ಕರೋನ ನಿಯಂತ್ರಣಕ್ಕೆ ಶೀಘ್ರ ಲಸಿಕೆ : ಹರ್ಷವರ್ಧನ್

ನವದೆಹಲಿ , ಮೇ 25,ದೇಶಾದ್ಯಂತ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು  ಇದೀಗ ಕೊರೋನಾಗೆ ನಾಲ್ಕು ಲಸಿಕೆ ದೇಶದಲ್ಲಿ  ಶೀಘ್ರವೇ ಕ್ಲಿನಿಕಲ್  ಟ್ರಯಲ್ ಹಂತಕ್ಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಕೊರೋನಾ ತಡೆಗಾಗಿ ಸಿದ್ಧಪಡಿಸಲಾಗಿರುವ 14 ಲಸಿಕೆಗಳ ಪೈಕಿ 4 ಲಸಿಕೆಗಳು ಶೀಘ್ರವೇ ಕ್ಲಿನಿಕಲ್ ಟ್ರಯಲ್  ಹಂತಕ್ಕೆ ಹೋಗಲಿವೆ ಎಂದು  ಸಚಿವರು ಹೇಳಿದ್ದಾರೆ.ವಿಶ್ವಾದ್ಯಂತ ಕೋವಿಡ್-19 ತಡೆಗೆ 100 ಕ್ಕೂ ಹೆಚ್ಚಿನ ಲಸಿಕೆಗಳು ವಿವಿಧ ಹಂತಗಳ ಪ್ರಯೋಗಗಳಲ್ಲಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ಪ್ರಯತ್ನಗಳಿಗೆ ಬೆಂಬಲ ನೀಡಿ  ಸಹಕರಿಸುತ್ತಿದೆ ಎಂದು ಸಚಿವರೂ ಹೇಳಿದ್ದಾರೆ.