ಪುಸ್ತಕ, ದಿನಪತ್ರಿಕೆ ಓದುವುದರಿಂದ ಹೃದಯವಂತಿಕೆ ಬೆಳೆಯುತ್ತದೆ: ರವೀಂದ್ರ ಭಟ
Reading books and newspapers develops kindness of heart: Ravindra Bhat
ಬಳ್ಳಾರಿ 17: ನಗರದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಓದುವುದರಿಂದ ಅವರಲ್ಲಿ ಹೃದಯವಂತಿಕೆ ಮತ್ತು ಸಾಮಾಜಿಕ ಕಾಳಜಿ ಹೆಚ್ಚುತ್ತದೆ ಎಂದು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಹೇಳಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಇಂಗ್ಲಿಷ್, ಕನ್ನಡ ಹಾಗೂ ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗಗಳ ವತಿಯಿಂದ ಆಯೋಜಿಸಿದ್ದ ಪ್ರೊ. ಶಿರಗಾನಹಳ್ಳಿ ಶಾಂತನಾಯ್ಕ ಅವರ “ನಡೆದಷ್ಟು ದಾರಿ ದೂರ” ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಮತ್ತು ಟಿವಿ ಹಾವಳಿಯಿಂದ ಮಕ್ಕಳಲ್ಲಿ ಪುಸ್ತಕ ಹಾಗೂ ಪತ್ರಿಕೆ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಇಂದಿನ ಸಮಾಜದಲ್ಲಿ ಹೋರಾಟಗಳೂ ಸಾಮಾಜಿಕ ಜಾಲತಾಣಗಳ ಮಟ್ಟಕ್ಕೆ ಸೀಮಿತವಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳ ಜೀವನ ಮೌಲ್ಯಗಳು ಹಾಗೆಯೇ ಉಳಿದಿವೆ. ಸಮಾಜದಲ್ಲಿ ನಮ್ಮಿಗಿಂತ ಹಿಂದುಳಿದವರ ಏಳ್ಗೆಗೆ ನಾವು ನೀಡುವ ಕೊಡುಗೆ ಮುಖ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಚಾರ್ಟೆಡ್ ಅಕೌಂಟೆಂಟ್ ಪನ್ನರಾಜ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಮತ್ತು ಆರ್ಥಿಕ ಅಸಮಾನತೆ ಇನ್ನೂ ಮುಂದುವರಿದಿದೆ.
ಹಕ್ಕುಗಳಿಗಾಗಿ ಧ್ವನಿ ಎತ್ತದಿದ್ದರೆ ಪ್ರಜಾಪ್ರಭುತ್ವ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದರು. ಕೆಕೆಆರ್ಡಿಬಿ ಹಾಗೂ 371(ಜೆ) ವಿಶೇಷ ಸ್ಥಾನಮಾನದಲ್ಲಿ ಬಳ್ಳಾರಿ ಜಿಲ್ಲೆಯ ಹೆಸರನ್ನು ಸೇರಿಸಲು ನಡೆದ ಹೋರಾಟವನ್ನು ಅವರು ಸ್ಮರಿಸಿದರು.ನಾಟಕಕಾರ ಹಾಗೂ ವಿಜಯನಗರ ಕಾಲೇಜು, ಬೆಂಗಳೂರಿನ ಸಹ ಪ್ರಾಧ್ಯಾಪಕರಾದ ಡಾ. ಬೇಲೂರು ರಘುನಂದನ್ ಮಾತನಾಡಿ, “ನಡೆದಷ್ಟು ದಾರಿ ದೂರ” ಕನ್ನಡದಲ್ಲಿ ಛಾಯಾಚಿತ್ರಗಳ ಮೂಲಕ ರೂಪುಗೊಂಡ ವಿಶಿಷ್ಟ ಕೃತಿಯಾಗಿದೆ ಎಂದರು. 198 ಛಾಯಾಚಿತ್ರಗಳನ್ನು ಒಳಗೊಂಡ ಈ ಕೃತಿಯಲ್ಲಿ ಬರಹಗಾರ ತನ್ನ ಬದುಕಿನ ಅನೇಕ ನೆನಪುಗಳನ್ನು ದಾಖಲಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದರು.ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಲೋಕೇಶ ವಿ ಮಾತನಾಡಿ, ಕೋವಿಡ್ ನಂತರ ಮಕ್ಕಳಲ್ಲಿ ಓದುವ ಹವ್ಯಾಸ ಕುಗ್ಗಿದೆ. ಅದಕ್ಕಾಗಿ ಚಿತ್ರಗಳ ಮೂಲಕ ಕೃತಿಯನ್ನು ರೂಪಿಸಿರುವುದು ಓದುಗರನ್ನು ಆಕರ್ಷಿಸುವ ಪ್ರಯತ್ನವಾಗಿರಬಹುದು ಎಂದು ಅಭಿಪ್ರಾಯಪಟ್ಟರು.ಕೃತಿಕಾರ ಪ್ರೊ. ಶಿರಗಾನಹಳ್ಳಿ ಶಾಂತನಾಯ್ಕ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲೂ ಫೋಟೋಗಳು ನೆನಪುಗಳಾಗಿ ಉಳಿಯುತ್ತವೆ. ಅವುಗಳ ಸಂಗ್ರಹವೇ ಈ ಕೃತಿಗೆ ರೂಪ ನೀಡಿದೆ ಎಂದರು. ಸಮಾಜದ ಸಂಘರ್ಷಗಳು ಬದುಕಿಗೆ ಪಾಠ ಕಲಿಸುತ್ತವೆ. ಸತ್ಯವನ್ನು ನೇರವಾಗಿ ಹೇಳದೇ ಸಾಹಿತ್ಯಿಕ ರೂಪದಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.ಕಲಾನಿಕಾಯದ ಡೀನ್ ಪ್ರೊ. ರಾಬರ್ಟ್ ಜೋಸ್ ಸಮಾರೋಪ ಭಾಷಣ ಮಾಡಿದರು. ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯಾದ ಸ್ಫೂರ್ತಿ ಕೆ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಸಂತೋಷ ಜಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ಡಾ. ಅಣ್ಣಾಜಿ ಕೃಷ್ಣರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಡಾ. ವಾತ್ಸಲ್ಯ ವಂದಿಸಿದರು.ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿಭಾಗ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ 