ಲೋಕದರ್ಶನ ವರದಿ
ಬಾಗಲಕೋಟೆ 4: ಜನೇವರಿ 22 ರಂದು ಹುನಗುಂದದಲ್ಲಿ ನಡೆಯಲಿರುವ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನವರ ಜಯಂತ್ಯೋತ್ಸವ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಬೃಹತ್ ಜಿಲ್ಲಾ ಸಮಾವೇಶದ ಅಂಗವಾಗಿ ಜನೇವರಿ 6 ರಿಂದ ಜಿಲ್ಲೆಯಲ್ಲಿ ಚನ್ನಮ್ಮ ವಿಜಯ ಜೊ್ಯೀತಿ ಯಾತ್ರೆ ಸಂಚರಿಸಲಿದೆ.
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಚನ್ನಮ್ಮ ವಿಜಯ ಜೊ್ಯೀತಿಯಾತ್ರೆಗೆ ಜನೇವರಿ 7 ರಂದು ಮಹಾಲಿಂಗಪೂರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಶಿವಾನಂದ ಪಾಟೀಲ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಜಾಗೃತಿಗಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತೆ್ಯೀಕ ಎರಡು ಜೊ್ಯೀತಿರಥ ಯಾತ್ರೆ ನಡೆದು ಸಮಾಜದ ಜನತೆಗೆ ಜಾಗೃತಿ ನೀಡುವ ಜೊತೆಗೆ ಸಭೆಗಳು ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದರು.
ಜೊ್ಯೀತಿರಥಯಾತ್ರೆಯು ವೀರರಾಣಿ ಕಿತ್ತೂರ ಚನ್ನಮ್ಮನವರ ಬೃಹತ್ ಭಾವಚಿತ್ರ, ರಾಣಿ ಚನ್ನಮ್ಮನ ಭಂಟ ಸಂಗೋಳ್ಳಿ ರಾಯಣ್ಣ, ಬೆಳವಡಿ ವೀರ ವಡ್ಡರ ಯಲ್ಲಣ್ಣ, ಚೆನ್ನಮ್ಮನ ಅಂಗರಕ್ಷಕ ಅಮಟೂರ ಬಾಳಪ್ಪ, ಸೈನಿಕರಾದ ಸದರ್ಾರ ಗುರುಸಿದ್ದಪ್ಪ, ಬಿಚ್ಚಗತ್ತಿ ಬಸಪ್ಪ ನಾಯಕ, ವೀರ ದಾದಾಸಾಬ ವೀರ ಬಾಳು ನಾಯ್ಕ ಮತ್ತು ಅಕ್ಕ ಮಹಾದೇವಿ, ಕೆಳದಿ ಚನ್ನಮ್ಮಾ, ಬೆಳವಡಿ ಮಲ್ಲಮ್ಮ ಮತ್ತಿತರ ರಾಷ್ಟ್ರ ಮಹನೀಯರ ಹಾಗೂ ಪಂಚಮಸಾಲಿ ಸಮಾಜದ ಆದರ್ಶ ಸಾಧಕರಿಂದ ಜೊ್ಯೀತಿ ರಥಯಾತ್ರೆ ಅಲಂಕೃತಗೊಂಡು ಜಿಲ್ಲೆಯಾದ್ಯಂತ ಸಂಚರಿಸಿ ಜನಜಾಗೃತಿ ಮೂಡಿಸಲಿದೆ ಎಂದರು.
