ಲೋಕದರ್ಶನರವದಿ
ರಾಣೇಬೆನ್ನೂರು01: ಬೆಳ್ಳುಳ್ಳಿ ಬೆಲೆ ದಿಢೀರನೆ ಕುಸಿತಕ್ಕೆ ಆಕ್ರೋಶಗೊಂಡ ರೈತರು, ಇಲ್ಲಿನ ಹಲಗೇರಿ ರಸ್ತೆಯ ನೆಹರು ಮಾರುಕಟ್ಟೆಯಲ್ಲಿ ರವಿವಾರ ಬೆಳ್ಳುಳ್ಳಿ ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕಾ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ನೆರೆಹಾವಳಿಯಂದ ತಾಲೂಕಿನ ರೈತರು ಸಾಕಷ್ಟು ಹಾನಿ ಅನುಭವಿಸಿ ಇದೀಗ ಅಳಿದುಳಿದ ಬೆಳ್ಳುಳ್ಳಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚಿನ ಬೆಲೆ ದೊರೆಯುತ್ತಿರುವ ಕಾರಣ ರೈತರು ನಿಟ್ಟುಸಿರು ಬಿಡುವಂತಾಗಿತ್ತು ಎಂದರು,
ಆದರೆ ದಲಾಲರ ಕುಮ್ಮಕ್ಕಿನನಿಂದ ವ್ಯಾಪಾರಸ್ತರು ಬೆಳಗಾವಿ, ಬೈಲಹೊಂಗಲ್, ಬಾಗಲಕೋಟೆ ಸೇರಿದಂತೆ ಹೊರಗಡೆಯಿಂದ ಇಲ್ಲಿನ ಎಪಿಎಂಸಿ ನೆಹರು ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕವಾದ ಕಾರಣ ದಿಢೀರನೆ ಬೆಲೆ ಕುಸಿತವಾಗಿ ಸ್ಥಳಿಯ ರೈತರ ಬೆಳ್ಳುಳ್ಳಿಯನ್ನು ಖರೀದಿದಾರರ ಬೇಡಿಕೆ ಇಲ್ಲದಂತಾಗಿ ರೈತರು ಆಕ್ರೋಶಕ್ಕೆ ಕಾರಣವಾಯಿತು ಎಂದರು.
ಕಳೆದ ವಾರ ಮಾರುಕಟ್ಟೆಯಲ್ಲಿ 8.5 ಸಾವಿರವಾಗಿದ್ದ ಬೆಲೆ ಇಂದು 6.5 ಸಾವಿರಕ್ಕೆ ಕುಸಿಯಿತು, ಅದೂ ಸಹ ಸ್ಥಳೀಯ ರೈತರ ಬೆಳ್ಳುಳ್ಳಿಯನ್ನು ಖರೀದಿದಾರರು ಬೇಡಿಕೆ ಇಲ್ಲದಾಗ ರೈತರು ಪ್ರತಿಭಟನೆಗೆ ಮುಂದಾಗಬೇಕಾಯಿತು. ಯಾವುದೇ ಕಾರಣಕ್ಕೂ ಬೆರೆಕಡೆಯಿಂದ ದಲಾಲರು ಮಾರುಕಟ್ಟೆಗೆ ತರಲು ಮುಂದಾಗಬಾರದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಕಳಸದ, ಮಾಜಿ ಅಧ್ಯಕ್ಷ ಬಸವರಾಜ ಸವಣೂರ, ಸದಸ್ಯ ಬಸವರಾಜ ಹುಲ್ಲತ್ತಿ, ರಮೇಶ ಲಮಾಣಿ, ಎಪಿಎಂಸಿ ಅಧಿಕಾರಿಗಳಾದ ಮಲ್ಲಿಕಾಜರ್ುನ ಎ.ಕೆ, ಪರಮೇಶ್ವರ ನಾಯಕ, ಮಂಜುನಾಥ ಎನ್ ಆಗಮಿಸಿ ರೈತರು ಮತ್ತು ದಲಾಲರ ನಡುವೆ ಮಾತನಾಡಿ ಸಂದಾನದ ಮೂಲಕ ಸಮಸ್ಯ ಇತ್ಯರ್ಥ ಪಡಿಸಲು ಸಫಲರಾದ ಪ್ರಯುಕ್ತ ಪ್ರತಿಭಟನೆ ಹಿಂಪಡೆಯಲಾಯಿತು.ಬೀರೇಶ ಬುಳ್ಳಪ್ಪನವರ, ಪರುಶರಾಮ ಹಲವಾಗಲ, ಗಣೇಶ ಬುಳ್ಳಪ್ಪನವರ, ನಾಗಪ್ಪ ಗೌಡ್ರ, ಗುಡ್ಡಪ್ಪ ಬಾತಪ್ಪನವರ ಸೇರಿದಂತೆ ನೂರಾರು ರೈರತರು ಪ್ರತಿಭಟನೆಯಲ್ಲಿ ಇದ್ದರು.ಪ್ರತಿಕ್ರಿಯೆ: ಪ್ರತಿ ವಾರ ಮಾರುಕಟ್ಟೆಗೆ ಬೆಳ್ಳುಳ್ಳಿ 2 ಸಾವಿರ ಚೀಲ ಆವಕ ಬೇಕು, ಪ್ರಸ್ತುತ ಸ್ಥಳೀಯ ರೈತರಿಂದ 200 ಚೀಲ ಆವಕವಾಗುತ್ತಿದ್ದು, ಗ್ರಾಹಕರಿಗೆ ಬೆಳ್ಳುಳ್ಳಿ ಬಿಸಿ ತುಪ್ಪವಾಗಿ ಸೇವಿಸಲು ಆಗದೆ ಬಿಡಲೂ ಆಗದೆ ಪರಿತಪಿಸುವಂತಾದ ಕಾರಣ ಹೊರಗಡೆಯಿಂದ ಗ್ರಾಹಕರ ಬೇಡಿಕೆ ಸರಿದೂಗಿಸಲು 1 ಸಾವಿರ ಚೀಲ ತರಿಸಲಾಗಿದ್ದು, ಅಲ್ಲಿಯವರೂ ಕೂಡ ರೈತರಲ್ಲವೇ, ಈಗ ರೈತರ ಆಕ್ರೋಸಕ್ಕೆ ಬಲಿಯಾಗಿ ಸುಮಾರು 30 ಲಕ್ಷ ರೂ.ಗಳ ಬೆಳ್ಳುಳ್ಳಿ ರಸ್ತೆಗೆ ಬಿದ್ದು ಹಾನಿಯಾಗಿದೆ ನಮ್ಮ ಹಾನಿ ಯಾರ ಮುಂದೆ ಹೇಳಬೇಕು ಎಂದು ಬೇಸರ ವ್ಯೆಕ್ತ ಪಡಿಸಿದ ಕೊಟ್ಟೂರೇಶ್ವರ ಟೇಡರ್ಸ ಮಾಲಿಕ ಚಂದ್ರಶೇಖರ ಅಜ್ಜೇವಡಿಮಠ ಮತ್ತು ಶಿವಬಸವ ಟ್ರೆಡರ್ಸ್ ಮಾಲಿಕ ಬಸವರಾಜ ಹುಲ್ಲತ್ತಿ, ಬಸೀರಸಾಬ್ ಹಲಗೇರಿ. ರಾಣಿಬೆನ್ನೂರ