ನಾಳೆ ನಗರಕ್ಕೆ ರವಿ ಚನ್ನಣ್ಣವರ

ಲೋಕದರ್ಶನವರದಿ

ಮಹಾಲಿಂಗಪುರ೧೧ : ಸ್ಥಳೀಯ ನ್ಯೂ ಮಿಲೇನಿಯಂ ಶಿಕ್ಷಣ ಸಂಸ್ಥೆಯ ಸಿ. ಕೆ. ಚಿಂಚಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ಚಿಂಚಲಿ ಉತ್ಸವ ಕಾರ್ಯಕ್ರಮ ಜ. 13 ರಂದು ಸಂಜೆ 4 ಗಂಟೆಗೆ ಶಾಲಾ ಆವರಣದಲ್ಲಿ ಜರುಗಲಿದೆ.  

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದು, ಮುಖ್ಯ ಅತಿಥಿಯಾಗಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ ಆಗಮಿಸಿ ಭವಿಷ್ಯದ ಬುನಾದಿಗೆ ರವಿ ಚನ್ನಣ್ಣವರ ಕನಸುಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.  ರಾಯಚೂರು ಜಿಲ್ಲೆಯ ಕವಿತಾಳ ಗ್ರಾಮದ ಪ್ರಗತಿ ಪರ ರೈತ ಮಹಿಳೆ ಕವಿತಾ ಮಿಶ್ರಾ, ಯುವ ನಾಯಕ ಅರುಣ ಕಾರಜೋಳ ಮತ್ತು  ವಿಶೇಷ ಸನ್ಮಾನಿತರಾಗಿ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಆಗಮಿಸಲಿದ್ದು , ಸಂಸ್ಥೆಯ ಕಾರ್ಯದಶರ್ಿ ಮಹಾಂತೇಶ ಚಿಂಚಲಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಇಂದು ನಡೆದ ಪೂರ್ವ ಭಾವಿ ಸಭೆಯ ಸುದ್ದಿ ಗೋಷ್ಠಿಯಲ್ಲಿ ಮುಖ್ಯೋಪಾಧ್ಯಾಯ ಸುರೇಶ ಗೊರಬಾಳ ತಿಳಿಸಿದ್ದಾರೆ.