ಮುಂಬೈ, ಫೆ 10 : ಮಸ್ತ್ ಮಸ್ತ್ ಹುಡುಗಿ ರವಿನಾ ಟಂಡನ್, ಸ್ಯಾಂಡಲ್ ವುಡ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಲಿದ್ದಾರೆ ಎಂಬ ಸಂದೇಶವೊಂದನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ.
ನಟಿ ರವಿನಾ ಟಂಡನ್, ಕೆಲ ಸಮಯದಿಂದ ಚಿತ್ರರಂಗದಿಂದ ದೂರು ಉಳಿದಿದ್ದಾರೆ. ಈಗ ಸ್ಯಾಂಡಲ್ ವುಡ್ ನ ಕೆಜಿಎಫ್ -2 ಚಿತ್ರದ ಮೂಲಕ ಕಮ್ ಬ್ಯಾಕ್ ಆಗಲು ಸಜ್ಜಾಗಿದ್ದಾರೆ.
ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಆ್ಯಕ್ಷನ್ ಚಿತ್ರ ಕೆಜಿಎಫ್ -2 ನಲ್ಲಿ ರವಿನಾ ಅವರನ್ನು ಮತ್ತೊಮ್ಮೆ ಕನ್ನಡಕ್ಕೆ ಕರೆತರುತ್ತಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ನಿರ್ದೇಶಕ ಪ್ರಶಾಂತ್, ಡೇಥ್ ವಾರಂಟ್ ಜಾರಿ ಮಾಡಲು ಮಹಿಳೆ ಬಂದಿದ್ದಾಳೆ!!! ಸ್ವಾಗತ ನಿಮಗೆ ರವಿನಾ ಮೇಡಂ. ಆ್ಯಕ್ಟಿಂಗ್ ಕೆಜಿಎಫ್ ಚಾಪ್ಟರ್ -2 ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ರವಿನಾ, ರಮಿಕಾ ಸೇನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಬಾಲಿವುಡ್ ನಟ ಸಂಜಯ್ ದತ್ ಖಳನಾಯಕ ಅಧಿರಾ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಕೆಜಿಎಫ್: 2 ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಬಹುಭಾಷಾ ಚಿತ್ರದಲ್ಲಿ ಬಿಡುಗಡೆಗೊಳ್ಳಲಿದೆ.
ಈ ಚಿತ್ರವು ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ 1ರ ಮುಂದುವರೆದ ಭಾಗವಾಗಿದೆ.