ಮುಖ್ಯ ಸಂಚಾಲಕ ಮಲ್ಲೇಶಪ್ಪಗೆ ರತ್ನಶ್ರೀ ಪ್ರಶಸ್ತಿ ಪ್ರದಾನ

ಲೋಕದರ್ಶನವರದಿ

ಬ್ಯಾಡಗಿ: ದೇಶಾಭಿಮಾನ ಹಾಗೂ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗಣನೀಯ ಸೇವೆ ಸಲ್ಲಿಸಿದ ಬ್ಯಾಡಗಿಯ ಮಾಜಿ ಯೋಧರಾದ ರಾಜ್ಯ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ (ನ್ಯಾಸ) ಮುಖ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಅವರಿಗೆ ರತ್ನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

ಬೆಂಗಳೂರಿನ ರವೀಂದ್ರ ಕಲಾ ಮಂದಿರದಲ್ಲಿ ಪ್ರಜಾಹಿತ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್, ಕನರ್ಾಟಕ ಸ್ಟೇಟ್ ಮೀಡಿಯಾ ಮತ್ತು ವೇಲ್ಫೇರ್ ಅಸೋಸಿಯೇಷನ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ರತ್ನಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಲ್ಲೇಶಪ್ಪ ಅವರಿಗೆ ದೇಶ ಸೇವೆ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. 

ಈ ಸಮಾರಂಭದಲ್ಲಿ ನಿವೃತ್ತ ನ್ಯಾಯಾಧೀಶ ನಾಗರಾಜ ಅರಳಿ, ಮಾಜಿ ಸಚಿವೆ ಲೀಲಾವತಿ ಪ್ರಸಾದ, ಬೆಂಗಳೂರಿನ ಇಂಡೊಸಸ್ ಲೈಫ್ ಸೈನ್ಸ್ ಛೇರ್ಮನ್ ಡಾ. ಎಸ್.ಎಚ್. ಕುಲಕರ್ಣಿ, ಹಿರಿಯ ಚಿತ್ರನಟ ಕಲಾ ತಪಸ್ವಿ ರಾಜೇಶ, ಪ್ರಜಾಹಿತ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಎಲ್. ಮಂಜುನಾಥ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.