ರೇಪ್ ಪ್ರಕರಣ; ಬಿಹಾರ ಸಚಿವೆ ರಾಜೀನಾಮೆ


ಪಾಟ್ನಾ 08: ಮುಜಾಫರ್ ಪುರ್ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪತಿಯ ವಿರುದ್ಧ ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವಮರ್ಾ ಸಚಿವೆ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. 

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆ ಸಮಾಲೋಚನೆ ನಡೆಸಿದ ಕೂಡಲೇ ಮಂಜು ವಮರ್ಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆಳವಣಿಗೆ ನಡೆದಿದೆ. 

ಬಿಹಾರದ ಮುಜಾಫರ್ ಪುರ್ ಪುನರ್ವಸತಿ ಕೇಂದ್ರದಲ್ಲಿನ ಸುಮಾರು 30ಕ್ಕೂ ಅಧಿಕಾರ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಅಲ್ಲದೇ ಈ ಪುನರ್ವಸತಿ ಕೇಂದ್ರ ನಡೆಸುತ್ತಿದ್ದ ವ್ಯಕ್ತಿಯ ಜೊತೆ ಸಚಿವೆ ಮಂಜು ವಮರ್ಾ ಅವರ ಪತಿ ನಿರಂತರವಾಗಿ ಸಂಪರ್ಕದಲ್ಲಿರುವುದು ಮೊಬೈಲ್ ಕರೆಗಳನ್ನು ಪರಿಶೀಲಿಸುವ ಮೂಲಕ ಖಚಿತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಪುನರ್ವಸತಿ ಕೇಂದ್ರ ನಡೆಸುತ್ತಿದ್ದ ವ್ಯಕ್ತಿ ಹಾಗೂ ವಮರ್ಾ ಪತಿ ನಡುವೆ ಈ ವರ್ಷದಲ್ಲಿ ಸುಮಾರು 17 ಬಾರಿ ಮೊಬೈಲ್ ನಲ್ಲಿ ಮಾತುಕತೆ ನಡೆದಿತ್ತು ಎಂಬುದಾಗಿ ಮೂಲಗಳು ವಿವರಿಸಿವೆ.