ಕೊಪ್ಪಳ 22: ರಫೀ ಮೆಲೋಡಿ ಕೊಪ್ಪಳ ವತಿಯಿಂದ ಈದ್ ಮಿಲನ್ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ ಇದೇ ದಿ, 27 ರವಿವಾರ ಸಂಜೆ 5:30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದೆ.
ಸಮಾರಂಭದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಸಂಸದ ಕೆ ರಾಜಶೇಖರ ಹಿಟ್ನಾಳ್ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಸೈಯದ್ ಫೌಂಡೇಶನ್ ಅಧ್ಯಕ್ಷ ಕೆಎಂ ಸೈಯದ್ ಲ್ಯಾಂಡ್ ಡೆವಲಪರ್ ನಾಸಿರ್ ಹುಸೇನ್ ನಗರಸಭೆ ಮಾಜಿ ಸದಸ್ಯ ಎಂ ಪಾಷಾ ಮಾನ್ವಿ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಹುಸೇನ್ ಪೀರಾ ಮುಜಾವರ್ ಲ್ಯಾಂಡ್ ಡೆವಲಪರ್ ಜಾಕೀರ್ ಹುಸೇನ್ ಖಾನ್ ಕುಷ್ಟಗಿ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ಸಮಾಜದ ಮುಖಂಡ ವಜೀರ್ ಸಾಬ್ ದಪೇದಾರ್ ಅಲ್ಲದೆ ಸಂಘಟಕ ಸೈಯದ್ ಇಮಾಮ ಹುಸೇನ್ ಸಿಂದೋಗಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
ಸದರಿ ಈದ್ ಮಿಲನ್ ರಸಮಂಜರಿ ಕಾರ್ಯಕ್ರಮದಲ್ಲಿ ಕೊಪ್ಪಳದ ಗಾಯಕರಾದ ಮೊಹಮ್ಮದ್ ರಫಿ, ಭಾಷಾ ಹಿರೇಮನಿ ಕಿನ್ನಾಳ ಮತ್ತು ದಾವುದ್ ಹುನಗುಂದ್ ಸೇರಿದಂತೆ ಮಹಿಳಾ ಗಾಯಕಿಯರು ಹಾಸ್ಯ ಕಲಾವಿದರು ಪಾಲ್ಗೊಂಡು ತಮ್ಮ ಗಾಯನದ ಮೂಲಕ ಜನಮನ ರಂಜಿಸಲಿದ್ದಾರೆ ಎಂದು ರಫಿ ಮೆಲೋಡಿಸ್ ಕೊಪ್ಪಳದ ಸಮಸ್ತ ಕಲಾವಿದರು ಪ್ರಕಟಣೆ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.