನೆರೆ ಹಾವಳಿಯಿಂದ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಸರಕಾರ ರೈತರಿಗೆ ಯಾವುದೇ ಹಣ ಬಿಡುಗಡೆ ಮಾಡದೇ ಕೇವಲ ಪ್ರಚಾರಕ್ಕೆ ಸೀಮಿತ ನಮ್ಮ ಉತ್ತರ ಕರ್ನಾಟಕ ಎಂಬುದು ತಿಳಿದು ಬರುತ್ತಿದೆ.ಮತಕ್ಕಾಗಿ, ಅಧಿಕಾರಕ್ಕಾಗಿ ನಾವು ಬೇಕು, ಮುಂದಿನ ದಿನ ಕಾನೂನು ಹೋರಾಟ ಮಾಡಲು ಸಿದ್ಧ, ಬೇಜವಾಬ್ದಾರಿ ಹೇಳಿಕೆ ಜನಪ್ರತಿನಿಧಿಗಳಿಂದ ಕೇಳುವ ಪರಿಸ್ಥಿತಿ ಉದ್ಬವಿಸಿದೆ, ಉತ್ತರ ಕನರ್ಾಟಕ ಸುಂದರ ಮಾಡುವ ಮಾತು ಕೇವಲ ಮಾತಿನಿಂದಾಗುವುದಿಲ್ಲ. ಪ್ರತಿ ಹಂತದ ನ್ಯಾಯಾಲಯದಲ್ಲಿ ಸಲ್ಲಿಸಲು ಸಿದ್ಧ, ನರೇಗಲ್ಲ ಹಿರೇಕೆರೆ ಯನ್ನು ಅಳತೆ ಮಾಡಲು ಒಂದು ವರ್ಷದಿಂದ ಯಾವುದೇ ಪ್ರತಿಕ್ರಿಯೆಯನ್ನು ಅಧಿಕಾರಿಗಳು ನೀಡುತ್ತಿಲ್ಲ.ಕೆರೆಯ ಸುತ್ತಲೂ 7 ಕಿ ಮೀ ವರೆಗೆ ಬೋರ್ ಅಂತರ್ಜಲ ಹೆಚ್ಚಾಗುತ್ತದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಮುಂದಿನ ದಿನ ಮಾನಗಳಲ್ಲಿ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.ಮಲಪ್ರಭೆ, ಬೆಣ್ಣಿ ಹಳ್ಳದಲ್ಲಿ ಬಹಳಷ್ಟು ಉಸುಕು (ಮರಳು) ತುಂಬಿರುವುದರಿಂದ ಅದನ್ನು ಟೇಂಡರ್ ಕರೆಯಲು ನಾಲ್ಕು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತೇವೆ. ನರೇಗಲ್ಲ ನ ಕೆರೆಯ ವಿಸ್ತೀರ್ಣ ಸುಮಾರು 80 ರಿಂದ 85ಎಕರೆ ಇದ್ದು ಅದರಲ್ಲಿ 20 ಎಕರೆಯನ್ನು ನಿವೃತ್ತ ಡಿ ವಾಯ್ ಎಸ್ ಪಿ ಅಸಬಿ ಎಂಬುವವರಿಗೆ ಡಿ ನೋಟಿಫಿಕೆಷನ್ 1980ರಲ್ಲಿ ಆಗಿರುತ್ತದೆ. ಸಿಂಗಟಾಲೂರ ಏತ ನೀರಾವರಿಯಿಂದ ನೀರು ತುಂಬಿಸುವ ಕಾರ್ಯವಾಗಬೇಕಿದೆ, ಸರಕಾರದ ಯೋಜನೆಗಳು ಗೀಡ, ಮರಗಳ ಬಗ್ಗೆ ಹೆಚ್ಚು ಒತ್ತು ನೀಡುತ್ತದೆ ಆದರೂ ಅಧಿಕಾರಿಗಳು ಆಸಕ್ತಿ ತೋರಿಸುತ್ತಲ್ಲ. ಪ್ರತ್ಯೇಕ ರಾಜ್ಯ ಬೇಕು ಅನ್ನುವ ಜನ ಪ್ರತಿನಿಧಿಗಳು ಸರಕಾರದ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಪಲವಾಗಿವೆ. ಕಾನೂನಾತ್ಮಕ ಹೋರಾಟ ಮಾಡಿ ತಪ್ಪಿತಸ್ಥರನ್ನು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸುತ್ತೇವೆ. ಅವೈಜ್ಞಾನಿಕ ಸಮೀಕ್ಷೆ, ಪರಿಹಾರ, ಮೌಲ್ಯ ಮಾಪನ ಮಾಡುವ ಅಧಿಕಾರಿಗಳಿಗೆ ಸರಿಯಾದ ತಿಳುವಳಿಕೆ ಇರುವದಿಲ್ಲ ಎಂದು ಪತ್ರಿಕಾ ಗೋಷ್ಠಿ ನಡೆಸಿದ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದರು.
ಇದೇ ಸಂದರ್ಭದಲ್ಲಿ ಉತ್ತರ ಕನರ್ಾಟಕ ಸಂಚಾಲಕರಾದ ಮುತ್ತು ಪಾಟೀಲ,ರೈತ ಸೇನಾ ಮುಖಂಡ ಪರಪ್ಪ ಗಾಳಿ, ರೈತ ಸೇನಾ ರೋಣ ತಾಲೂಕು ಅಧ್ಯಕ್ಷ ಮುತ್ತಣ್ಣ ಕುರಿ. ಇತರ ರೈತ ಸೇನಾ ಕಾರ್ಯಕರ್ತರು ಉಪಸ್ಥಿತರಿದ್ದರು.