ಜನೇವರಿ 6 ರಂದು ಬೆಳಿಗ್ಗೆ 9 ಗಂಟೆಗೆ ತೇರದಾಳದಿಂದ ಆರಂಭವಾಗುವ ಚನ್ನಮ್ಮ ವಿಜಯ ಜೊ್ಯೀತಿ ಯಾತ್ರೆಗೆ ದಿ. 7 ರಂದು ಬೆಳಿಗ್ಗೆ 10 ಗಂಟೆಗೆ ಮಹಾಲಿಂಗಪೂರ ಪಂಚಮಸಾಲಿ ಸಮುದಾಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಉದ್ಘಾಟಿಸಿ ಅಧಿಕೃತವಾಗಿ ಚಾಲನೆ ನೀಡಲಿದ್ದು ಜನೇವರಿ 22 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ದಿ. 7 ರಂದು ಮಧ್ಯಾಹ್ನ 3 ಗಂಟೆಗೆ ಸಸಾಲಟ್ಟಿ, ಸಂಜೆ 6 ಗಂಟೆಗೆ ರಬಕವಿ, ದಿ. 8 ರಂದು ಬೆಳಿಗ್ಗೆ 10 ಗಂಟೆಗೆ ಮುಧೋಳ, ಸಂಜೆ 4 ಗಂಟೆಗೆ ಲೋಕಾಪೂರ, ದಿ. 9 ರಂದು ಬೆಳಿಗ್ಗೆ 11 ಗಂಟೆಗೆ ಬದಾಮಿ, ಸಂಜೆ 4 ಗಂಟೆಗೆ ಗುಳೇದಗುಡ್ಡ, ದಿ. 10 ರಂದು ಬೆಳಿಗ್ಗೆ 10 ಗಂಟೆಗೆ ಬೀಳಗಿ, ಸಂಜೆ 3 ಗಂಟೆಗೆ ಬಾಗಲಕೋಟೆ ಸೇರಿದಂತೆ ಜನೇವರಿ 22 ರವರೆಗೆ ಎರಡು ಜ್ಯೋತಿ ರಥಯಾತ್ರೆಗಳು ನಗರ, ಗ್ರಾಮೀಣ ಭಾಗದಲ್ಲಿ ಪ್ರತೆ್ಯೀಕವಾಗಿ ಸಂಚರಿಸಿ ಜನಜಾಗೃತಿ ಮೂಡಿಸಲಿದೆ ಎಂದು ವಿವರಿಸಿದರು.
ಜನೇವರಿ 19 ರಂದು ಹುನಗುಂದದಲ್ಲಿ ಹಾಗೂ 20 ರಂದು ಇಲಕಲ್ಲದಲ್ಲಿ ಪಂಚ ಸೈನ್ಯ ಯುವಕರಿಂದ ಬೃಹತ್ ಬೈಕ್ ರ್ಯಾಲಿ, ಜನೇವರಿ 22 ರಂದು ಹುನಗುಂದದಲ್ಲಿ ರಾಷ್ಟ್ರಮಾತೆ ಕಿತ್ತೂರ ಚನ್ನಮ್ಮನವರ ವಿಜಯೋತ್ಸವದ ಭವ್ಯ ಮೆರವಣಿಗೆ ಜರುಗಲಿದ್ದು, ನಂತರ ಹುನಗುಂದ ತಾಲೂಕಾ ಕ್ರೀಡಾಂಗಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಬೃಹತ್ ಸಮಾವೇಶ ನಡೆಯಲಿದೆ ಎಂದರು. ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೆ ಪಂಚಮಸಾಲ ಸಮಾಜದ ಸಾಧಕರಾದ ದಿ.ಪಿ.ಎಂ.ನಾಡಗೌಡರ ಹೆಸರಿನಲ್ಲಿ ಶಿಕ್ಷಣ, ಶಿವಸಂಗಪ್ಪ ಕಡಪಟ್ಟಿ ಹೆಸರಿನಲ್ಲಿ ರೈತ, ಎಸ್.ಆರ್.ಕಾಶಪ್ಪನವರ ಹೆಸರಿನಲ್ಲಿ ಸಮಾಜ ಸಂಘಟಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶ್ರೀಗಳು ತಿಳಿಸಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿಂಗಪ್ಪ ಕೋಟಿ, ಎಸ್.ಎಂ. ರಾಂಪೂರ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ರಾಜಕುಮಾರ ಬಾದವಾಡಗಿ, ಡಾ. ಶಿವಕುಮಾರ ಗಂಗಲ್, ಪಿ.ಎಸ್. ಕೊಕಟನೂರ, ಡಾ. ಪ್ರಕಾಶ ನರಗುಂದ, ಡಾ. ಶಿವಕುಮಾರ ಗಂಗದ, ಬಸವರಾಜ ಮನಗುಂಡಿ, ಅಮರೇಶ ನಾಗೂರ ಮತ್ತಿತರರು ಉಪಸ್ಥಿತರಿದ್ದರು.