ಚಿಕ್ಕೋಡಿ 08: ಲೋಕಸಭೆ ಚುನಾವಣೆಗೆ ದಿನಾಂಕವನ್ನು ಚುನಾವಣೆ ಆಯೋಗ ಯಾವದೇ ಗಳಿಗೆಯಲ್ಲಿ ಘೋಷನೆ ಮಾಡಬಹುದು. ಆದರೆ ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ಚುನಾವಣೆಯ ಪೂರ್ವ ತಯಾರಿಯನ್ನು ಚುನಾವಣೆ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಪಂ ಸಿಇಒ ರಾಜೇಂದ್ರ ಹೇಳಿದರು.
ಗುರುವಾರ ನಗರದ ಮಿನಿವಿಧಾನಸೌಧದ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಚುನಾವಣೆ ಯಾವುದೇ ಗಳಿಗೆಯಲ್ಲಿ ಘೋಷಣೆ ಮಾಡಿದರೂ ಕೂಡಾ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಚುನಾವಣೆಗೆ ಸಿದ್ಧತೆಗೆ ಕ್ರಮ ಕೈಗೊಳ್ಳಲಾಗಿದೆ. ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಎಂಟು ಜನ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಚುನಾವಣೆಯ ಹಿನ್ನಲ್ಲೆಯಲ್ಲಿ ಪ್ರತಿಯೊಂದು ಹಂತದಲ್ಲಿ ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಯಲು ಕ್ರಮ ಕೈಗೊಂಡಿದ್ದು, ಪೊಲೀಸ್ ಇಲಾಖೆ, ಅಬಕಾರಿ ಮತ್ತು ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ 1885 ಮತಗಟ್ಟೆ ಸ್ಥಾಪಿಸಲಾಗಿದೆ. ಅದರಲ್ಲಿ 16 ಮತಗಟ್ಟೆಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿದರೇ ನಾಲ್ಕು ಮತಗಟ್ಟೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಲಾಗಿದೆ ಎಂದರು.
ಕ್ಷೇತ್ರದಲ್ಲಿ ಜನವೇರಿ 1 ರಿಂದ ಇಲ್ಲಿಯವರಿಗೆ 1579309 ಮತದಾರರು ನೊಂದಣಿ ಮಾಡಿಕೊಂಡಿದ್ದಾರೆ. 18 ವರ್ಷ ತುಂಭಿದ ಯುವಕ-ಯುವತಿಯರು ಯಾರು ನೊಂದಣಿ ಮಾಡಿಕೊಂಡಿಲ್ಲ ಅವರು ಕೂಡಲೇ ಸ್ಥಳೀಯ ಬಿಎಲ್ಒಗಳನ್ನು ಸಂಪರ್ಕ ಮಾಡಿ ನೊಂದಣಿ ಮಾಡಿಕೊಂಡು ಮತದಾನ ಹೆಚ್ಚಿಸಲು ಸಹಕರಿಸಬೇಕು. ಸ್ಥಳೀಯ ಸಂಘ-ಸಂಸ್ಥೆಗಳು ಮತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಸುಮಾರು 30 ಕ್ಕಿಂತ ಹೆಚ್ಚಿನ ಚೆಕ್ ಪೋಷ್ಠಗಳನ್ನು ಸ್ಥಾಪಣೆ ಮಾಡಲಾಗುತ್ತದೆ. ವಿಧಾನಸಭೆ ಕ್ಷೇತ್ರಕ್ಕೆ 5 ರಿಂದ 7 ಚೆಕ್ ಪೋಷ್ಟಗಳನ್ನು ತೆಗೆದು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತದೆ. ಕ್ಷೇತ್ರದ ಮತದಾರರು ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ 50 ಸಾವಿರ ನಗದು ಹಣ ತೆಗೆದುಕೊಂಡು ಹೋಗುವಂತಿಲ್ಲ, ಮತ್ತು 10 ಸಾವಿರ ರೂ ಸಾಮಗ್ರಿ ಖರೀದಿಸುವಂತಿಲ್ಲ ಎಂಬ ಚುನಾವಣೆ ಆಯೋಗದ ಕಟ್ಟುನಿಟ್ಟಿನ ಆದೇಶವಿದೆ. 50 ಸಾವಿರ ನಗದು ಹಣ ತೆಗೆದುಕೊಂಡು ಹೋಗುವ ವೇಳೆಯಲ್ಲಿ ಅಧಿಕಾರಿಗಳಿಗೆ ಸಿಕ್ಕಾಕ್ಕಿಕೊಂಡರೆ ಹಣ ಎಲ್ಲಿಂದ ಬಂತು ಎಂಬುದನ್ನು ಸೂಕ್ತ ದಾಖಲೆ ಸಮೇತ ನೀಡಿದರೇ 24 ಗಂಟೆ ಅಥವಾ 48 ಗಂಟೆಯಲ್ಲಿ ಅವರ ಹಣ ಮರಳಿಸಲಾಗುತ್ತದೆ ಎಂದರು.
ಸಿ.ವಿಸೆಲ್ ಯ್ಯಾಪ್ ಬಳಸಿ: ಲೋಕಸಭೆ ಕ್ಷೇತ್ರದಲ್ಲಿ ಹಣ, ಸೀರೆ, ಊಟ ಹಂಚಿ ಮತದಾರರನ್ನು ಸೆಳೆಯುತ್ತಿದ್ದರೇ ಕೂಡಲೇ ಸಿ.ವಿಸಲ್ ಯ್ಯಾಪ್ ಬಳಸಿ ದೂರು ನೀಡಬೇಕು. ಕೂಡಲೇ ಅಧಿಕಾರಿಗಳು 30 ನಿಮಿಷದಲ್ಲಿ ಸ್ಥಳಕ್ಕೆ ಬಂದು ಘಟನೆ ಬಗ್ಗೆ ವಿವರಣೆ ಪಡೆದುಕೊಳ್ಳುತ್ತಾರೆ. ಸಾರ್ವಜನಿಕರು ದೂರು ಇದ್ದರೆ ಈ ಯ್ಯಾಫ್ ಬಳಸಬೇಕು ಎಂದರು.