ರಾಷ್ಟ್ರೀಯ ಈಡಿಗ ಮಹಾ ಮಂಡಳಿ ವಿವಿಧ ಬೇಡಿಕೆಗೆ ಪ್ರತಿಭಟನೆ

Rashtriya Eediga Maha Mandal protested various demands

ರಾಷ್ಟ್ರೀಯ ಈಡಿಗ ಮಹಾ ಮಂಡಳಿ ವಿವಿಧ ಬೇಡಿಕೆಗೆ ಪ್ರತಿಭಟನೆ

ಬೆಳಗಾವಿ 19: ಈಡಿಗ ಬಿಲ್ಲವ ದೀವರು ನಾಮಧಾರಿ 26 ಒಳ ಸಮುದಾಯ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸುವರ್ಣಸೌಧ ಎದುರಿಗೆ ಪ್ರತಿಭಟನೆ ನಡೆಸುತ್ತಿರುವರು. ಎರಡು ವರ್ಷದ ಹಿಂದೆ ಸ್ಥಾಪನೆಯಾಗಿರುವ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ದಿ ನಿಗಮಕ್ಕೆ ರೂ.500 ಕೋಟಿರೂಪಾಯಿ ಹಣವನ್ನು ಬಿಡುಗಡೆ ಮಾಡುವುದು ಮತ್ತು ನಿಗಮಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನುಆಯ್ಕೆ ಮಾಡುವುದು.ಸಮುದಾಯಎಸ್‌.ಟಿ. ಮೀಸಲಾತಿ ಸೇರಿಸುವುದು ಮತ್ತು ಕುಲ ಶಾಸ್ರ್ತಅಧ್ಯಾಯನವನ್ನು ಕೂಡಲೇ ಪ್ರಾರಂಭ ಮಾಡುವುದು.ಕುಲ ಕಸುಬು ಕಸಿದುಕೊಂಡ ಸರ್ಕಾರಗಳು ಈ ಸಮುದಾಯಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಕೂಡಲೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು.ಸಮಾನತೆಯ ಹರಿಕಾರರಾದ ವಿಶ್ವಗುರು ಬ್ರಹ್ಮಶ್ರೀನಾರಾಯಣ ಗುರುಗಳ ಪುತ್ತಳಿಯನ್ನು ರಾಜ್ಯದ ರಾಜಧಾನಿಯಾದ ಬೆಂಗಳೂರು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸುವುದು.ರಾಜ್ಯ ಸರ್ಕಾರದಲ್ಲಿ ಸಮುದಾಯದ ಮತ್ತೊಬ್ಬರಿಗೆ ಮಂತ್ರಿ ಸ್ಥಾನ ನೀಡಿ ಸಮುದಾತಕ್ಕೆ ರಾಜಕೀಯ ನ್ಯಾಯವನ್ನು ಒದಗಿಸಲು ಒತ್ತಾಯ. 

ಇನ್ನೂ ಹತ್ತು ಹಲವು ಪ್ರಮುಖ ಬೇಡಿಕೆಗಳು ಸಮುದಾಯದಲ್ಲಿ ಇವೆ. ಈಗಾಗಲೇ ಹಲವಾರು ಮನವಿ ಪತ್ರವನ್ನು ಸಲ್ಲಿಸಿದರೂ ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲೇ ಈ ಮನವಿಯನ್ನು ವಿಶೇಷವಾಗಿ ಪರಿಗಣಿಸಿ ಸಮುದಾಯವಕ್ಕೆ ನ್ಯಾಯವನ್ನು ಒದಗಿಸಿ ಕೊಡಬೇಕೆಂದು ಒತ್ತಾಯ. ಒಂದು ವೇಳೆ ಈ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿದರೆ ಈ ಸಮುದಾಯ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.