ದರ ಮನಸೋ ಇಚ್ಛೆ ಏರಿಸಿದ್ರೇ ಕ್ರಮ: ಡಿಸಿ ನಕುಲ್

ಬಳ್ಳಾರಿ.27: ಕೋವಿಡ್-19ನ ಇದೇ ಸಂದರ್ಭ ಬಳಸಿಕೊಂಡು ತರಕಾರಿ ಹಾಗೂ ಇನ್ನೀತರ ಅಗತ್ಯ ವಸ್ತುಗಳ ದರವನ್ನು ಮನಸೋ ಇಚ್ಛೆ ಏರಿಸಿ ಸಾರ್ವಜನಿಕರನ್ನು ವಸೂಲಿ ಮಾಡಿದ್ರೇ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಗಳ ಸಭಾಂಗಣದಲ್ಲಿ ಅಗತ್ಯ ವಸ್ತುಗಳ ಸಂಗ್ರಹಣೆ, ದಾಸ್ತಾನು ಮತ್ತು ಸಾಗಾಣಿಕೆ ಹಾಗೂ ಇನ್ನೀತರ ವಿಷಯಗಳ ಕುರಿತು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ಕೋವಿಡ್-19ನ ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ, ದಾಸ್ತಾನು ಮತ್ತು ಸಾಗಾಣಿಕೆ ವಿಷಯದಲ್ಲಿ ಸರಕಾರ ನೀಡಲಾಗಿರುವ ವಿನಾಯ್ತಿಯನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬೇಡಿ; ಒಂದು ವೇಳೆ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.

ಅಗತ್ಯ ವಸ್ತುಗಳ, ದಾಸ್ತಾನು ಮತ್ತು ಸಾಗಾಣಿಕೆ ಹಾಗೂ ಅಂಗಡಿಗಳ ಸದಾ ಒಪನ್ ಇರುವ ನಿಟ್ಟಿನಲ್ಲಿ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಅಗತ್ಯ ವಸ್ತುಗಳನ್ನು ಖರೀದಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 5ರಿಂದ 7ರವರೆಗೆ ಅವಕಾಶ ನೀಡಲಾಗಿದ್ದು, ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಬಳಸಿಕೊಂಡು ಜನರು ಖರೀದಿ ಮಾಡಲು ಮುಂದೇ ಬರಬೇಕು. ಈ ಸಂದರ್ಭದಲ್ಲಿ ವಾಹನಗಳ ಓಡಾಟ ಕೂಡ ಸಾಮಾಜಿಕ ಅಂತರ ಪಾಲಿಸಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

              ಅಂಗಡಿ ಮಾಲೀಕರು ಕೂಡ ಸಾಮಾಜಿಕ ಅಂತರ ಪಾಲಿಸುವ ನಿಟ್ಟಿನಲ್ಲಿ ಮಾಕರ್ಿಂಗ್ ವ್ಯವಸ್ಥೆ ಮಾಡಬೇಕು ಹಾಗೂ ಜನರಿಗೆ ಅಗತ್ಯ ವಸ್ತುಗಳ ಅಂಗಡಿ ಸದಾ ಒಪನ್ ಇರಲಿದ್ದು, ತಮಗೆ ಎಷ್ಟು ಅವಶ್ಯವೋ ಅಷ್ಟನ್ನೇ ಖರೀದಿ ಮಾಡಿ ಅಂತ ತಿಳಿಸಬೇಕು ಎಂದು ಅವರು ಹೇಳಿದರು.

ಟ್ರಾನ್ಸಪೋಟರ್್ ಮತ್ತು ಗೂಡ್ಸ್ ವೈಹಿಕಲ್ಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಡಿಸಿ ನಕುಲ್ ಅವರು ಅಗತ್ಯ ವಸ್ತುಗಳ ಅಂಗಡಿ ಮಾಲೀಕರು ಕಾಮರ್ಿಕರನ್ನು ವಿನಾಯ್ತಿ ನೀಡಲಾದ ಅವಧಿಯಲ್ಲಿ ಕರೆಯಿಸಿಕೊಂಡು ಕೆಲಸ ಮಾಡಿಕೊಳ್ಳಬಹುದಾಗಿದೆ ಎಂದು ಅಂಗಡಿ ಮಾಲೀಕರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

      ಮೊಳಕಾಲ್ಮೂರು ಆಂಬ್ಯುಲೆನ್ಸ್ವೊಂದರಲ್ಲಿ 6 ಜನರನ್ನು ಕರೆದುಕೊಂಡು ಹೋಗಲಾಗುತ್ತಿತ್ತು;       ಚೆಕ್ಪೋಸ್ಟ್ನಲ್ಲಿ ತಡೆದು ತಪಾಸಣೆ ಮಾಡಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ವಿವರಿಸಿದರು.

      ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿದರ್ೇಶಕ ಡಾ.ಕಾ.ರಾಮೇಶ್ವರಪ್ಪ ಅವರು ಅಗತ್ಯ ವಸ್ತುಗಳ ಉತ್ಪಾದನೆ,ಅಗತ್ಯ ವಸ್ತುಗಳ ಬೇಡಿಕೆ ಮತ್ತು ಪೂರೈಕೆ, ದೈನಂದಿನ ವಹಿವಾಟು,ಅಗತ್ಯ ವಸ್ತುಗಳ ಸಾಗಾಣಿಕೆ ಸೇರಿದಂತೆ ಇನ್ನೀತರ ಪ್ರಮುಖ ವಿಷಯಗಳ ಕುರಿತು ವಿವರಣೆ ಸಭೆಗೆ ನೀಡಿದರು.

   ಈ ಸಂದರ್ಭದಲ್ಲಿ ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿದರ್ೇಶಕ ಸೋಮಶೇಖರ ಬಂಕದ್, ಕೃಷಿ ಇಲಾಖೆಯ ಜಂಟಿ ನಿದರ್ೇಶಕ ಮಲ್ಲಿಕಾಜರ್ುನ, ಕೆಎಂಎಫ್ ವ್ಯವಸ್ಥಾಪಕ ನಿದರ್ೇಶಕ ಮಲ್ಲಿಕಾಜರ್ುನ ಬುಕ್ಕಾ ಸೇರಿದಂತೆ ಅಗತ್ಯ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಅಂಗಡಿ ಮಾಲೀಕರು,ವಿತರಕರು ಪಾಲ್ಗೊಂಡಿದ್ದರು.