ಭಾರತ ತಂಡದ ಬ್ಯಾಟಿಂಗ್ ವಿಭಾಗವನ್ನು ಕೊಂಡಾಡಿದ ರವಿಶಾಸ್ತ್ರಿ

ಬೆಂಗಳೂರು, ಜ 20, ಮೊದಲನೇ ಪಂದ್ಯದಲ್ಲಿ 10 ವಿಕೆಟ್ ಗಳ ಹೀನಾಯ ಸೋಲಿನ ಹೊರತಾಗಿಯೂ ಮೂರನೇ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿರುವ ಭಾರತ ತಂಡದ ಪ್ರದರ್ಶನವನ್ನು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಶ್ಲಾಘಿಸಿದ್ದಾರೆ.

ಪಂದ್ಯದ ಬಳಿಕ ಟಿವಿ ವಾಹಿನಿವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ”ನಮ್ಮ ತಂಡದ ಆಟಗಾರರು ಅದ್ಭುತ ಪ್ರದರ್ಶನ ತೋರಿದರು. ಮುಂಬೈ ಪಂದ್ಯದಲ್ಲಿನ ಸೋಲು, ಸತತ ಮೂರೂ ಪಂದ್ಯಗಳಲ್ಲಿನ ಟಾಸ್ ಸೋತರೂ ನಮ್ಮವರು ಎರಡೂ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದ್ದಾರೆ. ನಾವು ಕೆಳಮಟ್ಟದ ತಂಡದ ವಿರುದ್ಧ ಆಡಿದ್ದೇವೆ ಎಂದು ಯಾರೂ ಹೇಳಲಾರರು,” ಎಂದು ತಿಳಿಸಿದರು.ಭಾನುವಾರದ ಪಂದ್ಯದ ಡೆತ್ ಓವರ್ ಗಳಲ್ಲಿ ಮೊಹಮ್ಮದ್ ಶಮಿ ಶತಕ ಗಳಿಸಿದ್ದ ಸ್ಟೀವನ್ ಸ್ಮಿತ್ ಸೇರಿದಂತೆ  ಮೂರು ವಿಕೆಟ್ ಕಿತ್ತರು. ಇದರಿಂದ ಆಸ್ಟ್ರೇಲಿಯಾ ತಂಡವನ್ನು 286/9 ಕ್ಕೆ ನಿಯಂತ್ರಿಸಲಾಗಿತ್ತು. ಆದರೆ, 27 ಇತರ ರನ್ ನೀಡಲಾಗಿತ್ತು.

"ನಾವು ಮಧ್ಯಮ ಓವರ್  ಪ್ರಮುಖ ವಿಕೆಟ್ಗಳನ್ನು ಉರುಳಿಸಿದ್ದೇವೆ. ಕೊನೆಯ 10 ಓವರ್ ಗಳಲ್ಲಿ ತಂಡಗಳು ನಮ್ಮನ್ನು ಬೇರೆಡೆಗೆ ಕೊಂಡೊಯ್ಯಲು ಎದುರಾಳಿ ತಂಡ ಬಯಸಿದರೆ, ನಮ್ಮಲ್ಲಿ ಬಹಳಷ್ಟು ವೈವಿಧ್ಯತೆಯ ಬೌಲಿಂಗ್ ಶೈಲಿಗಳಿವೆ. ಯಾರ್ಕರ್ 130 ವರ್ಷ ಹಳೆಯದಾಗಿರಬಹುದು, ಆದರೆ ಅದು (ಯಾರ್ಕರ್) ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ,”ಅವರು ಹೇಳಿದರು. 

ಮೊದಲನೇ ವಿಕೆಟ್ ಗೆ ತಂಡಕ್ಕೆ ಸಂದಾಯವಾದ 65 ರನ್ ಹಾಗೂ ರೋಹಿತ್ ಹಾಗೂ ಕೊಹ್ಲಿ ಅವರ ಮುರಿಯದ ಎರಡನೇ ವಿಕೆಟ್ ಜತೆಯಾಟದಲ್ಲಿ ಮೂಡಿಬಂದ 137 ರನ್ ಗಳು ತಂಡದ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು. ಜತೆಗೆ, ರೋಹಿತ್ ಔಟ್ ಆದ ಬಳಿಕ ಬಂದ ಶ್ರೇಯಸ್ ಅಯ್ಯರ್ 35 ಎಸೆತಗಳಲ್ಲಿ 44 ರನ್ ಚಚ್ಚಿದ್ದರು. 

“ಗುರಿ ಹಿಂಬಾಲಿಸಿದ ನಮಗೆ ರೋಹಿತ್ ಹಾಗೂ ರಾಹುಲ್ ಉತ್ತಮ ಆರಂಭ ನೀಡಿದ್ದರು. ರಾಹುಲ್ ಔಟ್ ಆದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೊಡ್ಡ ಜತೆಯಾಟವಾಡಿದರು. ಇವರಿಬ್ಬರೂ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಈ ಇನಿಂಗ್ಸ್ ನಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನಲ್ಲಿ ವಿಶ್ವಾಸ ಎದ್ದು ಕಾಣುತ್ತಿತ್ತು,” ಎಂದು ಭಾರತದ ಬ್ಯಾಟಿಂಗ್ ವಿಭಾಗವನ್ನು ರವಿಶಾಸ್ತ್ರಿ ಶ್ಲಾಘಿಸಿದರು.