ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ರವಿ.ಡಿ.ನಾಯ್ಕ ಅಧಿಕಾರ ಸ್ವೀಕಾರ,

ಧಾರವಾಡ 25:  ಧಾರವಾಡ ಜಿಲ್ಲೆಯ ಗ್ರಾಮೀಣ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ರವಿ.ಡಿ.ನಾಯ್ಕ ಇತ್ತಿಚ್ಚೆಗೆ ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ನಿವಾಸಿಗಳಾದ ಇವರು ಪಿಯುಸಿವರಗಿನ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿದ್ದಾರೆ. ನಂತರ ಭಾರತಿಯ ವಾಯು ಸೇನೆ ಸೇವೆಗೆ ಸೇರಿದ ರವಿ ನಾಯ್ಕ ಅವರು ಎಂ.ಬಿ.ಎ ಪಧವಿ ಪಡೆದಿದ್ದಾರೆ.

ಭಾರತಿಯ ವಾಯು ಸೇನೆ ಹಾಗೂ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇವೆ ಸಲ್ಲಿಸಿ, 2014ರ ಕನರ್ಾಟಕ ಗೆಜೆಟೆಡ್ ಆಫೀಸರ್ಸ್ (ಕೆ.ಎ.ಎಸ್.) ಪರೀಕ್ಷೆ ಉತ್ತೀರ್ಣರಾಗಿ ಕನರ್ಾಟಕ ಪೊಲೀಸ್ ಸೇವೆಗೆ ಸೇರಿದ್ದಾರೆ. 

ತಮ್ಮ ಸೇವಾ ಪೂರ್ವ ಅವಧಿಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ದಲ್ಲಿ ಪ್ರೋಬೆಷನರಿ ಪೊಲೀಸ್ ಅಧಿಕಾರಿಯಾಗಿ ಪೂರೈಸಿ, ನವೆಂಬರ್ 12, 2019ರಿಂದ ಧಾರವಾಡ ಜಿಲ್ಲೆಯ ಗ್ರಾಮೀಣ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.