ಬೆಂಗಳೂರು: ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಮಂಗಳವಾರ ಬಿಟೌನ್ ಎವರ್ ಗ್ರೀನ್ ಹೀರೋ ಅನಿಲ್ ಕಪೂರ್ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನಿಲ್ ಕಪೂರ್, ಚಂದನ್ ಶೆಟ್ಟಿ ಅವರ '3 ಪೆಗ್'ಗೆ ತಲೆ ಗಿರಗಿರ ಅಂದಿದೆ ಹಾಡಿಗೆ ರಶ್ಮಿಕಾ ಮಂದಣ್ಣ ಜೊತೆ ಸ್ಚೆಪ್ ಹಾಕಿದ್ದಾರೆ.
ಅನಿಲ್ ಕಪೂರ್ ಅವರಂತ ಲೆಜೆಂಡ್ ನಾಯಕರೊಡನೆ ವೇದಿಕೆ ಹಂಚಿಕೊಳ್ಳುವಾಗ ಮನಸಲ್ಲಿ ತಲ್ಲಣ ಉಂಟಾಯಿತು, ಅವರೊಂದಿಗೆ ನಾನು ವೇದಿಕೆ ಮೇಲಿದ್ದಾಗ ಓಹೋ ನಾನು ಸತ್ತೆ ಎಂದು ಅನಿಸುತ್ತದೆ. ಅವರ ಮುಂದೆ ನಾನು ಡ್ಯಾನ್ಸ್ ಮಾಡುವಾಗ ನಾನು ತುಂಬಾ ಆಶ್ಚರ್ಯಚಕಿತಳಾಗಿದ್ದೆ ಎಂದು ಹೇಳಿದ್ದಾರೆ.
ಇನ್ನೂ ಅನಿಲ್ ಕಪೂರ್ 2 ನಿಮಿಷಗಳ ಕಾಲ ತಮ್ಮ ಬಗ್ಗೆ ಪರಿಚಯ ಮಾಡಿಕೊಂಡರು,. ಇನ್ನು ಇದೇ ವೇಳೆ ಮಾತನಾಡಿದ ರಶ್ಮಿಕಾ, ನಾವು ಸೋನಂ ಕಪೂರ್ ಜನರೇಷನ್, ಅನಿಲ್ ಕಪೂರ್ ಅವರ ಹೆಚ್ಚಿನ ಸಿನಿಮಾಗಳನ್ನು ನೋಡಲು ಸಾಧ್ಯವಾಗಿಲ್ಲ, ಆದರೆ ಜನ ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ, ಅನಿಲ್ ಕಪೂರ್ ಜೀವಂತ ದಂತಕತೆ ಎಂದು ಹೇಳಿದರು. ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸದ್ಯ ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ.