ಹೂವಿನಹಡಗಲಿ : ಜು.30. ಹಿರಿಯರು ತಮ್ಮ ಮಕ್ಕಳನ್ನು ಮೊಬೈಲ್, ಟಿವಿಯಿಂದ ದೂರವಿರಿಸಿ ಓದಿನತ್ತ ತಿರುಗಿಸುವ ಪ್ರಯತ್ನ ಮಾಡಬೇಕಿದೆ ಎಂದು ಜೆಸಿಐ ಜಾಸ್ಮಿನ್ ಮಹಿಳಾ ಘಟಕದ ಅಧ್ಯಕ್ಷೆ ವೈಶಾಲಿ ಅಮಿತ್ ಹೇಳಿದರು.
ಪಟ್ಟಣದ ಗವಿಮಠದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಚನಗಾಯನ ಸ್ಪರ್ದೆಯ ಅಧ್ಕಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ಆಲೋಚನೆಗಳು ರೋಚಕವಾಗಿದ್ದಾಗ ಏನಾದರೂ ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.
ಜೆಸಿಐನ ಐಪಿಪಿ ನಾಗರತ್ನ ಕೃಷ್ಣರೆಡ್ಡಿ ಮಾತನಾಡಿ, ಪೋಷಕರು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಮಕ್ಕಳು ಅನುಕರಣೆ ಮಾಡುತ್ತಾರೆ. ತಂದೆ ತಾಯಿಯರು ತಮ್ಮ ಬಿಡುವಿನ ಸಮಯವನ್ನು ಮೊಬೈಲ್ನ್ನು ನೋಡುವುದರ ಮೂಲಕ ಕಾಲ ಹರಣ ಮಾಡುತ್ತಿದ್ದಾರೆ ಆದ್ದರಿಂದ ಮಕ್ಕಳು ಅದನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ಮಠಗಳಲ್ಲಿನ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಕಲಿಯುತ್ತಿದ್ದಾರೆ ಎಂದು ಶ್ಲಾಘಿಸಿದರು. ಇಂತಹ ವಾತಾವರಣ ಮನೆಗಳಲ್ಲಿ ಬಂದಾಗ ಶರಣರ ಸಂತರ ಜೀವನ ಆದರ್ಶವಾಗುವುದರಲ್ಲಿ ಸಂದೇಹವಿಲ್ಲ ಎಂದರು. ಕಾರ್ಯಕ್ರಮ ನಿರ್ದೇಶಕಿ ಜ್ಯೋತಿ ಹಾಲೇಶ್, ಸವಿತಾ ಭೀಮರೆಡ್ಡಿ, ಮಂಜುಳಾ ಬಸವನಗೌಡರ್, ಕುಮಾರ ಸಂಕಲ್ಪ ಉಪಸ್ಥಿರಿದ್ದರು.
ಉಪನ್ಯಾಸಕರಾದ ಹೆಚ್.ಎಂ.ಗುರುಬಸವರಾಜಯ್ಯ, ಶಂಕರ ಬೆಟಗೇರಿ ನಿರ್ಮಾಯಕರಾಗಿ ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳು ಭಕ್ತಿಗೇತೆ ಹಾಡಿದರು. ನಂತರ ಶ್ರೀಮಠದ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಹೆಚ್-30ಹೆಚ್ಡಿಎಲ್-1
ಹೂವಿನಹಡಗಲಿ ಪಟ್ಟಣದ ಗವಿಮಠದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಚನಗಾಯನ ಸ್ಪರ್ದೆಯ ಕಾರ್ಯಕ್ರಮದಲ್ಲಿ ಜೆಸಿಐ ಜಾಸ್ಮಿನ್ ಮಹಿಳಾ ಘಟಕದ ಅಧ್ಯಕ್ಷೆ ವೈಶಾಲಿ ಅಮಿತ್ ಅಧ್ಕಕ್ಷತೆ ವಹಿಸಿ ಮಾತನಾಡಿದರು.